For Quick Alerts
  ALLOW NOTIFICATIONS  
  For Daily Alerts

  ಯಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ಸಂಭ್ರಮಿಸಿದ ಅಭಿಮಾನಿಗಳು

  |

  ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಯಶ್ ಹುಟ್ಟುಹಬಕ್ಕೆ ಮನೆಯ ಮುಂದೆ ಅಭಿಮಾನಿಗಳ ದಂಡೆ ನೆರೆದಿರುತ್ತಿತ್ತು. ಆದರೆ ಕೊರೊನಾ ಕಾರಣ ಈ ಬಾರಿ ಎಲ್ಲಿದ್ದೀರೋ ಅಲ್ಲಿಂದನೇ ವಿಶ್ ಮಾಡಿ ಎಂದು ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

  KGF 2 ಟೀಸರ್ ಬಿಡುಗಡೆಗೆ ಬಂದ ಯಶ್ ಅಭಿಮಾನಿಗಳ ದಂಡು | Yash | KGF | Filmibeat Kannada

  ಅದರೆ ಅಭಿಮಾನಿಗಳು ನೆಚ್ಚಿನ ನಟನ ಹಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅಭಿಮಾನೋತ್ಸವ ಹೆಸರಿನಲ್ಲಿ 'ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ'ದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಕೆಜಿಎಫ್-2 ಟೀಸರ್ ಪ್ರದರ್ಶನ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.

  ಯಶ್ ಗೆ ವಿಶ್ ಮಾಡಿದ ಹೃತಿಕ್ ರೋಷನ್; ಒಟ್ಟಿಗೆ ಸಿನಿಮಾ ಮಾಡುವ ಸುಳಿವು ನೀಡಿದ್ರಾ ಗ್ರೀಕ್ ಗಾಡ್?

  ಯಶ್ ಕಟೌಟ್ ನಿಲ್ಲಿಸಿ, ಹೂವಿನ ಹಾರಗಳಿಂದ ತುಂಬಿಸಿದ್ದಾರೆ. ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಅನ್ನದಾನ ಮತ್ತು ಸಿಹಿ ಹಂಚಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವಿಶೇಷ ಎಂದರೆ ಅಭಿಮಾನಿಗಳ ಈ ಕಾರ್ಯಕ್ರಮಕ್ಕೆ ಕೆಜಿಎಫ್ ಖ್ಯಾತಿಯ ಗರುಡ ಅತಿಥಿಯಾಗಿ ಭಾಗಿಯಾಗಿದ್ದರು.

  ರಾಜ್ಯದ ನಾನಾಭಾಗಗಳಲ್ಲಿ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ಯಶ್ ದರ್ಶನ ಸಿಗದಿದ್ದರು, ನೆಚ್ಚಿನ ನಟನ ಜನ್ಮದಿನಾಚರಣೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

  ಈ ಬಾರಿ ಯಶ್ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ. ಕುಟುಂಬದವರು ಮತ್ತು ಕೆಜಿಎಫ್ ತಂಡದ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  English summary
  Rocking star Yash Birthday Celebrations By his fans in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X