'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ಸಾಯುವ ಮಾತನಾಡಿದ್ದರು
Recommended Video

'ಕೆಜಿಎಫ್' ಕನ್ನಡ ಚಿತ್ರರಂಗವನ್ನು ಒಂದು ಹಂತ ಮೇಲೆಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಹೌಸ್ ಫುಲ್ ಪ್ರದರ್ಶನಗಳು, ದೊಡ್ಡ ಕಲೆಕ್ಷನ್, ದಾಖಲೆ ಮೇಲೆ ದಾಖಲೆ ಹೀಗೆ 'ಕೆಜಿಎಫ್' ಸಿನಿಮಾ ಮುನ್ನುಗಿ ಸಾಗುತ್ತಿದೆ.
ಈ ಸಿನಿಮಾದ ಗೆಲುವಿನಲ್ಲಿ ದೊಡ್ಡ ಪಾಲು ಪಡೆಯುವವರು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಪ್ರಶಾಂತ್ ಬಗ್ಗೆ ಎಷ್ಟು ಕೇಳಿದರು ಕಡಿಮೆಯೇ. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವ ಕ್ಯಾಟೆಗರಿಗೆ ಸೇರುವ ಇವರು ಈ ಸಿನಿಮಾಗಾಗಿ ಮಾಡಿರುವ ಕೆಲಸ ಅಷ್ಟಿಷ್ಟಲ್ಲ.
ಇಂತಹ ಪ್ರತಿಭಾವಂತ ನಿರ್ದೇಶಕ 'ಕೆಜಿಎಫ್' ಸಿನಿಮಾ ಮಾಡದೆ ಇದ್ದರೆ ಸತ್ತು ಹೋಗುತ್ತೇನೆ ಎಂದಿದ್ದರಂತೆ. ಈ ಮಾತನ್ನು ಸ್ವತಃ ನಟ ಯಶ್ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸಕ್ಸಸ್ ಮೀಟ್ ಕಾರ್ಯಕ್ರಮ
ನಿನ್ನೆ 'ಕೆಜಿಎಫ್' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಇಡೀ 'ಕೆಜಿಎಫ್' ಚಿತ್ರತಂಡ ಭಾಗಿಯಾಗಿತ್ತು. ಕಲಾವಿದರು, ತಂತ್ರಜ್ಞರು ಹೀಗೆ ಸಿನಿಮಾದ ಗೆಲುವಿನ ಕಾರಣರಾದ ಎಲ್ಲರೂ ಸೇರಿದ್ದರು. ಈ ವೇಳೆ ಸಿನಿಮಾದ ಬಗ್ಗೆ ನಟ ಯಶ್ ಮಾತನಾಡಿದರು.

ನಟ ಯಶ್ ಮಾತು
''ಇದೊಂದು ಅದ್ಬುತ ಜರ್ನಿ. ನಾನು ಪ್ರಶಾಂತ್ ನಾಲ್ಕು ವರ್ಷ ಜೊತೆಗೆ ಇದ್ದೆವು. 'ಕೆಜಿಎಫ್' ಶುರು ಆಗುವುದಕ್ಕೆ ಮುಂಚೆ ನೀವು ಇನ್ನೊಂದು ಸಿನಿಮಾ ಮಾಡಿ ಈ ಚಿತ್ರ ತುಂಬ ಲೇಟ್ ಆಗುತ್ತದೆ. ಎಂದು ಹೇಳಿದ್ದೆ. ಆದರೆ, ಅವರು ನಾನು 'ಕೆಜಿಎಫ್' ಸಿನಿಮಾವನ್ನೇ ಮಾಡುವುದು. ಇದು ನನ್ನ ಕೊನೆ ಸಿನಿಮಾ ಆದರೂ ಪರವಾಗಿಲ್ಲ. ಈ ಸಿನಿಮಾ ಮಾಡದೆ ಇದ್ದರೆ ಸತ್ತು ಹೋಗುತ್ತೇನೆ ಎಂದಿದ್ದರು.'' ಎಂದು ಯಶ್ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರಶಾಂತ್ ಶ್ರದ್ಧೆಯನ್ನು ನೆನೆದ ಯಶ್
ಯಶ್ ಈ ಮಾತುಗಳನ್ನು ಹೇಳುವ ಮೂಲಕ ಪ್ರಶಾಂತ್ ನೀಲ್ ಅವರ ಶ್ರದ್ಧೆ, ಡೆಡಿಕೇಶನ್ ಅನ್ನು ನೆನೆದರು. ಈ ಮಟ್ಟದ ಪ್ಯಾಶನ್ ಇದ್ದರೇ ಮಾತ್ರ ಈ ರೀತಿಯ ದೊಡ್ಡ ಸಿನಿಮಾ ಮಾಡಲು ಸಾಧ್ಯ ಎಂದರು. ತಮ್ಮ ನಿರ್ದೇಶಕರ ಕೆಲಸವನ್ನು ಯಶ್ ಬಾಯಿ ತುಂಬ ಹೊಗಳಿದರು.

ಪ್ರಶಾಂತ್ ಎರಡೂ ಚಿತ್ರಗಳು ಹಿಟ್
'ಉಗ್ರಂ' ಸಿನಿಮಾದ ಮೂಲಕ ಇಂಡಸ್ಟ್ರಿಗೆ ಬಂದ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ಸಿನಿಮಾದಲ್ಲಿಯೇ ದೊಡ್ಡ ಹಿಟ್ ನೀಡಿದರು. ಅದೇ ರೀತಿ ಎರಡನೇ ಸಿನಿಮಾ 'ಕೆಜಿಎಫ್' ಮೂಲಕ ದೇಶ ಮಟ್ಟದಲ್ಲಿ ಹೆಸರು ಮಾಡಿದರು. ಈ ಚಿತ್ರದ ನಂತರ ಪ್ರಶಾಂತ್ 'ಕೆಜಿಎಫ್' ಚಾಪ್ಟರ್ 2 ಸಿನಮಾವನ್ನು ಶುರು ಮಾಡಲಿದ್ದಾರೆ.


Click it and Unblock the Notifications










