Just In
Don't Miss!
- News
ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಚಂದ್ರಶೇಖರ್ ಮಾದರಿ ಕೆಲಸ!
- Sports
ಐಪಿಎಲ್ 2021: ಸಿಎಸ್ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ
- Automobiles
ಒಂದು ಗಂಟೆಯಲ್ಲಿ ಈ ಬುಲೆಟ್ ಥಾಲಿಯನ್ನು ತಿಂದು ಮುಗಿಸುವವರಿಗೆ ಸಿಗಲಿದೆ ಬುಲೆಟ್ ಬೈಕ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋಗಳು; KGF ತಂಡದ ಜೊತೆ ಯಶ್ ಹುಟ್ಟುಹಬ್ಬದ ಆಚರಣೆ
ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಯಶ್ ಹುಟ್ಟುಹಬಕ್ಕೆ ಮನೆಯ ಮುಂದೆ ಅಭಿಮಾನಿಗಳ ದಂಡೆ ನೆರೆದಿರುತ್ತಿತ್ತು. ಆದರೆ ಕೊರೊನಾ ಕಾರಣ ಈ ಬಾರಿ ಎಲ್ಲಿದ್ದೀರೋ ಅಲ್ಲಿಂದನೇ ವಿಶ್ ಮಾಡಿ ಎಂದು ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಈ ಬಾರಿ ಯಶ್ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ. ಜನ್ಮದಿನಾಚರಣೆ ಸರಳವಾಗಿದ್ದರೂ, ಕೆಜಿಎಫ್-2 ಟೀಸರ್ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಯಶ್ ಗೆ ವಿಶ್ ಮಾಡಿದ ಹೃತಿಕ್ ರೋಷನ್; ಒಟ್ಟಿಗೆ ಸಿನಿಮಾ ಮಾಡುವ ಸುಳಿವು ನೀಡಿದ್ರಾ ಗ್ರೀಕ್ ಗಾಡ್?
ರಾಕಿಭಾಯ್ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಸಿನಿಜೀವನದ ದಿಕ್ಕನ್ನೇ ಬದಲಾಯಿಸಿದ ಕೆಜಿಎಫ್ ತಂಡದ ಜೊತೆ ರಾಕಿಂಗ್ ಸ್ಟಾರ್ ಯಶ್ ರಾತ್ರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಜಿಎಫ್ ಟೀಂ
ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ ವಿಜಯ್ ಕಿರಗಂದೂರು, ಛಾಯಾಗ್ರಾಹಕ ಭುವನ್ ಗೌಡ, ಮಫ್ತಿ ನಿರ್ದೇಶಕ ನರ್ತನ್ ಸೇರಿದಂತೆ ಇಡೀ ತಂಡ ಹುಟ್ಟುಹಬ್ಬದ ಆಚರಣೆಯಲ್ಲಿ ಹಾಜರಿದ್ದರು. ಕೇಕ್ ಕತ್ತರಿಸುವ ಮೂಲಕ ಯಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ.

ಪ್ರಶಾಂತ್ ನೀಲ್ ವಿಶ್ ಹೀಗಿದೆ
ಹುಟ್ಟುಹಬ್ಬ ಆಚರಿಸಿ ನಿರ್ದೇಶಕ ಪ್ರಶಾಂತ್ ನೀಲ್, ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ. 'ಜನ್ಮದಿನದ ಶುಭಾಶಯಗಳು ನನ್ನ ರಾಕಿ ಭಾಯ್, ಇತಿಹಾಸ ಮತ್ತೆ ಮರುಕಳಿಸುತ್ತೆ. ನಮ್ಮೊಂದಿಗೆ ಮುಂದುವರೆಯುತ್ತೆ' ಎಂದು ಬರೆದುಕೊಂಡಿದ್ದಾರೆ.
ನಟ ಯಶ್ ಹುಟ್ಟುಹಬ್ಬ: ಪತ್ನಿಯೊಂದಿಗೆ ಸರಳವಾಗಿ ಆಚರಿಸಿದ ಯಶ್

ನಿರ್ಮಾಪಕ ವಿಜಯ್ ಕಿರಗಂದೂರ್ ವಿಶ್
ಇನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ವಿಶ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಯಶ್. ಮತ್ತೊಂದು ಅದ್ಭುತ ವರ್ಷ ನಿಮಗಾಗಿ ಕಾಯುತ್ತಿದೆ. ದೇವರು ಒಳ್ಳೆದು ಮಾಡಲಿ' ಎಂದು ಹೇಳಿದ್ದಾರೆ.

ರಾಕಿ ಭಾಯ್ ಗೆ ಹರಿದು ಬರುತ್ತಿದೆ ಶುಭಾಶಯಗಳ ಸುರಿಮಳೆ
ಅಂದಹಾಗೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ರಾಕಿ ಭಾಯ್ ಗೆ ಬೇರೆ ಬೇರೆ ಚಿತ್ರರಂಗದ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ಕಲಾವಿದರು ರಾಕಿಂಗ್ ಸ್ಟಾರ್ ಗೆ ಶುಭಾಶಯ ತಿಳಿಸುತ್ತಿದ್ದಾರೆ.

ಹೃತಿಕ್ ರೋಷನ್ ವಿಶ್
ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಕೆಜಿಎಫ್-2 ಚಿತ್ರದ ಟೀಸರ್ ಶೇರ್ ಮಾಡಿ ರಾಕಿಂಗ್ ಸ್ಟಾರ್ ಯಶ್ ಗೆ ಶುಭಾಶಯ ತಿಳಿಸಿದ್ದಾರೆ. 'ಎಂಥ ಅದ್ಭುತ ಟ್ರೈಲರ್. ಸಿನಿಮಾತಂಡಕ್ಕೆ ಅಭಿನಂದನೆಗಳು. ಹುಟ್ಟುಹಬ್ಬದ ಶುಭಾಶಯಗಳು ಯಶ್' ಎಂದು ಟ್ವೀಟ್ ಮಾಡಿದ್ದಾರೆ.