ತಾಯಿಯ ಆಸೆ ಈಡೇರಿಸಿದ ರಾಕಿ ಭಾಯ್

Recommended Video

ತಮ್ಮ ತಾಯಿಯ ಆಸೆಯನ್ನ ಈಡೇರಿಸಿದ ನಟ ಯಶ್ | FILMIBEAT KANNADA

ಮರಳಿ ಮಣ್ಣಿಗೆ ಎನ್ನುವ ಮಾತಿನ ಹಾಗೆ ನಟ ಯಶ್ ಈಗ ತಮ್ಮ ಬೇರುಗಳನ್ನು ಹುಡುಕಿ ಹೊರಟಿದ್ದಾರೆ. ತಮ್ಮ ಹುಟ್ಟೂರು ಹಾಸನದಲ್ಲಿ ರಾಕಿ ಭಾಯ್ ತೋಟ ಹಾಗೂ ಮನೆ ಖರೀದಿ ಮಾಡಿದ್ದಾರೆ.

ತಿಂಗಳುಗಳ ಹಿಂದೆ ಯಶ್ ಹಾಸನದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ 80 ಎಕರೆಯ ಸಪೋಟ, ಮಾವು, ಗೋಡಂಬಿಯ ತೋಟವನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ನ್ಯಾಷನಲ್ ಸ್ಟಾರ್ ನೆಲದ ಮಹತ್ವ ಹೇಳಿದ್ದಾರೆ.

ಹಾಸನದಲ್ಲಿ ಯಶ್ ತೋಟ ತೆಗೆದುಕೊಳ್ಳುವುದಕ್ಕೂ ಒಂದು ಕಾರಣ ಇದೆ. ಹಾಸನ ಯಶ್ ಹುಟ್ಟೂರು. ಅರ್ಥಾತ್ ಯಶ್ ತಾಯಿ ಅವರು ಊರು ಇದಾಗಿದೆ. ಹಾಸನದ ಆಸ್ಪತ್ರೆಯಲ್ಲಿ ಹುಟ್ಟಿದ ಯಶ್ ತಮ್ಮ ಹುಟ್ಟೂರಿನಲ್ಲಿ ತೋಟ ಹಾಗೂ ಮನೆ ಮಾಡುವ ಆಸೆ ಹೊಂದಿದ್ದರು. ಅದು ಈಗ ಈಡೇರಿದೆ. ವಿದ್ಯಾನಗರದಲ್ಲಿ 68*70 ಅಡಿ ಮನೆ ಖರೀದಿ ಮಾಡಿದ್ದಾರೆ.

yash brought farm and new house in hasan

ಹಾಸನದಲ್ಲಿ ತೋಟ ಮಾಡಬೇಕು ಎನ್ನುವುದು ಯಶ್ ತಾಯಿ ಅವರ ಯಶ್ ಅವರ ಬಹು ದಿನದ ಬಯಕೆ ಆಗಿತ್ತು. ಕೆರೆಗಳ ಮೂಲಕ ರೈತರಿಗೆ ಸಹಾಯ ಮಾಡಿದ್ದ ಯಶ್ ಈಗ ತಾವೇ ಕೃಷಿಗೆ ಇಳಿದಿದ್ದಾರೆ.

'ಕೆಜಿಎಫ್' ಸಿನಿಮಾ ಮೂಲಕ ಇಡೀ ಭಾರತದಲ್ಲಿ ಹೆಸರು ಮಾಡಿರುವ ಯಶ್ ತಮ್ಮ ಹುಟ್ಟೂರನ್ನು ಮರೆತಿಲ್ಲ. ಮನುಷ್ಯ ಎಷ್ಟೇ ಬೆಳೆದರು ತನ್ನ ಬೇರುಗಳನ್ನು ಮರೆಯಬಾರದು ಎನ್ನುವ ಹಾಗೆ ಯಶ್ ನಡೆದುಕೊಂಡಿದ್ದಾರೆ.

More from Filmibeat

English summary
Kannada actor Yash brought farm and new house in Hasan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X