'ಅಂಬಿ' ಸಿನಿಮಾ ನೋಡಿದ ಯಶ್, ರಾಧಿಕಾ, ಪ್ರೇಮ್ ಫುಲ್ ಖುಷ್
Recommended Video

ರೆಬೆಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವಯಸ್ಸಿನಲ್ಲಿ ಮಾಡಿರುವ ಮೋಡಿ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ರೆ, ಸುದೀಪ್ ಅವರ ಸರ್ಪ್ರೈಸ್ ಪ್ಯಾಕೇಜ್ ಗೆ ಬೋಲ್ಡ್ ಆಗಿದ್ದಾರೆ.
ಅಂಬರೀಶ್ ಅವರ ಕೊನೆಯ ಸಿನಿಮಾ ಎಂದು ಬಿಂಬಿತವಾಗಿರುವ ಕಾರಣದಿಂದ ಇಂಡಸ್ಟ್ರಿಯಲ್ಲಿರುವ ಬಹುತೇಕರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.
ಈ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್ ಜೊತೆ ಅಂಬಿ ಸಿನಿಮಾ ನೋಡಿದ್ರೆ, ಸ್ಟಾರ್ ಡೈರೆಕ್ಟರ್ ಪ್ರೇಮ್ ಕೂಡ ಅಂಬಿಯನ್ನ ಕಣ್ತುಂಬಿಕೊಂಡಿದ್ದಾರೆ. ಹಾಗಿದ್ರೆ, ಈ ಸ್ಟಾರ್ ನಟರಿಗೆ ಅಂಬಿ ಸಿನಿಮಾದಲ್ಲಿ ಏನ್ ಇಷ್ಟ ಆಯ್ತು ಎಂದು ನೋಡೋಣ. ಮುಂದೆ ಓದಿ....
ಯಶ್ ಅಭಿಪ್ರಾಯ
''ತುಂಬಾ ಖುಷಿ ಆಯ್ತು. ಅಂಬರೀಶ್ ಅವರನ್ನ ಸ್ಕ್ರೀನ್ ಮೇಲೆ ನೋಡೋಕೆ ಒಂದು ಕಳೆ. ಎಷ್ಟು ಚೆನ್ನಾಗಿ ಆ ಪಾತ್ರದೊಳಗೆ ಆವರಿಸಿದ್ದಾರೆ. ನಿರ್ದೇಶಕರು ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಅವರಿಗೋಸ್ಕರವೇ ಈ ಸಿನಿಮಾ ಮಾಡಿದ್ದಾರೆ ಅನಿಸುತ್ತೆ. ತುಂಬಾ ಫರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ವಯಸ್ಸಿನಲ್ಲಿ ಆ ಮುಗ್ದ ಅಭಿನಯದ ನೋಡೋಕೆ ಮಜಾ'' ಎಂದು ಯಶ್ ಖುಷಿ ವ್ಯಕ್ತಪಡಿಸಿದ್ದಾರೆ.
ಡೈರೆಕ್ಟರ್ ಪ್ರೇಮ್ ಕಂಡ ಅಂಬಿ
''ಈ ವಯಸ್ಸಿನಲ್ಲಿ ಲವ್ ಸ್ಟೋರಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಸುದೀಪ್ ಅವರ ಸೀನ್ ಆದ್ಮೇಲೆ ನನಗೆ ತುಂಬಾ ಇಷ್ಟ ಆಯ್ತು. ಆ ವಯಸ್ಸಿನಲ್ಲಿ ಬೆಡ್ ಶೀಟ್ ಹಾಕ್ಕೊಂಡು ಮೆಸೆಜ್ ಮಾಡೋದು, ಕುಡಿದು ಅವರ ಮನೆ ಹತ್ರಾ ಹೋಗಿ ಬಾಗಿ ತಟ್ಟುವುದು ಎಲ್ಲವೂ ಖುಷಿ ಕೊಡುತ್ತೆ ಎಂದು'' ಪ್ರೇಮ್ ಹೇಳಿಕೊಂಡರು.
ಅಂಬಿಗೆ ವಯಸ್ಸಾಗಿಲ್ಲ
''ಅವರಿಗೂ ನಿಜವಾಗಲೂ ವಯಸ್ಸಾಗಿಲ್ಲ. ಸಿನಿಮಾ ನೋಡಿಲ್ಲ ಅವರನ್ನ ನೋಡ್ತಿದ್ದೆ. ಅಳಿಸ್ತಾರೆ, ನಗಿಸ್ತಾರೆ, ತುಂಬಾ ಮಜಾ ಕೊಡ್ತಾರೆ. ದಿಲೀಪ್ ರಾಜ್, ಸುದೀಪ್, ಶ್ರುತಿ, ಸುಹಾಸಿನಿ ಅವರು ಎಲ್ಲರೂ ತುಂಬಾ ಚೆನ್ನಾಗಿ ಕಾಣ್ತಾರೆ. ಕಂಪ್ಲೀಟ್ ಇದು ಅಂಬರೀಶಣ್ಣನ ಸಿನಿಮಾ'' ರಾಧಿಕಾ ಪಂಡಿತ್
ತಮಿಳು ನಟ ಶರತ್ ಕುಮಾರ್ ಖುಷಿ
ಇನ್ನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನ ವೀಕ್ಷಿಸಿದ ತಮಿಳು ನಟ ಶರತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ. ''ಇಂದಿನ ಯುವಕರು ಅಂಬರೀಶ್ ಅವರನ್ನ ನೋಡಿ ತುಂಬಾ ಕಲಿಯಬೇಕಿದೆ. ಸಿನಿಮಾ ನೋಡು ನೋಡುತ್ತಲೇ ಮುಗಿದು ಹೋಯಿತು. ಇನ್ನು ಬೇಕಿತ್ತು ಅಲ್ವಾ ಎನ್ನುವಷ್ಟು ಚೆನ್ನಾಗಿದೆ'' ಎಂದರು.


Click it and Unblock the Notifications











