'ಟಾಕ್ಸಿಕ್' ಚಿತ್ರದ ವಿವಾದಾತ್ಮಕ ಹಸಿಬಿಸಿ ದೃಶ್ಯಗಳ ಬಗ್ಗೆ ಕೊನೆಗೂ ಮೌನ ಮುರಿದ ಯಶ್

ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ತೆರೆಗೆ ಬರ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ವಿವಾದಕ್ಕೆ ಕಾರಣವಾಗಿತ್ತು.

'ಟಾಕ್ಸಿಕ್' ಟೀಸರ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ದೂರು ದಾಖಲಾಗಿ ವಿವಾದ ಸೃಷ್ಟಿ ಆಗಿತ್ತು. ಕನ್ನಡ ಸಿನಿಮಾಗಳಲ್ಲಿ ಇದೆಲ್ಲಾ ಅತಿಯಾಯಿತು, ಯಶ್ ಚಿತ್ರಕ್ಕೆ ಇದೆಲ್ಲಾ ಬೇಕಿರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಯಿತು. ಆದರೆ ಯಶ್ ಅಭಿಮಾನಿಗಳು ಇದಕ್ಕೆ ತಿರುಗೇಟು ನೀಡಿದ್ದರು. ಸಿನಿಮಾ ಬರುವವರೆಗೂ ತಾಳ್ಮೆಯಿಂದ ಇರಲಿ, ಕಾದು ನೋಡೋಣ ಎಂದಿದ್ದರು.

Yash Breaks Silence on Toxic Teaser Controversy Actor Addresses Romantic Scenes Criticism

ಸದ್ಯ 'ಟಾಕ್ಸಿಕ್' ಚಿತ್ರದ ವಿವಾದಾತ್ಮಕ ದೃಶ್ಯಗಳ ಬಗ್ಗೆ ಸ್ವತಃ ಯಶ್ ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾಕಾನ್ ಸಮಾವೇಶಕ್ಕಾಗಿ ಲಾಗ್‌ವೇಗಾಸ್‌ಗೆ ತೆರೆಳಿದ್ದ ಯಶ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ದರು. ಇದೇ ವೇಳೆ thehijabibounder ಎಂಬ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. ಗೀತು ಮೋಹನ್ ದಾಸ್ ಕೆಲಸದ ಬಗ್ಗೆ ಹೇಳುತ್ತಾ ಚಿತ್ರದ ಹಸಿಬಿಸಿ ದೃಶ್ಯಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗ್ತಿದೆ.

ಮಹಿಳಾ ನಿರ್ದೇಶಕಿಯೊಬ್ಬರು 'ಟಾಕ್ಸಿಕ್' ರೀತಿಯ ಆಕ್ಷನ್ ಚಿತ್ರವನ್ನು ನಿರ್ದೇಶನ ಮಾಡುವುದು ಅಪರೂಪ ಎಂದು ಯಶ್ ಹೇಳಿದ್ದಾರೆ. "ಆಕ್ಷನ್ ಚಿತ್ರದ ಬಹಳ ರೋಮಾಂಚಕಾರಿ ಭಾಗವಾಗಿರುತ್ತದೆ. ಆಕ್ಷನ್ ಸಿನಿಮಾಗಳು ಅಂದಾಗ ಪುರುಷ ನಿರ್ದೇಶಕರಿಗೆ ಸೀಮಿತವಾಗಿರುತ್ತದೆ. ಭಾರತದಲ್ಲಿ ದಶಕಗಳಿಂದ ಅದು ಸಾಬೀತಾಗಿದೆ. ಇದು ದೊಡ್ಡ ಪ್ರಮಾಣದ ಆಕ್ಷನ್ ಸಿನಿಮಾ. ಅದರಲ್ಲೂ ಇದು ಹೊಸ ಬಗೆಯ, ವಿಭಿನ್ನವಾದ ಸ್ತ್ರೀ ನೋಟ ಹೊಂದಿರುವ ಗ್ಯಾಂಗ್‌ಸ್ಟರ್ ಸಿನಿಮಾ" ಎಂದು ಯಶ್ ತಿಳಿಸಿದ್ದಾರೆ.

ಗೀತು ಮೋಹನ್ ದಾಸ್ ಬಗ್ಗೆ ಮಾತು ಮುಂದುವೆರಿಸಿರುವ ಯಶ್ "ಆಕೆಯ ಆಲೋಚನೆಗಳು ತುಂಬಾ ಸ್ಪಷ್ಟವಾಗಿವೆ, ತಾನು ಮಾಡುವ ಯಾವುದೇ ಕೆಲಸದಲ್ಲಿ ಬಲವಾದ ನಂಬಿಕೆ ಹೊಂದಿದ್ದಾಳೆ. ಅದ್ಭುತ ಬರಹಗಾರ್ತಿ. ನಾನು ಆಕೆಯಿಂದ ಸಾಕಷ್ಟು ಕಲಿತೆ. ಬಯಕೆ ಅಥವಾ ಕೆಲ ಭಾವನೆಗಳು, ರೊಮ್ಯಾನ್ಸ್ ಅಥವಾ sensuality- ಒಬ್ಬ ಮಹಿಳೆಯಾಗಿ ಹೇಗೆ ತೋರಿಸಬಹುದು, ಎನ್ನುವುದು ಇಲ್ಲಿ ವಿಭಿನ್ನವಾಗಿದೆ, ಅದನ್ನು ನಾನು ಈ ಸಿನಿಮಾ ಮಾಡುವಾಗ ಅರಿತೆ" ಎಂದಿದ್ದಾರೆ.

ಯಶ್ ಹುಟ್ಟುಹಬ್ಬದ ದಿನ 'ಟಾಕ್ಸಿಕ್' ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ರಾಯನ ಅವತಾರದಲ್ಲಿ ಯಶ್ ಆರ್ಭಟದ ಜೊತೆಗೆ ಕಾರಿನ ಒಳಗಿನ ರೊಮ್ಯಾಂಟಿಕ್ ದೃಶ್ಯಗಳು ಎಲ್ಲರ ಹುಬ್ಬೇರಿಸಿತ್ತು. ಆಮ್‌ಆದ್ಮಿ ಪಕ್ಷದ ಮಹಿಳಾ ಘಟಕ ಈ ಬಗ್ಗೆ ದೂರು ನೀಡಿ ಇಂತಹ ಸನ್ನಿವೇಶಗಳನ್ನು ತೋರಿಸುವುದು ತಪ್ಪು ಎಂದಿದ್ದರು. ಇನ್ನು ಈ ದೃಶ್ಯಗಳಲ್ಲಿ ಕಾರಿನ ಒಳಗೆ ಯಶ್ ಜೊತೆ ಕಾಣಿಸಿಕೊಂಡಿದ್ದ ನಟಿ ಯಾರು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತು. ಅಂತಿಮವಾಗಿ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದರು.

ನಟಿ, ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಈ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನಯನತಾರ, ಹುಮಾ ಖುರೇಷಿ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ಮಾರ್ಚ್ 19ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬೇಕಿತ್ತು. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಎರಡು ತಿಂಗಳು ಮುಂದೂಡಲಾಗಿತ್ತು. ಈ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಇನ್ನು 38 ದಿನ ಬಾಕಿಯಿದೆ.

Read more about: yash toxic controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X