For Quick Alerts
  ALLOW NOTIFICATIONS  
  For Daily Alerts

  ಹಿಂದಿಯ ಈ ನಟನ ಜೊತೆ ಯಶ್ ಗೆ ನಟಿಸುವ ಆಸೆಯಂತೆ

  |
  KGF kannada movie : ಹಿಂದಿಯ ಈ ನಟನ ಜೊತೆ ಯಶ್ ಗೆ ನಟಿಸುವ ಆಸೆಯಂತೆ..? | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಾಣುತ್ತಿದೆ.

  ವಿಶೇಷ ಅಂದ್ರೆ, ಯಶ್ ಕೆಜಿಎಫ್ ಚಿತ್ರಕ್ಕೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆ. ಒಂದು ಕೋಟಿಗೂ ಅಧಿಕ ಜನ ಟ್ರೈಲರ್ ವೀಕ್ಷಿಸಿದ್ದಾರೆ. ದೊಡ್ಡ ಬೆಲೆ ಕೊಟ್ಟು ಡಬ್ಬಿಂಗ್ ಹಕ್ಕು ಖರೀದಿಸಿದ್ದಾರೆ. ಹಿಂದಿ ಸಿನಿಮಾದಂತೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡ್ತಿದ್ದಾರೆ.

  ಇಷ್ಟೆಲ್ಲಾ ವಿಶೇಷತೆಗಳ ಮಧ್ಯೆ ಶಾರೂಖ್ ಸಿನಿಮಾ ಜೊತೆ ಕೆಜಿಎಫ್ ಪೈಪೋಟಿ ನಡೆಸಲಿದೆ ಎನ್ನುವುದು ಹಿಂದಿ ಚಿತ್ರರಂಗವನ್ನ ಕೆಣಕಿದೆ. ಸೌತ್ ಇಂಡಸ್ಟ್ರಿಯಿಂದ ಬಂದ ನಟನೊಬ್ಬ ಖಾನ್ ಎದುರು ಅಬ್ಬರಿಸಲಿದ್ದಾರೆ ಎಂಬುದು ಈಗ ಪ್ರತಿಷ್ಠೆಯ ಕಣವಾಗಿದೆ.

  'ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.!

  ಈ ಮಧ್ಯೆ ಬಾಲಿವುಡ್ ಮಾಧ್ಯಮದ ಸಂದರ್ಶನವೊಂದರಲ್ಲಿ ನಿರೂಪಕರು ಬಾಲಿವುಡ್ ಯಾವ ನಟನ ಜೊತೆ ನಟಿಸುವ ಆಸೆ ಇದೆ ಎಂದು ಕೇಳಿದರು. ಅದಕ್ಕೆ ಉತ್ತರ ನೀಡಿದ ಯಶ್, ನಟ ನವಾಜುದ್ದೀನ್ ಸಿದ್ಧಿಕಿ ಜೊತೆ ನಟಿಸುವ ಆಸೆ ಇದೆ, ಯಾಕಂದ್ರೆ ಅವರೊಬ್ಬರ ಅದ್ಭುತ ನಟ ಎಂದಿದ್ದಾರೆ.

  ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

  ಇನ್ನು ಕೊನೆಯದಾಗಿ ಯಾವ ಹಿಂದಿ ಚಿತ್ರವನ್ನ ನೋಡಿದ್ರಿ ಅಂತ ಕೇಳಿದ್ದಕ್ಕೆ, 'ಸಂಜು' ಎಂದು ಹೇಳಿದ್ದಾರೆ. ಸದ್ಯದವರೆಗೂ ಬಾಲಿವುಡ್ ನಿಂದ ಯಾವುದೇ ಆಫರ್ ಬಂದಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

  English summary
  If yash get the chance, he want to do film with bollywood actor nawazuddin siddiqui.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X