Yash: "ಯಶ್ ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದರು"- ರಾಕಿ ಭಾಯ್ ಬಗ್ಗೆ ತಮಿಳು ನಟನ ಹೇಳಿಕೆ ವೈರಲ್
'ಕೆಜಿಎಫ್ ಚಾಪ್ಟರ್ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ರೇಂಜ್ ವಿಶ್ವ ಮಟ್ಟಕ್ಕೆ ಹೋಗಿದೆ. ಯಶ್ ಇಮೇಜ್ ಸಂಪೂರ್ಣ ಬದಲಾಗಿದೆ. ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಭಾರತದ ಸೂಪರ್‌ಸ್ಟಾರ್‌ಗಳ ಸಾಲಿನಲ್ಲಿ ಈಗ ರಾಕಿಂಗ್ ಸ್ಟಾರ್ ನಿಲ್ಲುತ್ತಾರೆ.
ಆದರೆ, ರಾಕಿಂಗ್ ಸ್ಟಾರ್ ನಡೆದು ಬಂದ ಹಾದಿ ಈಗ ನೋಡುತ್ತಿರುವಷ್ಟು ಸುಲಭವಾಗಿರಲಿಲ್ಲ. ಯಶ್ ಸೂಪರ್‌ಸ್ಟಾರ್ ಆಗುವುದಕ್ಕೆ ಮುಳ್ಳಿನ ಹಾದಿಯನ್ನೇ ಸವೆದಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಸಿನಿಮಾದಲ್ಲಿ ನಟಿಸಲೇ ಬೇಕು ಅಂತ ಯಶ್ ಪಣತೊಟ್ಟಿದ್ದರು. ಚಿಕ್ಕದೊಂದು ಅವಕಾಶಕ್ಕೂ ಯಶ್ ಪರದಾಡಿದ ದಿನಗಳಿದ್ದವು.

ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರೋ ನಟರೊಬ್ಬರು ಯಶ್ ಬಗ್ಗೆ ಗೊತ್ತಿಲ್ಲದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ಯಶ್ ತನ್ನ ಬಳಿ ಬಂದು ಕಣ್ಣೀರಿಟ್ಟಿದ್ದರು ಎಂದು ಆ ನಟ ಹೇಳಿದ್ದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟ ಯಾರು? ಯಾವಾಗ ಕಣ್ಣೀರಿಟ್ಟಿದ್ದರು? ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಯಶ್ ಮೊದಲ ಸಿನಿಮಾ ಯಾವುದು?
ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಿಂತ ಮೊದಲು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಇದೇ ವೇಳೆ ಸಿನಿಮಾಗಳಲ್ಲಿ ಅವಕಾಶ ಹುಡುಕುತ್ತಿದ್ದರು. ಚಿಕ್ಕದೊಂದು ಅವಕಾಶ ಸಿಕ್ಕರೂ ತನ್ನ ಪ್ರತಿಭೆಯನ್ನು ತೋರಿಸಲು ತವಕವಿತ್ತು. ಆಗಲೇ ಯಶ್‌ಗೆ ಸಿನಿಮಾವೊಂದು ಸಿಕ್ಕಿತ್ತು. ಪ್ರಿಯಾ ಹಾಸನ್ ನಿರ್ದೇಶಿಸಿ, ನಟಿಸಿದ್ದ 'ಜಂಬದ ಹುಡುಗಿ' ಅನ್ನೋ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಸಿಕ್ಕಿತ್ತು. ಇಲ್ಲಿಂದ ಯಶ್ ಸಿನಿಮಾ ಜರ್ನಿ ಆರಂಭ ಆಗಿತ್ತು. ಹಾಗಂತ ಮೊದಲ ಸಿನಿಮಾದಿಂದ ಯಶ್ ನಡೆದಿದ್ದೆಲ್ಲ ರಾಜ ಮಾರ್ಗವೇನಲ್ಲ.

ಯಶ್ ಆರಂಭದ ದಿನಗಳು ಹೇಗಿತ್ತು?
ಯಶ್ ನಟಿಸಿದ ಮೊದಲ ಸಿನಿಮಾದಲ್ಲಿ ನಾಯಕನಾಗಿದ್ದು ಜೈ ಆಕಾಶ್. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಇತ್ತೀಚೆಗೆ ತಮಿಳು ಮಾಧ್ಯಮಗಳೊಂದಿಗೆ ಮಾತಾಡುವಾಗ ಜೈ ಆಕಾಶ್ ಆರಂಭದ ದಿನಗಳಲ್ಲಿ ಯಶ್ ಎಷ್ಟು ಕಷ್ಟ ಪಟ್ಟಿದ್ದರು ಅನ್ನೋದನ್ನು ಬಿಡಿಸಿ ಹೇಳಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ತನ್ನ ಬಳಿ ಯಶ್ ಕಣ್ಣೀರಿಟ್ಟಿದ್ದರು ಎಂದಿರೋ ಹೇಳಿಕೆ ವೈರಲ್ ಆಗಿದೆ.
"ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದರು"
'ಜಂಬದ ಹುಡುಗಿ' ಸಿನಿಮಾದಲ್ಲಿ ಜೈ ಆಕಾಶ್ ಅವರ ತಮ್ಮನ ಪಾತ್ರದಲ್ಲಿ ಯಶ್ ನಟಿಸಿದ್ದರು. ಈ ಪಾತ್ರಕ್ಕೆ ಯಶ್ ಆಯ್ಕೆ ಮಾಡಿದ್ದು ತಾನೇ ಎಂದು ಜೈ ಆಕಾಶ್ ಹೇಳಿದ್ದಾರೆ. ಅಲ್ಲದೆ ಜೈ ಆಕಾಶ್ ಆಡಿದ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. " ಆ ಸಿನಿಮಾಗೆ ಯಶ್‌ರನ್ನು ಆಯ್ಕೆ ಮಾಡಿದ್ದೇ ನಾನು. ಮತ್ತೆ ಧಾರಾವಾಹಿ ಮಾಡಲು ಇಷ್ಟವಿಲ್ಲ. ಇಲ್ಲಿ ಯಾರೂ ಅವಕಾಶ ಕೊಡೋದಿಲ್ಲ ಅಂತಾರೆ ಎಂದು ಕಣ್ಣೀರು ಹಾಕಿದ್ದರು. ಆಗ ಯಶ್‌ರನ್ನು ಸಮಾಧಾನ ಮಾಡಿ, ಊಟ ಮಾಡಿಸಿ ಸಿನಿಮಾಗೆ ಸಹ ಆಯ್ಕೆ ಮಾಡಿದ್ದೆ" ಎಂದು ಜೈ ಆಕಾಶ್ ಹೇಳಿದ್ದಾರೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಶ್ 19ನೇ ಸಿನಿಮಾ ಬಗ್ಗೆ ಕುತೂಹಲ
'ಕೆಜಿಎಫ್ 2' ಸಿನಿಮಾದ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಜಗತ್ತಿನ ಹಲವೆಡೆ ಜನರು ಯಶ್ ಅನ್ನು ಗುರುತಿಸುತ್ತಾರೆ. ಹೀಗಾಗಿ ಯಶ್ ಸುಮಾರು 18 ತಿಂಗಳಿನಿಂದ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇತ್ತ ಇನ್ನೇನು ಹೊಸ ಸಿನಿಮಾವನ್ನು ಯಶ್ ಅನೌನ್ಸ್ ಮಾಡಬಹುದು ಎಂದು ಎದುರು ನೋಡುತ್ತಿದ್ದಾರೆ. ಅದ್ಯಾವ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











