'KGF- ಚಾಪ್ಟರ್ 3' ಬಗ್ಗೆ ಕ್ರಿಕೆಟಿಗ ಶುಭ್‌ಮನ್‌ ಗಿಲ್ ಪ್ರಶ್ನೆಗಳಿಗೆ ನಟ ಯಶ್ ಉತ್ತರ

ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ ಆಗಿದ್ದಾರೆ. ಹಾಗಂತ ಯಶ್ ಎಲ್ಲೂ ಹೋಗಿರಲಿಲ್ಲ. ಮಾಧ್ಯಮಗಳಿಂದ ದೂರ ಉಳಿದಿದ್ದರು. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಇಂಗ್ಲೀಷ್ ಮ್ಯಾಗಜೀನ್ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ.

'ಟಾಕ್ಸಿಕ್' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಫ್ಯಾನ್ಸ್ ಸುಸ್ತಾಗಿದ್ದಾರೆ. ಮುಹೂರ್ತದ ಫೋಟೊ, ವೀಡಿಯೋ ಹಂಚಿಕೊಂಡಿದ್ದು ಬಿಟ್ಟರೆ ಬಳಿಕ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸದ್ದಿಲ್ಲದೇ ನಯನತಾರಾ ಸೇರಿದಂತೆ ಕೆಲವರು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ವಿಷಯ ಗೊತ್ತಾಗಿತ್ತು. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲೇ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ.

Yash answered indian cricketer shubman gill s 2 questions about KGF-3

ಸದ್ಯ 'ಟಾಕ್ಸಿಕ್' ಸಿನಿಮಾ ಸೆಟ್‌ನಲ್ಲೇ 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಮ್ಯಾಗಜೀನ್‌ಗಾಗಿ ಫೋಟೊಶೂಟ್ ನಡೆದಿದೆ. ಯಶ್ ಸ್ಟೈಲಿಶ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಅಲ್ಲೇ ನಿರೂಪಕಿ ಅನುಪಮಾ ಚೋಪ್ರಾ ಜೊತೆ ಸಾಕಷ್ಟು ವಿಚಾರಗಳನ್ನು ಯಶ್ ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಜೊತೆಗೆ ತಮ್ಮ ವೈಯಕ್ತಿಯ ಜೀವನದ ಬಗ್ಗೆ ಎದುರಾದ ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಉತ್ತರಿಸಿದ್ದಾರೆ.

ಅನುಪಮಾ ಚೋಪ್ರಾ ತಮ್ಮ ಪ್ರಶ್ನೆಗಳ ಜೊತೆಗೆ ಯಶ್ ಬಳಿ ಕೇಳುವಂತೆ ಸೆಲೆಬ್ರೆಟಿಗಳು ಕೇಳಿರುವ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರ ಶುಬ್‌ಮನ್ ಗಿಲ್ ಕೇಳಿದ ಪ್ರಶ್ನೆಯನ್ನು ಯಶ್ ಮುಂದಿಟ್ಟಿದ್ದು ಅದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. 'KGF' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.

ರಾಕಿ ಭಾಯ್ ಆಗಿ ಯಶ್‌ಗೆ ಸಿಕ್ಕ ಕ್ರೇಜ್ ಅಷ್ಟಿಷ್ಟಲ್ಲ. ಹೊರ ರಾಜ್ಯಗಳಲ್ಲಿ ಅಷ್ಟೇ ಯಾಕೆ ವಿದೇಶಗಳಲ್ಲಿ ಕೂಡ ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಇದೀಗ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು 'ಟಾಕ್ಸಿಕ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಇನ್ನು ಬಾಲಿವುಡ್ ಅಂಗಳದಲ್ಲಿ 'ರಾಮಾಯಣ' ಚಿತ್ರಕ್ಕೆ ಕೈ ಹಾಕಿದ್ದಾರೆ.

'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ನಡುವೆ 'KGF- 3' ಯಾವಾಗ ಎನ್ನುವ ಪ್ರಶ್ನೆಯನ್ನು ಕೂಡ ಸಾಕಷ್ಟು ಜನ ಕೇಳುತ್ತಿದ್ದಾರೆ. 'KGF'-3 ಕ್ಲೈಮ್ಯಾಕ್ಸ್‌ನಲ್ಲೇ ಸರಣಿಯನ್ನು ಮುಂದುವರೆಸುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ ಯಾವಾಗ ಎನ್ನುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ ಆಗಿಬಿಟ್ಟಿದೆ. ಯಶ್ ಹಾಗೂ ಪ್ರಶಾಂತ್ ನೀಲ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಕಮೀಟ್‌ಮೆಂಟ್ ಮುಗಿಸಿ ಯಾವಾಗ ಮತ್ತೆ ಒಂದಾಗಿ ರಾಕಿ ಭಾಯ್ ಕಥೆ ಮುಂದುವರೆಸುತ್ತಾರೆ? ಎನ್ನುವುದು ಸಾಕಷ್ಟು ಜನರ ಪ್ರಶ್ನೆಯಾಗಿದೆ.

ಶುಭ್‌ಮನ್ ಗಿಲ್ 'KGF' ಸರಣಿ ಸಿನಿಮಾಗಳ ದೊಡ್ಟ ಅಭಿಮಾನಿ. ಅದರಲ್ಲೂ ರಾಕಿಭಾಯ್ ಪಾತ್ರ ಬಹಳ ಇಷ್ಟ. ಇದೇ ಕಾರಣಕ್ಕೆ 'KGF'-3 ಯಾವಾಗ ಎನ್ನುವ ಪ್ರಶ್ನೆಯನ್ನು ಯಶ್ ಬಳಿ ಕೇಳುವಂತೆ ಹೇಳಿದ್ದರಂತೆ. ಅದಕ್ಕೆ ಉತ್ತರಿಸಿದ ರಾಕಿಂಗ್ ಸ್ಟಾರ್ "ಖಂಡಿತ ಮಾತು ಕೊಟ್ಟಂತೆ 'KGF'-3 ಸಿನಿಮಾ ಬರುತ್ತದೆ. ಸದ್ಯಕ್ಕೆ ನಾನು 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳತ್ತ ಹೆಚ್ಚು ಗಮನ ಹರಿಸಿದ್ದೇನೆ. ಸಮಯ ಕೂಡಿ ಬಂದಾಗ ಖಂಡಿತ ಮಾಡ್ತೇನೆ. ಬಹಳ ದೊಡ್ಡದಾಗಿರುತ್ತದೆ" ಎಂದಿದ್ದಾರೆ.

"ನಾವು ಯಾವುದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲ್ಲ. ಬಹಳ ಪ್ರತಿಷ್ಟಾತ್ಮಕವಾಗಿಯೇ ಸಿನಿಮಾ ಮಾಡ್ತೀವಿ. ಅದು ಕಲ್ಟ್ ಸಿನಿಮಾ. ಜನ ಅದನ್ನು ಆ ರೀತಿ ಸೆಲೆಬ್ರೇಟ್ ಮಾಡಿದ್ದಾರೆ. ಶುಬ್‌ಮನ್‌ ಗಿಲ್ ರೀತಿಯ ಖ್ಯಾತ ಕ್ರಿಕೆಟರ್ ಸೇರಿದಂತೆ ಹಲವರು ಆಟಗಾರರು, ಕಲಾವಿದರು ನನ್ನನ್ನು ಕೇಳ್ತಿದ್ದಾರೆ. ಎಲ್ಲರೂ ಆ ಪಾತ್ರವನ್ನು ಆ ರೀತಿ ಒಪ್ಪಿಕೊಂಡಿದ್ದಾರೆ. ನಮಗೆ ಅದು ಗೊತ್ತು. ನಾನು- ಪ್ರಶಾಂತ್ ಮಾತನಾಡುತ್ತಲೇ ಇರ್ತೀವಿ. ದೊಡ್ಡದಾಗಿಯೇ ಬರ್ತೀವಿ" ಎಂದು ವಿವರಿಸಿದ್ದಾರೆ.

'KGF' ಹಾಗೂ 'ಸಲಾರ್' ಚಿತ್ರಗಳಿಗೆ ಏನಾದರೂ ಲಿಂಕ್ ಇದ್ಯಾ? ಎಂದು ಶುಭ್‌ಮನ್ ಗಿಲ್ ಕೇಳಿದ್ದಾರೆ ಎಂದಾಗ "ಇಲ್ಲ, ಅದೆಲ್ಲಾ ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೆ. ಎರಡೂ ಚಿತ್ರಗಳ ಕಥೆಗಳಿಗೆ ಯಾವುದೇ ಕನೆಕ್ಷನ್ ಇರಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. 'ಟಾಕ್ಸಿಕ್', 'ರಾಮಾಯಣ' ಬಳಿಕ 'KGF'-3 ಬರುತ್ತಾ? ಎಂದಿದ್ದಕ್ಕೆ "ಗೊತ್ತಿಲ್ಲ ಮುಂದೆ ನೋಡೋಣ, ಆ ಸಮಯ ಬಂದಾಗ ಹೇಳ್ತೀನಿ" ಎಂದು ಯಶ್ ತಿಳಿಸಿದ್ದಾರೆ.

More from Filmibeat

English summary
Indian cricketer shubman gill's interesting questions to Actor yash about kgf, salaar;
Read more about: yash kgf toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X