'KGF-2' ಚಿತ್ರೀಕರಣಕ್ಕೆ ರಾಕಿ ಭಾಯ್-ರೀನಾ ಎಂಟ್ರಿ: ಎಲ್ಲಿ ನಡೆಯುತ್ತಿದೆ ಶೂಟಿಂಗ್?

ರಾಕಿಂಗ್ ಸ್ಟಾರ್ ಯಶ್ ಸುಮಾರು 7 ತಿಂಗಳುಗಳ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇಡೀ ದೇಶವೆ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾದ ಚಿತ್ರೀಕರಣಕ್ಕೆ ರಾಕಿ ಭಾಯ್ ಎಂಟ್ರಿ ಕೊಡುತ್ತಿದ್ದು, ಗುರುವಾರದಿಂದ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಈಗಾಗಲೇ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಲಾಕ್ ಡೌನ್ ಬಳಿಕ ಶೂಟಿಂಗ್ ಪ್ರಾರಂಭವಾಗಿ ತಿಂಗಳ ಮೇಲಾಗಿದೆ. ಪಾರ್ಟ್-2ಗೆ ನಟ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಪ್ರಕಾಶ್ ರೈ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ರಾಕಿ ಭಾಯ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ವಿಶೇಷ ಎಂದರೆ ರಾಕಿ ಭಾಯ್ ಜೊತೆಗೆ ರೀನಾ ಕೂಡ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ನಟಿ ಶ್ರೀನಿಧಿ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಶಾಂತ್ ನೀಲ್-ಶ್ರೀನಿಧಿ

ವಿಮಾನ ನಿಲ್ದಾಣದಲ್ಲಿ ಪ್ರಶಾಂತ್ ನೀಲ್-ಶ್ರೀನಿಧಿ

ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ನಟಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣಕ್ಕೆ ಹೊರಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರಶಾಂತ್ ನೀಲ್ ಜೊತೆ ಕುಳಿತಿರುವ ಫೋಟೋ ಹಂಚಿಕೊಂಡು 8 ತಿಂಗಳ ಬಳಿಕ ಮತ್ತೆ ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಚಿತ್ರೀಕರಣ

ಮಂಗಳೂರಿನಲ್ಲಿ ಚಿತ್ರೀಕರಣ

ಅಂದ್ಹಾಗೆ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯುತ್ತಿದೆ. ಕರಾವಳಿ ಪ್ರದೇಶದಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ ಸಿನಿಮಾತಂಡ. ಮಂಗಳೂರಿನ ಕಡೆ ಪಯಣ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಬೆಂಗಳೂರಿನಲ್ಲೇ ಚಿತ್ರೀಕರಣ ಪ್ರಾರಂಭಮಾಡಿದ ಚಿತ್ರತಂಡ ಇದೀಗ ಮಂಗಳೂರಿಗೆ ಹೊರಟಿದೆ. ನಟ ಯಶ್ ಕೂಡ ಮಂಗಳೂರಿಗೆ ಪಯಣ ಬೆಳೆಸಿದ್ದಾರೆ.

ಅಕ್ಟೊಬರ್ ನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್

ಅಕ್ಟೊಬರ್ ನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್

ಇಡೀ ಭಾರತೀಯ ಸಿನಿಮಾ ಪ್ರಿಯರ ಗಮನ ಸೆಳೆದಿರುವ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಮುಗಿಸುವ ಪ್ಲಾನ್ ಮಾಡಿದೆಯಂತೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಯಶ್ ಮತ್ತು ಸಂಜಯ್ ದತ್ ಭಾಗದ ಚಿತ್ರೀಕರಣ ಬಾಕಿಯುಳಿದಿದೆ. ಸದ್ಯ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜಯ್ ದತ್ ಗುಣಮುಖರಾಗುತ್ತಿದ್ದಂತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಯಾವಾಗ ಎನ್ನುವ ಎನ್ನುವುದು ಗೊತ್ತಿಲ್ಲ.

Recommended Video

ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada
ದಸರಾ ಹಬ್ಬಕ್ಕೆ ಟೀಸರ್ ರಿಲೀಸ್ ಸಾಧ್ಯತೆ

ದಸರಾ ಹಬ್ಬಕ್ಕೆ ಟೀಸರ್ ರಿಲೀಸ್ ಸಾಧ್ಯತೆ

ಇಡೀ ದೇಶದ ಗಮನ ಸೆಳೆದಿರುವ ಕೆಜಿಎಫ್ ಸಿನಿಮಾ ದಸರಾ ಹಬ್ಬಕ್ಕೆ ರಿಲೀಸ್ ಆಗಲು ಸಿದ್ಧವಾಗಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ಸಿನಿಮಾ ಲೆಕ್ಕಾಚಾರ ತಲೆಕೆಳಗಾಗಿದೆ. ಸಿನಿಮಾ ರಿಲೀಸ್ ಆಗದಿದ್ದರೂ ಟೀಸರ್ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ದಸರಾ ಹಬ್ಬಕ್ಕೆ ಕೆಜಿಎಪ್-2 ಕಡೆಯಿಂದ ಭರ್ಜರಿ ಗಿಫ್ಟ್ ನ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

More from Filmibeat

English summary
Rocking star Yash and Srinidhi Shetty resume shoot for KGF Chapter 2. Srinidhi Shetty returns to Shooting After a 8 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X