ಮನೆಗೆ ಬಂದ ರಾಜಕುಮಾರಿ : ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಯಶ್

Recommended Video

ಯಶ್ ಮನೆ ಮಹಾಲಕ್ಷ್ಮಿಯ exclusive video ನಿಮಗಾಗಿ..! | FILMIBEAT KANNADA

ಯಶ್ ಹಾಗೂ ರಾಧಿಕಾ ಪಂಡಿತ್ ಜೀವನದ ಮಹತ್ವದ ದಿನ. ಇಂದು ಸ್ಯಾಂಡಲ್ ವುಡ್ ನ ಈ ತಾರಾ ಜೋಡಿ ಈಗ ಅಪ್ಪ ಅಮ್ಮನಾಗಿದ್ದಾರೆ. ನಟಿ ರಾಧಿಕ ಪಂಡಿತ್ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಯಶ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇಂದು ಯಶ್-ರಾಧಿಕಾ ಪಂಡಿತ್ ದಂಪತಿಗೆ ಮರೆಯಲಾಗದ ದಿನವಾಗಿದೆ. ಆದ್ದರಿಂದಲೇ ಯಶ್ ತಮ್ಮ ಮಡದಿ ಮತ್ತು ಮಗು ಜೊತೆ ಇಂದು ಪೂರ್ತಿ ದಿನ ಇರಲಿದ್ದಾರೆ. ಹಾಗಾಗಿ ಯಶ್ ಇಂದಿನ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಇಂದು ಅವರು ನಾಗರಬಾವಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ರೂಪ್ ಸಂಗಮ್ ದಿ ಫ್ಯಾಮಿಲಿ ಸ್ಟೋರ್ಸ್ ನ ಉದ್ಘಾಟನೆ ಮಾಡಲು ಹೋಗಬೇಕಿತ್ತು. ಆದರೆ, ಅವರು ಅದರಲ್ಲಿ ಪಾಲ್ಗೊಳಲಿಲ್ಲ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಯಶ್ ಹೀಗೆ ಬರೆದುಕೊಂಡಿದ್ದಾರೆ.

yash canceled his todays program

''ಇಂದು ನಾಗರಬಾವಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ "ರೂಪ್ ಸಂಗಮ್" ದಿ ಫ್ಯಾಮಿಲಿ ಸ್ಟೋರ್ಸ್ ನ ಉದ್ಘಾಟನೆ ಮಾಡಲು ಪ್ರೀತಿಯಿಂದ ಆಗಮಿಸುತ್ತೇನೆಂದು ತಿಳಿಸಿದ್ದೆ. ಆದರೆ, ಇಂದು ವೈಯಕ್ತಿಕ ಕಾರಣಗಳಿಂದ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಕ್ಷಮೆಯಿರಲಿ. ರೂಪ್ ಸಂಗಮ್ ನ ಮಾಲೀಕರಿಗೆ ನನ್ನ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತೇನೆ.'' ಎಂದು ಯಶ್ ಟ್ವೀಟ್ ಮಾಡಿದ್ದಾರೆ.

ಸದ್ಯ ,ಯಶ್ ತಮ್ಮ 'ಕೆಜಿಫ್' ಸಿನಿಮಾದ ಪ್ರಚಾರದಲ್ಲಿ ಸಹ ಬ್ಯುಸಿ ಇದ್ದಾರೆ. ಆ ಸಿನಿಮಾದ ಜೊತೆಗೆ ಈಗ ಮನೆಗೆ ಮಹಾಲಕ್ಷ್ಮೀ ಆಗಮನದಿಂದ ಅವರಿಗೆ ಮತ್ತಷ್ಟು ಸಂತಸ ತಂದಿದೆ.

More from Filmibeat

English summary
Kannada actor Yash canceled his todays program. His wife, actress Radeeka Pandith give birth to baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X