twitter
    For Quick Alerts
    ALLOW NOTIFICATIONS  
    For Daily Alerts

    'ಅಂಬಿ' ಸಿನಿಮಾ ನೋಡಿದ ಯಶ್, ರಾಧಿಕಾ, ಪ್ರೇಮ್ ಫುಲ್ ಖುಷ್

    |

    Recommended Video

    Ambi Ning Vayasaaytho : ಅಂಬಿ ಸಿನಿಮಾ ನೋಡಿ ರಾಧಿಕಾ, ಪ್ರೇಮ್ ಹೇಳಿದ್ದೇನು.! | FILMIBEAT KANNADA

    ರೆಬೆಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವಯಸ್ಸಿನಲ್ಲಿ ಮಾಡಿರುವ ಮೋಡಿ ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ರೆ, ಸುದೀಪ್ ಅವರ ಸರ್ಪ್ರೈಸ್ ಪ್ಯಾಕೇಜ್ ಗೆ ಬೋಲ್ಡ್ ಆಗಿದ್ದಾರೆ.

    ಅಂಬರೀಶ್ ಅವರ ಕೊನೆಯ ಸಿನಿಮಾ ಎಂದು ಬಿಂಬಿತವಾಗಿರುವ ಕಾರಣದಿಂದ ಇಂಡಸ್ಟ್ರಿಯಲ್ಲಿರುವ ಬಹುತೇಕರು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

    ಅಂಬಿ ಚಿತ್ರದಲ್ಲಿ ಪ್ರಿಯಾ ಸುದೀಪ್ ಮೆಚ್ಚಿಕೊಂಡ ಅಂಶಗಳಿವು ಅಂಬಿ ಚಿತ್ರದಲ್ಲಿ ಪ್ರಿಯಾ ಸುದೀಪ್ ಮೆಚ್ಚಿಕೊಂಡ ಅಂಶಗಳಿವು

    ಈ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಡದಿ ರಾಧಿಕಾ ಪಂಡಿತ್ ಜೊತೆ ಅಂಬಿ ಸಿನಿಮಾ ನೋಡಿದ್ರೆ, ಸ್ಟಾರ್ ಡೈರೆಕ್ಟರ್ ಪ್ರೇಮ್ ಕೂಡ ಅಂಬಿಯನ್ನ ಕಣ್ತುಂಬಿಕೊಂಡಿದ್ದಾರೆ. ಹಾಗಿದ್ರೆ, ಈ ಸ್ಟಾರ್ ನಟರಿಗೆ ಅಂಬಿ ಸಿನಿಮಾದಲ್ಲಿ ಏನ್ ಇಷ್ಟ ಆಯ್ತು ಎಂದು ನೋಡೋಣ. ಮುಂದೆ ಓದಿ....

    ಯಶ್ ಅಭಿಪ್ರಾಯ

    ''ತುಂಬಾ ಖುಷಿ ಆಯ್ತು. ಅಂಬರೀಶ್ ಅವರನ್ನ ಸ್ಕ್ರೀನ್ ಮೇಲೆ ನೋಡೋಕೆ ಒಂದು ಕಳೆ. ಎಷ್ಟು ಚೆನ್ನಾಗಿ ಆ ಪಾತ್ರದೊಳಗೆ ಆವರಿಸಿದ್ದಾರೆ. ನಿರ್ದೇಶಕರು ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಅವರಿಗೋಸ್ಕರವೇ ಈ ಸಿನಿಮಾ ಮಾಡಿದ್ದಾರೆ ಅನಿಸುತ್ತೆ. ತುಂಬಾ ಫರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ವಯಸ್ಸಿನಲ್ಲಿ ಆ ಮುಗ್ದ ಅಭಿನಯದ ನೋಡೋಕೆ ಮಜಾ'' ಎಂದು ಯಶ್ ಖುಷಿ ವ್ಯಕ್ತಪಡಿಸಿದ್ದಾರೆ.

    ವಯಸ್ಸಾದ ಅಂಬಿಯ ಚಾರ್ಮ್ ನೋಡಿ ಮನಸೋತ ವಿಮರ್ಶಕರು.!ವಯಸ್ಸಾದ ಅಂಬಿಯ ಚಾರ್ಮ್ ನೋಡಿ ಮನಸೋತ ವಿಮರ್ಶಕರು.!

    ಡೈರೆಕ್ಟರ್ ಪ್ರೇಮ್ ಕಂಡ ಅಂಬಿ

    ''ಈ ವಯಸ್ಸಿನಲ್ಲಿ ಲವ್ ಸ್ಟೋರಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಸುದೀಪ್ ಅವರ ಸೀನ್ ಆದ್ಮೇಲೆ ನನಗೆ ತುಂಬಾ ಇಷ್ಟ ಆಯ್ತು. ಆ ವಯಸ್ಸಿನಲ್ಲಿ ಬೆಡ್ ಶೀಟ್ ಹಾಕ್ಕೊಂಡು ಮೆಸೆಜ್ ಮಾಡೋದು, ಕುಡಿದು ಅವರ ಮನೆ ಹತ್ರಾ ಹೋಗಿ ಬಾಗಿ ತಟ್ಟುವುದು ಎಲ್ಲವೂ ಖುಷಿ ಕೊಡುತ್ತೆ ಎಂದು'' ಪ್ರೇಮ್ ಹೇಳಿಕೊಂಡರು.

    ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ

    ಅಂಬಿಗೆ ವಯಸ್ಸಾಗಿಲ್ಲ

    ''ಅವರಿಗೂ ನಿಜವಾಗಲೂ ವಯಸ್ಸಾಗಿಲ್ಲ. ಸಿನಿಮಾ ನೋಡಿಲ್ಲ ಅವರನ್ನ ನೋಡ್ತಿದ್ದೆ. ಅಳಿಸ್ತಾರೆ, ನಗಿಸ್ತಾರೆ, ತುಂಬಾ ಮಜಾ ಕೊಡ್ತಾರೆ. ದಿಲೀಪ್ ರಾಜ್, ಸುದೀಪ್, ಶ್ರುತಿ, ಸುಹಾಸಿನಿ ಅವರು ಎಲ್ಲರೂ ತುಂಬಾ ಚೆನ್ನಾಗಿ ಕಾಣ್ತಾರೆ. ಕಂಪ್ಲೀಟ್ ಇದು ಅಂಬರೀಶಣ್ಣನ ಸಿನಿಮಾ'' ರಾಧಿಕಾ ಪಂಡಿತ್

    'ಅಂಬಿ' ರಿಮೇಕ್ ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್.!'ಅಂಬಿ' ರಿಮೇಕ್ ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್.!

    ತಮಿಳು ನಟ ಶರತ್ ಕುಮಾರ್ ಖುಷಿ

    ಇನ್ನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನ ವೀಕ್ಷಿಸಿದ ತಮಿಳು ನಟ ಶರತ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ. ''ಇಂದಿನ ಯುವಕರು ಅಂಬರೀಶ್ ಅವರನ್ನ ನೋಡಿ ತುಂಬಾ ಕಲಿಯಬೇಕಿದೆ. ಸಿನಿಮಾ ನೋಡು ನೋಡುತ್ತಲೇ ಮುಗಿದು ಹೋಯಿತು. ಇನ್ನು ಬೇಕಿತ್ತು ಅಲ್ವಾ ಎನ್ನುವಷ್ಟು ಚೆನ್ನಾಗಿದೆ'' ಎಂದರು.

    English summary
    Rocking star Yash and wife radhika pandith and director prem has watched ambi ning vayassaytho movie.
    Sunday, September 30, 2018, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X