»   » ಕೆ ಜಿ ಎಫ್ ಚಿತ್ರ ಯಾಕೆ ಲೇಟ್ ಅನ್ನುವುದಕ್ಕೆ ಯಶ್ ಕೊಟ್ಟ ಉತ್ತರ

ಕೆ ಜಿ ಎಫ್ ಚಿತ್ರ ಯಾಕೆ ಲೇಟ್ ಅನ್ನುವುದಕ್ಕೆ ಯಶ್ ಕೊಟ್ಟ ಉತ್ತರ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಾರಿ ನಿರೀಕ್ಷೆ ಹುಟ್ಟಿಸಿರುವ 'ಕೆ ಜಿ ಎಫ್' ಸಿನಿಮಾದ ಟೀಸರ್ ಬಿಡುಗಡೆಗೆ ಕೌಟ್ ಡೌನ್ ಪ್ರಾರಂಭ ಆಗಿದೆ. ಚಿತ್ರದಲ್ಲಿ ನಟ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. 'ಉಗ್ರಂ' ಸಿನಿಮಾದ ನಂತರ ಪ್ರಶಾಂತ್ ನೀಲ್ ಕೆ ಜಿ ಎಫ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಿನಿಮಾದ ಬಹುಭಾಗದ ಚಿತ್ರೀಕರಣ ಮುಗಿದಿದ್ದು ಮೂಲಗಳ ಪ್ರಕಾರ ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಉಳಿಸಿಕೊಂಡಿದೆಯಂತೆ ಚಿತ್ರತಂಡ. ಜನವರಿ 8 ರಾಕಿಂಗ್ ಸ್ಟಾರ್ ಹುಟ್ಟುಹಬ್ಬವಿದ್ದು ಸಿನಿಮಾತಂಡ ಬರ್ತಡೇಗಾಗಿ ಕೆ ಜಿ ಎಫ್ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ.

 Yash answered why KGF movie was delaying to release

ಹೊಸ ವರ್ಷಕ್ಕೆ ಅಭಿಮಾನಿಯಿಂದ ರಾಕಿಂಗ್ ಸ್ಟಾರ್ ಗೆ ಸ್ಪೆಷಲ್ ಗಿಫ್ಟ್

ವರ್ಷದ ಪ್ರಾರಂಭ ದಿನವಾದ ಇಂದಿನಿಂದ(ಜನವರಿ 1) ಕೆ ಜಿ ಎಫ್ ಸಿನಿಮಾದ ಡಬ್ಬಿಂಗ್ ಕೆಲಸವನ್ನ ಶುರು ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇತ್ತೀಚಿಗಷ್ಟೇ ಕೆ ಜಿ ಎಫ್ ಚಿತ್ರೀಕರಣ ಯಾಕೆ ತಡವಾಗುತ್ತಿದೆ ಎನ್ನುವ ವಿಚಾರವಾಗಿ ಮಾತನಾಡಿದ ಯಶ್, 70 ರ ದಶಕದಲ್ಲಿ ನಡೆಯುವ ಕಥೆಯನ್ನ ಸಿನಿಮಾ ಮಾಡಲು ಮುಂದಾಗಿದ್ದೇವೆ. ಹಾಗಾಗಿ ಸೆಟ್ ಗಳನ್ನ ಹಾಕಿ ಚಿತ್ರೀಕರಣ ಮಾಡಲು ತಡವಾಗುತ್ತಿದೆ. "ಯಾವಾಗ ಬಂದ್ವಿ ಅನ್ನೋದು ಮುಖ್ಯ ಅಲ್ಲ ಹೇಗೆ ಬಂದ್ವಿ ಅನ್ನೋದು ಮುಖ್ಯ" ಎಂದಿದ್ದರು.

 Yash answered why KGF movie was delaying to release

ಇನ್ನು ಏಳು ದಿನ ಬಾಕಿ ಇರುವ ಯಶ್ ಹುಟ್ಟುಹಬ್ಬಕ್ಕಾಗಿ ಈಗಾಗಲೇ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೌಂಟ್ ಡೌನ್ ಪೋಸ್ಟರ್ ಗಳನ್ನ ಹಾಕಿ ವಾರಕ್ಕೂ ಮುಂಚೆಯೇ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರುತ್ತಿದ್ದಾರೆ. ಕಳೆದ ವರ್ಷ ಯಶ್ ಅಭಿನಯದ ಒಂದು ಚಿತ್ರವೂ ಬಿಡುಗಡೆ ಆಗಿರಲಿಲ್ಲ. ಆದರೆ ಈ ವರ್ಷ ಯಶ್ ಚಿತ್ರದ ಕೆಲಸ ವರ್ಷದ ಪ್ರಾರಂಭದಲ್ಲೇ ಶುರುವಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

English summary
Kannada actor Rocking star Yash replied why KGF movie was delaying to release, prashanth neel directing the KGF movie, srinidhi shetty female lead opposite yash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X