'ಗುಳ್ಟು' ಸಿನಿಮಾ ಮೆಚ್ಚಿದ ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ 'ಗುಳ್ಟು' ಸಿನಿಮಾವನ್ನ ನೋಡ್ತಾರೆ ಎಂದು ಹೇಳಿದ್ವಿ. ಅದರಂತೆ ಶುಕ್ರವಾರ ರಾಜಾಜಿನಗರದ ಒರಾಯನ್ ಮಾಲ್ ನಲ್ಲಿ ಯಶ್, ಗುಳ್ಟು' ಚಿತ್ರ ನೋಡಿದ್ದಾರೆ.
'ಗುಳ್ಟು' ಸಿನಿಮಾ ಬಿಡುಗಡೆಯಾದಗನಿಂದಲೂ ಚಿತ್ರದ ಬಗ್ಗೆ ಕೇಳಿ ಬರುತ್ತಿದ್ದ ಪಾಸಿಟೀವ್ ರೆಸ್ಪಾನ್ಸ್ ನೋಡಿ ಸ್ವತಃ ಯಶ್ ಕೂಡ ಈ ಚಿತ್ರವನ್ನ ನೋಡಲು ಕಾತುರದಿಂದ ಕಾಯುತ್ತಿದ್ದರು. ಈ ವಿಷ್ಯ ತಿಳಿದ ಚಿತ್ರತಂಡ ಯಶ್ ಅವರಿಗೆ ಸಿನಿಮಾ ತೋರಿಸಲು ಮುಂದಾಯ್ತು. ಅಂತಿಮವಾಗಿ ಸಿನಿಮಾ ನೋಡಿದ ಯಶ್ ಫುಲ್ ಥ್ರಿಲ್ ಆದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಕಿಂಗ್ ಸ್ಟಾರ್ ''ಈ ಕಾನ್ಸೆಪ್ಟ್ ಚೆನ್ನಾಗಿದೆ. ಜನ ಈಗ ಮೆಚ್ಚಿದ್ದಾರೆ, ಅದ್ರಲ್ಲೂ ಯೂತ್ಸ್ ಈ ಸಿನಿಮಾಗೆ ಹೆಚ್ಚು ಹೆಚ್ಚು ಬರ್ತಾ ಇದ್ದಾರೆ. ಆದ್ರೆ, ಗುಳ್ಟು ಸಿನಿಮಾ ಎಲ್ಲರೂ ವಯಸ್ಸಿನವರು ನೋಡಬೇಕಿರುವ ಸಿನಿಮಾ. ಇಂಥಹ ವಿಷಯವನ್ನೂ ಎಲ್ಲೂ ಬೋರ್ ಮಾಡಗಾದೆ ಪ್ರಸೆಂಟ್ ಮಾಡಿರುವ ಪ್ರಯತ್ನವನ್ನ ಮೆಚ್ಚಲೇಬೇಕು'' ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

''ಚಿತ್ರದ ಎಲ್ಲಾ ಕಲಾವಿದರೂ ತುಂಬಾನೇ ಶ್ರಮ ಪಟ್ಟು ಸಿನಿಮಾ ಮಾಡಿದ್ದಾರೆ. ನಿರ್ದೇಶಕರು ಇಂಥದ್ದೊಂದು ವಿಷಯ ಇಟ್ಕೊಂಡು ಸಿನಿಮಾ ಮಾಡೋದು ಸಿಂಪಲ್ ವಿಷಯ ಅಲ್ಲ. ಆದ್ರೂ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ, ಕ್ಯಾಮರಾ ವರ್ಕ್ ಆಗಿರಬಹುದು, ಮ್ಯೂಸಿಕ್ ಆಗಿರಬಹುದು ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್ ಮತ್ತು ಸೋನು ಗೌಡ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು, ಅವಿನಾಶ್ ಕೂಡ ಪ್ರಮುಖಸ ಪಾತ್ರಗಳನ್ನ ನಿರ್ವಹಿಸಿದ್ದರು. ಮಾರ್ಚ್ 30 ರಂದು ತೆರೆಕಂಡಿದ್ದ ಸಿನಿಮಾ ಮೂರುವಾರಗಳ ನಂತರವೂ ಅದೇ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ.
ಗುಳ್ಟು ಸಿನಿಮಾ ವಿಮರ್ಶೆ
ತಂದೆ-ತಾಯಿ ಇಲ್ಲದ ಅನಾಥ ಹುಡುಗ ಅಲೋಕ್ (ನವೀನ್ ಶಂಕರ್) ಬುದ್ಧಿವಂತ. ಬುಕ್ ಮೈ ಶೋ ವೆಬ್ ತಾಣವನ್ನೇ ಹ್ಯಾಕ್ ಮಾಡಿ, ಸ್ನೇಹಿತರಿಗೆ ಟಿಕೆಟ್ ಕೊಡಿಸುವಷ್ಟು ಚಾಣಾಕ್ಷ. ಎಂಜಿನಿಯರ್ ಪದವೀಧರ ಅಲೋಕ್ ಗೆ ಅನ್ ಲೈನ್ ಸ್ಟಾರ್ಟ್ ಅಪ್ ಪ್ರಾರಂಭ ಮಾಡುವ ಹಂಬಲ. ಆದ್ರೆ, ಅದಕ್ಕೆ ಬಂಡವಾಳ ಇಲ್ಲ. ಸಾಫ್ಟ್ ವೇರ್ ಕಂಪನಿಯಲ್ಲಿ ದುಡಿದು, ಟೀಮ್ ಲೀಡರ್ ಗೆ ಬಕೆಟ್ ಹಿಡಿದು, ಸಂಬಳ ಹೈಕ್ ಮಾಡಿಸಿಕೊಂಡು, ಹದಿನೈದು ವರ್ಷಗಳಲ್ಲಿ ಸಾಧಿಸುವುದಕ್ಕಿಂತ, ಮೂರೇ ವರ್ಷಕ್ಕೆ ಕೋಟ್ಯಾಧಿಪತಿ ಆಗಬೇಕು ಎಂಬ ಹಠ ಅಲೋಕ್ ಗೆ. ಇದಕ್ಕಾಗಿ ಆತ ಹಿಡಿಯುವ ವಾಮ ಮಾರ್ಗವೇ 'ಗುಳ್ಟು' ಸಿನಿಮಾ.


Click it and Unblock the Notifications











