'ಕುರುಕ್ಷೇತ್ರ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಕೊಟ್ರು 'ಬಿಗ್' ನ್ಯೂಸ್

By Suneel

ಚಂದನವನದಲ್ಲಿ ಸದ್ಯದಲ್ಲಿ ಸೆಟ್ಟೇರದೇ ದಿನದಿಂದ ದಿನಕ್ಕೆ ಅತಿ ಹೆಚ್ಚು ಕುತೂಹಲ ಮೂಡಿಸುತ್ತಿರುವ ಚಿತ್ರ 'ಕುರುಕ್ಷೇತ್ರ'.

'ಕುರುಕ್ಷೇತ್ರ' ಚಿತ್ರದ ಒಂದೊಂದೆ ಪಾತ್ರಗಳು ನಿಧಾನವಾಗಿ ಬಹಿರಂಗವಾಗುತ್ತಿವೆ. ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು ಮತ್ತು ಹಿರಿಯ ನಟರು ಅಭಿಸುವ ಬಗ್ಗೆ ಕೇಳಿಬಂದಿದ್ದು, ಈಗಾಗಲೇ ರವಿಚಂದ್ರನ್, ದರ್ಶನ್ ನಟಿಸುವುದು ಪಕ್ಕಾ ಆಗಿರುವುದರಿಂದ ಚಿತ್ರದ ಬಗೆಗಿನ ನಿರೀಕ್ಷೆ ಮಟ್ಟ ಬೆಟ್ಟದಷ್ಟಾಗಿದೆ.

ಅಂದಹಾಗೆ ಚಿತ್ರದ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ರಾಕಿಂಗ್ ಸ್ಟಾರ್ ಯಶ್ 'ಕುರುಕ್ಷೇತ್ರ ಚಿತ್ರದಲ್ಲಿ ನಟಿಸುತ್ತಾರಾ? ಎಂಬ ಕುತೂಹಲಕಾರಿ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮುಂದೆ ಓದಿರಿ.

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರ

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರ

ನಿರ್ಮಾಪಕ ಮುನಿರತ್ನ ರವರು ಕನ್ನಡದ ಬಿಗ್‌ ಸ್ಟಾರ್ ಗಳಾದ ಸುದೀಪ್, ದರ್ಶನ್, ಉಪೇಂದ್ರ, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ರವರ ಮಹಾಸಂಗಮದಲ್ಲಿ 'ಕುರುಕ್ಷೇತ್ರ' ಸಿನಿಮಾ ಮಾಡುವ ಮಹಾದಾಸೆ ಹೊಂದಿದ್ದರು. ಆದರೆ ಈ ಸ್ಟಾರ್ ಗಳ ಪೈಕಿಯಲ್ಲಿ ದರ್ಶನ್ ಒಬ್ಬರು ಮಾತ್ರ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಸುದೀಪ್ ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಬಗ್ಗೆ ಖಚಿತ ಪಡಿಸಿದ್ದಾರೆ. ಈಗ ಹಲವು ದಿನಗಳಿಂದ ಕಾಡುತ್ತಿದ್ದ 'ಯಶ್ ಈ ಚಿತ್ರದಲ್ಲಿ ನಟಿಸುತ್ತಾರಾ?' ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

'ಕುರುಕ್ಷೇತ್ರ'ದಲ್ಲಿ ಯಶ್ ನಟಿಸುತ್ತಾರಾ?

'ಕುರುಕ್ಷೇತ್ರ'ದಲ್ಲಿ ಯಶ್ ನಟಿಸುತ್ತಾರಾ?

'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸುವ ಬಿಗ್ ಸ್ಟಾರ್ ಗಳ ಪೈಕಿ ಯಶ್ ರವರ ಹೆಸರು ಕೇಳಿಬಂದಿತ್ತು. ಆದರೆ ಈವರೆಗೆ ಯಶ್ ಈ ಚಿತ್ರದಲ್ಲಿ ಅಭಿನಯಿಸುತ್ತಾರಾ/ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಈಗ ಅದಕ್ಕೆ ಸ್ವತಃ ಯಶ್ ರವರೇ ಉತ್ತರಿಸಿದ್ದು ನಾನು ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದಿದ್ದಾರೆ.

ಅಭಿಮಾನಿ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಉತ್ತರ

ಅಭಿಮಾನಿ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಉತ್ತರ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಒಬ್ಬರು ಅವರ ಫೇಸ್ ಬುಕ್ ಪುಟದಲ್ಲಿ, "ಅಣ್ಣಾ ನೀವು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತೀರಾ???" ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಯಶ್ 'NO' ಎಂದು ಉತ್ತರಿಸಿದ್ದಾರೆ. ಇದರಿಂದ ಯಸ್ 'ಕುರುಕ್ಷೇತ್ರ' ಚಿತ್ರದಲ್ಲಿ ಕಾಣಿಸುಕೊಳ್ಳುವುದಿಲ್ಲ ಎಂಬುದು ಪಕ್ಕಾ ಆಗಿದೆ.

'ಕೆಜಿಎಫ್'ನಲ್ಲಿ ಯಶ್ ಬ್ಯುಸಿ

'ಕೆಜಿಎಫ್'ನಲ್ಲಿ ಯಶ್ ಬ್ಯುಸಿ

ಕನ್ನಡಿಗರ ನೆಚ್ಚಿನ 'ರಾಜಾಹುಲಿ' ಯಶ್ ರವರು ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರದಲ್ಲಿ ಬ್ಯುಸಿ ಆಗಿದ್ದು, ಹಿಂದೆಂದಿಗೂ ಕಂಡಿರದ ವಿಭಿನ್ನ ಲುಕ್ ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕಿರಂಗಂದೂರ್ ಬಂಡವಾಳ ಹೂಡಿದ್ದಾರೆ.

'ಕುರುಕ್ಷೇತ್ರ'ದಲ್ಲಿ ಎರಡು ಪಾತ್ರಗಳಲ್ಲಿ ಡಿಬಾಸ್

'ಕುರುಕ್ಷೇತ್ರ'ದಲ್ಲಿ ಎರಡು ಪಾತ್ರಗಳಲ್ಲಿ ಡಿಬಾಸ್

ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ರವರು ದುರ್ಯೋಧನ ಮತ್ತು ಕರ್ಣ ಎರಡು ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಫಿಕ್ಸ್ ಆಗಿರುವ ಇತರೆ ಪಾತ್ರಧಾರಿಗಳು

ಫಿಕ್ಸ್ ಆಗಿರುವ ಇತರೆ ಪಾತ್ರಧಾರಿಗಳು

'ಕುರುಕ್ಷೇತ್ರ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸುವುದು ಪಕ್ಕಾ ಆಗಿದೆ. ಇನ್ನು ದ್ರೋಣಾಚಾರ್ಯ ಪಾತ್ರದಲ್ಲಿ ಹಿರಿಯ ನಟ ಶ್ರೀನಿವಾಸ ಮೂರ್ತಿ, ಧೃತರಾಷ್ಟ್ರನ ಪಾತ್ರದಲ್ಲಿ ನಟ ಶ್ರೀನಾಥ್ ಮಿಂಚಲಿದ್ದಾರೆ ಎನ್ನಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಆಗಿಲ್ಲ.

ಚಿತ್ರೀಕರಣ ಆರಂಭ ಯಾವಾಗ?

ಚಿತ್ರೀಕರಣ ಆರಂಭ ಯಾವಾಗ?

'ಸಂಗೊಳ್ಳಿ ರಾಯಣ್ಣ' ಖ್ಯಾತಿಯ ನಾಗಣ್ಣ 'ಕುರುಕ್ಷೇತ್ರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮುನಿರತ್ನ ನಿರ್ಮಾಣದ ಈ ಚಿತ್ರಕ್ಕೆ ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಜುಲೈ 23 ರಂದು ಸೆಟ್ಟೇರಲಿದೆ ಎಂದು ತಿಳಿದಿದೆ.

More from Filmibeat

English summary
Kannada Actor Rocking Star Yash has taken his Facebook page to clarifie, 'He is not part of 'Kurukshetra' Movie'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X