For Quick Alerts
  ALLOW NOTIFICATIONS  
  For Daily Alerts

  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಮೈಸೂರಿಗೆ ಆಗಮಿಸಲಿರೋ ಯಶ್: ಫ್ಯಾನ್ಸ್ ವೇಟಿಂಗ್!

  |

  ಆಗಸ್ಟ್ 15 ಭಾರತಕ್ಕೆ ಸಂಭ್ರಮದ ದಿನ. ಅಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗುತ್ತಿವೆ. ಈ ಸಂಭ್ರಮದ ಅಂಗವಾಗಿ ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮದ ವಾತಾವರಣವಿದೆ. ದೇಶದ ಉದ್ದಕ್ಕೂ ಅನೇಕ ಕಾರ್ಯಕ್ರಮಗಳು ಜರುಗುತ್ತಿವೆ.

  ಕರ್ನಾಟಕದಲ್ಲೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭಮ ಜೋರಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳು ಜರುಗುತ್ತಿವೆ. ಜನರು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಂತಯೇ ಸಿನಿಮಾ ಸೆಲೆಬ್ರೆಟಿಗಳು ಕೂಡ ಸ್ವಾತಂತ್ರ್ಯದ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಈಗ ಯಶ್ ಕೂಡ ಮೈಸೂರಿಗೆ ಕಾರ್ಯಕ್ರಮವೊಂದಕ್ಕೆ ಹಾಜರಾಗಲಿದ್ದಾರೆ.

  ಮುಲಾಜೇ ಇಲ್ಲ.. ಉತ್ತರ ಭಾರತದವರಿಗೆ ಯಶ್- ಸುದೀಪ್ ಕನ್ನಡ ಪಾಠ!ಮುಲಾಜೇ ಇಲ್ಲ.. ಉತ್ತರ ಭಾರತದವರಿಗೆ ಯಶ್- ಸುದೀಪ್ ಕನ್ನಡ ಪಾಠ!

  ಒಂದ್ಕಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭಮ. ಇನ್ನೊಂದು ಕಡೆ ನೆಚ್ಚಿನ ನಟನನ್ನು ನೋಡುವ ಹಂಬಲ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕಾ. ರಾಕಿಂಗ್ ಸ್ಟಾರ್ ಯಶ್ ಈಗ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋದ್ರಿಂದ ಯಶ್ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. ಇಂತಹ ನಟ ಮೈಸೂರಿಗೆ ಬರುತ್ತಾರೆ ಎಂದಾಗ ಸಹಜವಾಗಿ ಅಭಿಮಾನಿಗಳ ದಿಲ್ ಖುಷ್ ಆಗಿದೆ.

  ಮೈಸೂರಿಗೆ ರಾಕಿಂಗ್ ಸ್ಟಾರ್ ಯಶ್

  ಮೈಸೂರಿಗೆ ರಾಕಿಂಗ್ ಸ್ಟಾರ್ ಯಶ್

  'ಕೆಜಿಎಫ್ 2' ಸಿನಿಮಾ ರಿಲೀಸ್ ಆದಲ್ಲಿಂದ ರಾಕಿಂಗ್ ಸ್ಟಾರ್ ಯಶ್ ಕೊಂಚ ಫ್ರೀಯಾಗಿದ್ದಾರೆ. ಇನ್ನೂ ಮುಂದಿನ ಅನೌನ್ಸ್ ಆಗದೆ ಇರೋದ್ರಿಂದ ಸ್ವಲ್ಪ ನಿರಾಳರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಸ್ವಾತಂತ್ರೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದಕ್ಕೆ ಹಾಜರಾಗಲಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿರುವ ಕಾರ್ಯಕ್ರಮಕ್ಕೆ ಹಾಜರಾಗುವುದು ಕನ್ಫರ್ಮ್ ಆಗಿದೆ.

  ಜಪಾನ್‌ನಲ್ಲೂ 'ಕೆಜಿಎಫ್ 2' ಸಕ್ಸಸ್‌ ಬಗ್ಗೆನೇ ಟಾಕ್: ರಾಕಿ ಭಾಯ್ ಬರೆದ ದಾಖಲೆ ಗುಣಗಾನ!ಜಪಾನ್‌ನಲ್ಲೂ 'ಕೆಜಿಎಫ್ 2' ಸಕ್ಸಸ್‌ ಬಗ್ಗೆನೇ ಟಾಕ್: ರಾಕಿ ಭಾಯ್ ಬರೆದ ದಾಖಲೆ ಗುಣಗಾನ!

  ಯಶ್ ಫ್ಯಾನ್ಸ್ ಫುಲ್ ಖುಷ್

  ಯಶ್ ಫ್ಯಾನ್ಸ್ ಫುಲ್ ಖುಷ್

  ಸರ್ಕಾರದ ಕಾರ್ಯಕ್ರಮದ ನಿಮಿತ್ತ ಯಶ್ ಮೈಸೂರಿಗೆ ಆಗಮಿಸುತ್ತಿರುವ ವಿಷಯ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದೇ ಆಗಸ್ಟ್ ನೇ ತಾರೀಕು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿರುವ 'ಯುವಜನ ಮಹೋತ್ಸವ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವಿಷಯವನ್ನು ತಮ್ಮ ಪೇಜ್‌ಗಳಲ್ಲಿ ಶೇರ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. "75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿರುವ 'ಯುವಜನ ಮಹೋತ್ಸವ' ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ 'ಯಶ್ ಬಾಸ್' ಅವರು ಮೈಸೂರಿಗೆ ಇದೇ 11ನೇ ತಾರೀಕಿನಂದು ಆಗಮಿಸಲಿದ್ದಾರೆ." ಎಂದು ಯಶ್ ಅಭಿಮಾನಿಗಳು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

  ಯಶ್ ಸಿನಿಮಾಗಾಗಿ ಕಾಯ್ತಿರೋ ಫ್ಯಾನ್ಸ್

  ಯಶ್ ಸಿನಿಮಾಗಾಗಿ ಕಾಯ್ತಿರೋ ಫ್ಯಾನ್ಸ್

  'ಕೆಜಿಎಫ್ 2' ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಯಶಸ್ಸಿನ ತುತ್ತ ತುದಿಯಲ್ಲಿರುವ ನಟ ಹೊಸ ಸಿನಿಮಾ ಅನೌನ್ಸ್ ಮಾಡದೆ ಇರೋದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಂತೂ ನಿಜ. ಆದರೆ, ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಮೇಲೆ ಅಂತಹದ್ದೇ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡುವುದಕ್ಕೆ ಯಶ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಈ ಕಾರಣಕ್ಕೆ ರಾಕಿಂಗ್ ಅಭಿಮಾನಿಗಳು ಇನ್ನು ಸ್ವಲ್ಪ ದಿನ ಕಾಯಲೇಬೇಕು.

  ನಾಗಚೈತನ್ಯ ಅಚ್ಚು ಮೆಚ್ಚಿನ ನಟ ಯಶ್

  ನಾಗಚೈತನ್ಯ ಅಚ್ಚು ಮೆಚ್ಚಿನ ನಟ ಯಶ್

  ನಾಗ ಚೈತನ್ಯ ಸದ್ಯ ತಮ್ಮ ಮೊದಲ ಬಾಲಿವುಡ್‌ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಿಮ್ಮ ಅಚ್ಚು ಮೆಚ್ಚಿನ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಯಾರು ಎಂದು ನಿರೂಪಕರು ಪ್ರಶ್ನೆ ಮಾಡಿದ್ದರು. ಆಗ ನಾಗಚೈತನ್ಯ ರಾಕಿಂಗ್ ಸ್ಟಾರ್ ಯಶ್ ಹೆಸರನ್ನು ಹೇಳಿದ್ದಾರೆ. ಸದ್ಯ ಈ ವಿಡಿಯೋವನ್ನು ಯಶ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

  Recommended Video

  ನನ್ ಹತ್ರ ಬಟ್ಟೆ ತೊಗೊಳಕ್ಕು ದುಡ್ಡಿರ್ಲಿಲ್ಲ | Mahabala Raam | Vikranth Rona | Sudeep | Yash *Interview
  English summary
  Yash Chief Guest for Yuvajana Mahotsav program organized at Mysuru on August 11, Know More.
  Tuesday, August 9, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X