'ಕೆಜಿಎಫ್ 2' ಪ್ರಚಾರ ಬದಿಗಿಟ್ಟು ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಯಶ್

'ಕೆಜಿಎಫ್ 2' ಸಿನಿಮಾ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಬಿಡುಗಡೆಗೆ ಮುನ್ನ ಭರಪೂರವಾಗಿ ಪ್ರಚಾರ ಮಾಡಲು ಚಿತ್ರತಂಡ ಪ್ರವಾಸ ಆರಂಭಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪ್ರಾರಂಭವಾಗಿ ಕೆಲ ದಿನಗಳಾಗಿವೆ, ಈಗ ವಿವಿಧ ನಗರಗಳಿಗೆ ಖುದ್ದಾಗಿ ತೆರಳಿ ಅಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಿದ್ದ 'ಕೆಜಿಎಫ್ 2' ಚಿತ್ರತಂಡ ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿತ್ತು.

ಸಿನಿಮಾ ಬಿಡಗುಡೆಗೆ ಇನ್ನು 11 ದಿನಗಳು ಮಾತ್ರವೇ ಇದ್ದು ಸಮಯ ಬಹಳ ಕಡಿಮೆ ಇದೆ. ಹಾಗಾಗಿ ಚಿತ್ರತಂಡವು ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದರೆ ಈ ಬಿಡುವಿಲ್ಲದ ಕಾರ್ಯದ ನಡುವೆಯೂ ನಟ ಯಶ್ ತಮ್ಮ ಕುಟುಂಬದೊಂದಿಗೆ ಇಂದು ಯುಗಾದಿ ಆಚರಿಸಿ ಗಮನ ಸೆಳೆದಿದ್ದಾರೆ.

Yash Celebrated Ugadi Festival With His Family, Radhika Shared Photos On Instagram

ಯುಗಾದಿ ಹಬ್ಬಕ್ಕೆ ಹಲವು ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿ ಸುಮ್ಮನಾಗುತ್ತಾರೆ. ಅವರು ನಿಜವಾಗಿಯೂ ಹಬ್ಬ ಆಚರಣೆ ಮಾಡಿದರೊ ಇಲ್ಲವೊ ಎಂಬುದು ಸಹ ಅಭಿಮಾನಿಗಳಿಗೆ ಗೊತ್ತಾಗುವುದಿಲ್ಲ. ಆದರೆ ಯಶ್ ಹಾಗೆ ಮಾಡಿಲ್ಲ. ಬದಲಿಗೆ ಕುಟುಂಬದೊಂದಿಗೆ ಸಂಪ್ರದಾಯ ಬದ್ಧವಾಗಿ ಹಬ್ಬ ಆಚರಿಸಿ ಕುಟುಂಬದೊಡನೆ ಕುಳಿತು ಊಟ ಮಾಡಿ ತಾವು ಕುಟುಂಬಕ್ಕೆ ಮೌಲ್ಯ ಕೊಡುವ ವ್ಯಕ್ತಿ ಎಂದು ಸಾರಿದ್ದಾರೆ. ಹಾಗೂ ತಮ್ಮನ್ನು ಆದರ್ಶವಾಗಿ ಪಾಲಿಸುವ ಕೋಟ್ಯಂತರ ಅಭಿಮಾನಿಗಳಿಗೆ ಪಾಠವನ್ನೂ ಹೇಳಿದ್ದಾರೆ.

ಯಶ್ ಪತ್ನಿ ರಾಧಿಕಾ ಪಂಡಿತ್ ಹಂಚಿಕೊಂಡಿರುವ ಚಿತ್ರದಲ್ಲಿ ನಟ ಯಶ್, ರಾಧಿಕಾ ಪಂಡಿತ್ ಹಾಗೂ ಇಬ್ಬರು ಪುಟ್ಟ ಮಕ್ಕಳು ಸಾಲಾಗಿ ನೆಲದ ಮೇಲೆ ಬಾಳೆ ಎಲೆ ಮುಂದೆ ಕುಳಿತು, ಯುಗಾದಿಯ ಸಂಪ್ರದಾಯಿಕ ಆಹಾರವಾದ ಹೋಳಿಗೆ, ಕೋಸಂಬರಿ, ಹಪ್ಪಳ, ವಡೆಗಳನ್ನು ಮೆಲ್ಲುತ್ತಿದ್ದಾರೆ. ಇಡೀ ಕುಟುಂಬ ಸಾಂಪ್ರದಾಯಿಕ ಉಡುಗೆ ತೊಟ್ಟು ಜೊತೆಯಲ್ಲಿ ಕುಳಿತು ಊಟ ಮಾಡುತ್ತಿರುವ ದೃಶ್ಯ ನೋಡಲು ಚೆನ್ನಾಗಿದೆ.

Yash Celebrated Ugadi Festival With His Family, Radhika Shared Photos On Instagram

Recommended Video

KGF 2| ವಿದೇಶದಲ್ಲಿ ಹೇಗಿದೆ ನೋಡಿ 'ಕೆಜಿಎಫ್2' ಟಿಕೆಟ್ ಬುಕ್ಕಿಂಗ್ ಕ್ರೇಝ್! | Filmibeat Kannada

ರಾಧಿಕಾ ಹಂಚಿಕೊಂಡಿರುವ ಒಂದು ಚಿತ್ರವಂತೂ ಬಹಳ ಚೆನ್ನಾಗಿದೆ ಯಶ್‌ನ ಪುತ್ರ ಯಥರ್ವ, ಅಪ್ಪನಂತೆ ಎದೆ ಉಬ್ಬಿಸಿ ಕಾಲ ಮೇಲೆ ಕೈಇಟ್ಟುಕೊಂಡು ಊಟ ಮಾಡುತ್ತಿರುವ ಚಿತ್ರ ಸಖತ್ತಾಗಿದೆ. ರಾಧಿಕಾ ಹಂಚಿಕೊಂಡಿರುವ ಈ ಚಿತ್ರಕ್ಕೆ ಸಾವಿರಾರು ಲೈಕ್‌ಗಳು ಕಮೆಂಟ್‌ಗಳು ಬಂದಿವೆ. ಸಿನಿಮಾದಲ್ಲಿ ತಾವು ಮಾಸ್ ಹೀರೋ ಇರಬಹುದು ಆದರೆ ಕುಟುಂಬದಲ್ಲಿ ಜವಾಬ್ದಾರಿಯುತ ಅಪ್ಪ, ಪ್ರೀತಿಯ ಗಂಡ ಎಂಬುದನ್ನು ಯಶ್ ಮತ್ತೆ ಸಾಬೀತು ಮಾಡಿದ್ದಾರೆ.

ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಭಾರತದ ಬಹುನಿರೀಕ್ಷಿತ ಸಿನಿಮಾ ಆಗಿದ್ದು, ಇದೇ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

More from Filmibeat

English summary
Actor Yash celebrated Ugadi festival with his family. Radhika shared photos on Instagram. Yash and wife Radhika and their children had traditional Ugadi food in traditional manner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X