For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಚುನಾವಣಾ ಪ್ರಚಾರ ಶುರು ಮಾಡಿದ ರಾಜಾಹುಲಿ

  By Naveen
  |

  Recommended Video

  ಕೊನೆಗೂ ಗೊತ್ತಾಯ್ತು ಯಶ್ ಪ್ರಚಾರ ಯಾರ ಪರ ಅಂತ | Filmibeat Kannada

  ಕರ್ನಾಟಕ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಅನೇಕ ಸಿನಿಮಾರಂಗದ ಕಲಾವಿದರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಟ ಯಶ್ ಸಹ ಇದೀಗ ಮೈಸೂರಿನ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭ ಮಾಡಿದ್ದಾರೆ.

  ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ರಾಕಿಂಗ್ ಸ್ಟಾರ್ ಯಶ್.! ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ರಾಕಿಂಗ್ ಸ್ಟಾರ್ ಯಶ್.!

  ಯಶ್ ಯಾವ ಪಕ್ಷದ ಪರವಾಗಿ ಮತ ಯಾಚನೆ ಮಾಡುತ್ತಾರೆ ಎನ್ನುವ ಕುತೂಹಲ ಅನೇಕ ದಿನದಿಂದ ಇತ್ತು. ಯಶ್ ಕೂಡ ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೆ, ಒಳ್ಳೆಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದರು. 'ಪಕ್ಷಕ್ಕಿಂತ ವ್ಯಕ್ತಿ ಮುಖ್ಯ' ಎಂದು ಹೇಳಿದ ಅವರು ಈಗ ಇಬ್ಬರು ಅಭ್ಯರ್ಥಿಗಳಿಗೆ ಸಾಥ್ ನೀಡಿದ್ದಾರೆ.

  ಮೈಸೂರಿನ ಕೃಷ್ಣರಾಜ (ಕೆ.ಆರ್ ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್ .ಎ ರಾಮದಾಸ್ ಮತ್ತು ಜೆ ಡಿ ಎಸ್ ಪಕ್ಷದ ಸಾ.ರಾ ಮಹೇಶ್ ಅವರ ಪರ ನಟ ಯಶ್ ಪ್ರಚಾರ ನಡೆಸಲಿದ್ದಾರೆ. ಇಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಯಶ್ ಪಾಲ್ಗೊಂಡು, ಈ ಇಬ್ಬರ ಪರ ಪ್ರಚಾರ ಮಾಡಲಿದ್ದಾರೆ. ಇಂದು ಬೆಳ್ಳಗೆ ಸಾ.ರಾ ಮಹೇಶ್ ಮತ್ತು ಸಂಜೆ ರಾಮ್ ದಾಸ್ ಅವರ ಪರ ಯಶ್ ರೋಡ್ ಶೋ ಮಾಡಲಿದ್ದಾರೆ.

  ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ಯಶ್ ಪ್ರಚಾರ

  ''ನಾನು ಸ್ನೇಹಪೂರ್ವಕವಾಗಿ ರಾಮದಾಸ್ ಪರ ಪ್ರಚಾರ ಮಾಡುತ್ತಿದ್ದೇನೆ. ಇದೇ ರೀತಿ, ಇತರೆ ಪಕ್ಷದ ಆತ್ಮೀಯರ ಪರ ಕೂಡಾ ಪ್ರಚಾರ ಕೈಗೊಳ್ಳಬಹುದು. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ'' ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

  English summary
  Elections 2018 : Kannada actor Yash campaign BJP candidate of Krishnaraja consituency SA Ramdas and and JDS candidate SA RA Mahesh in mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X