'ನಮ್ಮನೆ ಖುಷಿ ಎಂದು ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದ': ರಾಕಿಂಗ್ ದಂಪತಿ

ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅಕ್ಟೋಬರ್ 30 ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವನ್ನ ಸ್ವಾಗತಿಸಿದ್ದ ರಾಧಿಕಾ, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದ ಯಶ್ ದಂಪತಿ, ಎರಡನೇ ಮಗುವಿನ ಬಗ್ಗೆ ಸಂತಸ ಹಂಚಿಕೊಂಡರು. ರಾಕಿಂಗ್ ದಂಪತಿಗೆ ಶುಭಕೋರಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದರು.

ಈ ವೇಳೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ''ತುಂಬಾ ಖುಷಿ ಇದೆ. ಒಂದು ಕಂಪ್ಲೀಟ್ ಕುಟುಂಬ ಇದು. ಒಂದು ಗಂಡು, ಒಂದು ಹೆಣ್ಣು ದೇವರು ಕೊಟ್ಟಿದೆ. ಹಿರಿಯ ಆಶೀರ್ವಾದ, ಜನಗಳ ಆಶೀರ್ವಾದ ಎಲ್ಲವೂ ಸಂತಸ ತಂದಿದೆ. ಎಲ್ಲರಿಗೂ ಧನ್ಯವಾದ'' ಎಂದರು.

Yash and Radhika Pandith Happy About Second Child

''ರಾಧಿಕಾ ಪಂಡಿತ್ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಬಾರಿ ಹೆರಿಗೆ ಸಮಯದಲ್ಲಿ ನಾನು ಕಂಪ್ಲೀಟ್ ಆಗಿ ರಜೆ ತೆಗೆದುಕೊಂಡಿದ್ದೆ. ಅಕ್ಟೋಬರ್ ತಿಂಗಳಿಂದಲೇ ರಜೆ ಇದ್ದೆ. ಡಿಲವರಿ ಸಮಯದಲ್ಲೂ ನಾನು ಆಪರೇಷನ್ ಥಿಯೇಟರ್ ನಲ್ಲೇ ಇದ್ದೆ'' ಎಂದು ಅನುಭವ ಹಂಚಿಕೊಂಡರು.

''ಈ ಸಂಭ್ರಮವನ್ನ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅದುವೇ ನಮ್ಮ ಸಂಪದಾನೆ. ಮಕ್ಕಳು ಅನ್ನೋದೇ ಸಂತೋಷ. ಅದನ್ನ ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ. ಇನ್ನು ಮಗುವಿಗೆ ಹೆಸರಿಟ್ಟಿಲ್ಲ. ಮನೆಯವರ ಜೊತೆ ಮಾತನಾಡಿ ಎಲ್ಲವೂ ನಿರ್ಧರಿಸುತ್ತೇವೆ'' ಎಂದು ಖುಷಿ ಹಂಚಿಕೊಂಡರು.

ಬಳಿಕ ಮಾತನಾಡಿದ ರಾಧಿಕಾ ಪಂಡಿತ್ ''ತುಂಬಾ ಪ್ರೀತಿ ಮತ್ತು ಶುಭಾಶಯ ಬಂದಿದೆ. ಎಲ್ಲರಿಗೂ ಧನ್ಯವಾದ. ತಾಯ್ತನ ಎನ್ನುವುದು ಜೀವನದಲ್ಲಿ ಅತ್ಯುತ್ತಮ ಕ್ಷಣ. ಎರಡನೇ ಸಲ ನನಗೆ ಈ ಸಂಭ್ರಮ ಸಿಕ್ಕಿತ್ತು. ಎಲ್ಲವೂ ಆರಾಮಾಗಿ ಆಗಿದೆ. ವೈದ್ಯರಿಗೂ ವಿಶೇಷವಾದ ಧನ್ಯವಾದ'' ತಿಳಿಸಿದರು.

ಇದೇ ಸಂದರ್ಭದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮೊದಲ ಮಗು ಐರಾ ಮತ್ತು ರಾಧಿಕಾ ಅವರಿಗೆ ಹೆರಿಗೆ ಮಾಡಿದ ವೈದ್ಯರು ಸ್ವರ್ಣಲತಾ ಅವರು ಇದ್ದರು.

More from Filmibeat

English summary
Rocking star Yash and Radhika Pandit done press meet after her discharge from hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X