For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್ ಹಾಕಿದ್ದ ಪೋಸ್ಟ್ ಗುಟ್ಟು ಬಿಚ್ಚಿಟ್ಟ ಯಶ್

  |
  ರಾಧಿಕಾ ಪಂಡಿತ್ ಹಾಕಿದ್ದ ಪೋಸ್ಟ್ ಗುಟ್ಟು ಬಿಚ್ಚಿಟ್ಟ ಯಶ್ | FILMIBEAT KANNADA

  ಕಳೆದ ಎರಡು ದಿನದ ಹಿಂದೆ ಫೇಸ್ ಬುಕ್ ನಲ್ಲಿ ನಟಿ ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದರು. ಕೈಯಲ್ಲಿ 'ಆರ್' ಅಕ್ಷರದ ವಸ್ತುವೊಂದನ್ನ ಇಟ್ಕೊಂಡು 'R Stand for....' ಎಂದು ಕೇಳಿದ್ದರು.

  ಈ ಪೋಸ್ಟ್ ನೋಡಿದ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು, ಮಗಳಿಗೆ 'ಆರ್' ಅಕ್ಷರದಿಂದ ಹೆಸರಿಡಲು ನಿರ್ಧರಿಸಿರಬಹುದು. ಅದಕ್ಕೆ 'ಆರ್' ಎಂದು ಸುಳಿವು ಕೊಡ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.

  ಯಶ್-ರಾಧಿಕಾ ಮುದ್ದು ಮಗಳಿಗೆ ಅಂಬಿ ಆರ್ಡರ್ ಕೊಟ್ಟಿದ್ದ ಉಡುಗೊರೆ ರೆಡಿ

  ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದು, ''ಹಾಗೇನೂ ಇಲ್ಲ, ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಅಂತಹ ಹೆಸರಿರಬೇಕು ಅಂತ ಪೋಸ್ಟ್ ಹಾಕಿದ್ದಾರೆ ಅಷ್ಟೇ. ಮಗಳಿಗೆ ಇನ್ನು ಯಾವುದು ಹೆಸರು ಅಂತಿಮ ಮಾಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

  ಯಶ್-ರಾಧಿಕಾ ಪಂಡಿತ್ ಪುತ್ರಿಯ ಹೆಸರೇನು.? ನಾಮಕರಣ ಯಾವಾಗ.?

  'ಅಭಿಮಾನಿಗಳೇ ಹಲವು ಹೆಸರುಗಳನ್ನ ಸೂಚಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಸದ್ಯದಲ್ಲೇ ಸಂಪ್ರದಾಯವಾಗಿ ಒಂದು ಹೆಸರಿಡುತ್ತೇವೆ. ಆಮೇಲೆ ಬೇಕಾದರೇ ನಮಗೆ ಇಷ್ಟ ಬಂದಂತೆ ಕರೆಯೋಣ'' ಎಂದು ಯಶ್ ಹೇಳಿದರು.

  ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಯಶ್, ಈ ವಿಷ್ಯವನ್ನ ಹಂಚಿಕೊಂಡರು. ಸದ್ಯ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಲು ತಯಾರಾಗಿರುವ ಯಶ್, ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Kannada actress Radhika pandith husband Yash clears doubt about, what her wife post in facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X