»   » 'ಮಾಸ್ಟರ್ ಪೀಸ್' ನಿರ್ದೇಶಕನಿಗೆ ಯಶ್ ಕೊಟ್ಟ ಸರ್ ಪ್ರೈಸ್

'ಮಾಸ್ಟರ್ ಪೀಸ್' ನಿರ್ದೇಶಕನಿಗೆ ಯಶ್ ಕೊಟ್ಟ ಸರ್ ಪ್ರೈಸ್

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಬಿಜಿಯಾಗಿರುವುದು ನಿಮಗೆ ಗೊತ್ತೇ ಇದೆ.

ಸ್ಟಾರ್ ನಟ ಯಶ್ ಇಮೇಜ್ ಗೆ ತಕ್ಕಂತೆ ನಿರ್ದೇಶಕ ಮಂಜು ಮಾಂಡವ್ಯ 'ಮಾಸ್ಟರ್ ಪೀಸ್' ಚಿತ್ರ ರೆಡಿ ಮಾಡುತ್ತಿದ್ದಾರೆ. ಚೊಚ್ಚಲ ನಿರ್ದೇಶನವಾಗಿರುವ ಕಾರಣ ಹಾಗಲು ರಾತ್ರಿ ನಿದ್ದೆ ಗೆಟ್ಟು, 'ಮಾಸ್ಟರ್ ಪೀಸ್' ತಯಾರು ಮಾಡುತ್ತಿದ್ದಾರೆ. [ಮಾಸ್ಟರ್ಪೀಸ್ ಕನಿಷ್ಠ ದೀಪಾವಳಿಗಾದರೂ ಬರತ್ತಾ ಯಶ್?]


masterpiece

ಈ ನಡುವೆ ಎರಡು ದಿನಗಳ ಹಿಂದೆಯಷ್ಟೆ (ಅಕ್ಟೋಬರ್ 9) ಮಂಜು ಮಾಂಡವ್ಯ ಹುಟ್ಟುಹಬ್ಬವಿತ್ತು. ಜನ್ಮದಿನದಂದು ಕೂಡ ಬಿಡುವು ಮಾಡಿಕೊಳ್ಳದೇ, 'ಮಾಸ್ಟರ್ ಪೀಸ್' ಸಂಕಲನ ಕಾರ್ಯದಲ್ಲಿ ನಿರ್ದೇಶಕ ಮಂಜು ಮಾಂಡವ್ಯ ಬಿಜಿಯಾಗಿದ್ದರು.


ಇದನ್ನ ತಿಳಿದ ಯಶ್, ತಕ್ಷಣ ಎಡಿಟಿಂಗ್ ಸ್ಟುಡಿಯೋಗೆ ಕೇಕ್ ಸಮೇತ ಹಾಜರಾಗಿ 'ಮಾಸ್ಟರ್ ಪೀಸ್' ನಿರ್ದೇಶಕರಿಗೆ ಸರ್ ಪ್ರೈಸ್ ನೀಡಿದ್ದಾರೆ. ಯಶ್ ಹಾಗು ಎಡಿಟಿಂಗ್ ಟೀಮ್ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮಂಜು ಮಾಂಡವ್ಯ ಫುಲ್ ಖುಷ್ ಆದರು. [ನಟ ಯಶ್ ಹೃದಯವಂತಿಕೆ ಎಂಥದ್ದು ಅಂತೀರಾ?]


ಕೆಲಸ ಅಂದ ಮಾತ್ರಕ್ಕೆ ಬರೀ ಪ್ರೊಫೆಶನಲ್ ಆಗಿ ಮಾತ್ರ ಇರದೆ, ಎಲ್ಲರನ್ನೂ ಸ್ನೇಹಿತರಂತೆ ಕಾಣುವ ಯಶ್ ನಿಜವಾದ 'ಹೀರೋ' ಅಂತ ಅನೇಕರು ಇಷ್ಟಪಡುವುದು ಇದೇ ಕಾರಣಕ್ಕೆ.

English summary
Kannada Actor Yash celebrated Kannada Movie 'Masterpiece' director Manju Mandavya's birthday on October 9th in Editing studio, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada