'ಬಾಸ್'ಗಾಗಿ ಯಶ್ ಏನ್ ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಇದು ಸಾಕ್ಷಿ

By Pavithra

Recommended Video

ಒಂದು ನಂಬರ್ ಪ್ಲೇಟ್‌ಗೆ ಯಶ್ ಸಾವಿರಗಟ್ಟಲೆ ಹಣ ಕೊಟ್ಟಿದ್ದು ಯಾಕೆ ಗೊತ್ತಾ..?

ಕಳೆದ ಕೆಲವು ವಾರಗಳ ಹಿಂದೆ ಬಾಸ್ ಅಂದ್ರೆ ನಮ್ಮ ಸ್ಟಾರ್. ಬೇರೆಯವರು ಬಾಸ್ ಆಗುವುದಕ್ಕೆ ಸಾಧ್ಯವಿಲ್ಲ. ಅಂತೆಲ್ಲಾ ಗಾಂಧಿನಗರದಲ್ಲಿ ಅಭಿಮಾನಿಗಳು ಸದ್ದು ಮಾಡಿದ್ದರು. ಅದು ಎಷ್ಟರ ಮಟ್ಟಿಗೆ ಅಂದರೆ ಇದೇ ವಿಚಾರವಾಗಿ ದುನಿಯಾ ಸೂರಿ ಅವರಿಗೆ ಮನವಿ ಪತ್ರ ಕೂಡ ಬರೆದಿದ್ದರು.

ಆದರೆ ಸ್ಟಾರ್ ಗಳು ಮಾತ್ರ ಈ ವಿಚಾರದ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡರಲಿಲ್ಲ. ದರ್ಶನ್ ಅಭಿಮಾನಿಗಳಿಂದ ಡಿ ಬಾಸ್ ಎಂದು ಕರೆಸಿಕೊಂಡವರು . ಅದೇ ರೀತಿ ರಾಕಿಂಗ್ ಸ್ಟಾರ್ ಅವರನ್ನು ಸ್ನೇಹಿತರು ಮತ್ತು ಅವರ ಜೊತೆಯಲ್ಲಿ ಕೆಲಸ ಮಾಡುವವರು ಬಾಸ್ ಎಂದೇ ಕರೆಯುತ್ತಾರೆ. ಅದಷ್ಟೇ ಅಲ್ಲದೆ ಸುದೀಪ್ ಆಪ್ತರು, ಪುನೀತ್ ರಾಜ್ ಕುಮಾರ್ ಸ್ನೇಹಿತರು, ಶಿವರಾಜ್ ಕುಮಾರ್ ಅಭಿಮಾನಿಗಳು ಕೂಡ ಬಾಸ್ ಅಂತಲೇ ಕರೆಯುತ್ತಾರೆ.

ಹೀಗೆ ಅಭಿಮಾನಿಗಳು ತಮ್ಮ ತಮ್ಮ ಸ್ಟಾರ್ ಗಳನ್ನ ಅವರಿಗಿಷ್ಟವಾಗುವಂತೆ ಕರೆಯುತ್ತಾರೆ. ಯಶ್ ಅವರಿಗೆ ಬಾಸ್ ಎನ್ನುವುದರ ಮೇಲೆ ಅತ್ಯಂತ ಅಭಿಮಾನವಿದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಮತ್ತೆ ಯಶ್ ಬಾಸ್ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಹೇಗೆ ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಬಾಸ್ ಮೇಲಿನ ಪ್ರೀತಿ

ಬಾಸ್ ಮೇಲಿನ ಪ್ರೀತಿ

ರಾಕಿಂಗ್ ಸ್ಟಾರ್ ಯಶ್ ಅವರ ಬೆಂಜ್ ಕಾರಿಗೆ KA 05 MY 8055 ಎನ್ನುವ ನಂಬರ್ ಸಿಕ್ಕಿದೆ. ಈಗಾಗಲೇ ಯಶ್ ಬಳಿ ಇರುವ ಕಾರ್ ಗಳ ನಂಬರ್ ಕೂಡ 8055 . 8055 ಬಾಸ್ ಎನ್ನುವ ಅರ್ಥ ಕೊಡುತ್ತದೆ ಆದ್ದರಿಂದ ಇಷ್ಟು ದಿನಗಳು ಕಾದಿದ್ದು ಇದೇ ನಂಬರ್ ಖರೀದಿ ಮಾಡಿದ್ದಾರೆ.

ಫ್ಯಾನ್ಸಿ ನಂಬರ್ ಗಾಗಿ 75,000

ಫ್ಯಾನ್ಸಿ ನಂಬರ್ ಗಾಗಿ 75,000

ಸುಮಾರು ಆರು ತಿಂಗಳಿಂದ ಫ್ಯಾನ್ಸಿ ನಂಬರ್ ಗಾಗಿ ಕಾದಿದ್ದ ಯಶ್ ಇತ್ತೀಚಿಗಷ್ಟೆ ಶಾಂತಿನಗರದ ಆರ್.ಟಿ.ಒ ಕೇಂದ್ರ ಕಚೇರಿಯಲ್ಲಿ ನಡೆದ ನಾಲ್ಕು ಚಕ್ರ ವಾಹನಗಳ ಫ್ಯಾನ್ಸಿ ಸಂಖ್ಯೆಯ ಹರಾಜು ಪ್ರಕ್ರಿಯೆಯಲ್ಲಿ 75,000 ಸಾವಿರ ಕೊಟ್ಟು 'KA 05 MY 8055' ಖರೀದಿ ಮಾಡಿದ್ದಾರೆ.

ಬೇಡಿಕೆಯ ನಂಬರ್ '8055'

ಬೇಡಿಕೆಯ ನಂಬರ್ '8055'

ಫ್ಯಾನ್ಸಿ ನಂಬರ್ ತಮ್ಮ ಕಾರು ಮತ್ತು ಬೈಕ್ ಗಳಿಗೆ ಹಾಕಿಸಿಕೊಳ್ಳಬೇಕು ಎನ್ನುವ ಆಸೆ ಸಾಕಷ್ಟು ಜನರಲ್ಲಿ ಇರುತ್ತೆ. ಯಶ್ ಮಾತ್ರವಲ್ಲದೆ ಹರಾಜು ಪ್ರಕ್ರಿಯೆಯನ್ನ ಸಾಕಷ್ಟು ಜನರು ಭಾಗಿ ಆಗಿದ್ದರು. ಆದರೆ 'KA 05 MY 8055' ನಂಬರ್ ಯಶ್ ಪಾಲಾಗಿದೆ.

ಮೈ ಬಾಸ್ ಎಂದು ಬಿಂಬಿತವಾಗುವ ನಂಬರ್

ಮೈ ಬಾಸ್ ಎಂದು ಬಿಂಬಿತವಾಗುವ ನಂಬರ್

ಕಳೆದ ವರ್ಷಾಂತ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿಗೆ, ಹೆಂಡತಿಗಾಗಿ ಹಾಗೂ ತಮಗಾಗಿ ಮೂರು ಕಾರ್ ಗಳನ್ನು ಖರೀದಿ ಮಾಡಿದ್ದರು. ಅದೇ ಕಾರ್ ಗೆ "KA05 - MY8055" ನಂಬರ್ ಹಾಕಿಸಲಿದ್ದಾರೆ.

More from Filmibeat

English summary
Rocking Star Yash bought four wheel vehicle fancy number in auction at RTO headquarters in Shanti Nagar, for 75,000 thousand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X