For Quick Alerts
  ALLOW NOTIFICATIONS  
  For Daily Alerts

  ಆಲಿಯಾ-ಅನುಷ್ಕಾ ಇಬ್ಬರಲ್ಲಿ ಯಶ್ ಆಯ್ಕೆ ಮಾಡಿಕೊಂಡಿದ್ದು ಯಾರನ್ನ.?

  |

  ರಾಕಿಂಗ್ ಸ್ಟಾರ್ ಯಶ್ ಈಗ ತೆಲುಗು, ತಮಿಳು, ಹಿಂದಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಕೆಜಿಎಫ್ ಸಿನಿಮಾದ ಪ್ರಚಾರಕ್ಕಾಗಿ ಮುಂಬೈ, ಚೆನ್ನೈ, ಹೈದರಾಬಾದ್ ನಲ್ಲಿ ಓಡಾಡ್ತಿದ್ದಾರೆ.

  ಇದರ ನಡುವೆ ಬಿಟೌನ್ ನಲ್ಲಿ ಯಶ್ ನೀಡಿರುವ ಸಂದರ್ಶನವೊಂದು ಗಮನ ಸೆಳೆಯುತ್ತಿದೆ. ಸೌತ್ ಇಂಡಸ್ಟ್ರಿ ಹಾಗೂ ಕನ್ನಡ ಇಂಡಸ್ಟ್ರಿಯ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ರಾಕಿಂಗ್ ಉತ್ತರ ಕೊಟ್ಟಿರುವ ಯಶ್, ರಜನಿಕಾಂತ್, ಕಮಲ್ ಹಾಸನ್, ಶಾರೂಖ್ ಖಾನ್, ಅಮಿತಾಭ್ ಬಚ್ಚನ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

  ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

  ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಮತ್ತು ಆಲಿಯಾ ಭಟ್ ಇಬ್ಬರಲ್ಲಿ ಯಾರು ನಿಮ್ಮ ಆಯ್ಕೆ ಎಂದಾಗ ರಾಕಿಂಗ್ ಸ್ಟಾರ್ ಯೋಚನೆ ಮಾಡಿ ಒಬ್ಬರ ಹೆಸರನ್ನ ಸೂಚಿಸಿದ್ದಾರೆ. ಹಾಗಿದ್ರೆ, ಯಶ್ ಸಂದರ್ಶನದ ಪ್ರಮುಖ ಅಂಶಗಳು ಏನು.? ಹೇಗಿತ್ತು ಯಶ್ ಉತ್ತರಗಳು ಮುಂದೆ ಓದಿ....

  ರಜನಿ, ಕಮಲ್, ಶಾರೂಖ್ ಏನು.?

  ರಜನಿ, ಕಮಲ್, ಶಾರೂಖ್ ಏನು.?

  ರಜನಿಕಾಂತ್, ಕಮಲ್ ಹಾಸನ್, ಶಾರೂಖ್ ಖಾನ್ ಬಗ್ಗೆ ಒಂದೇ ಪದಗಳಲ್ಲಿ ಹೇಳುವುದಾದರೇ ಏನು ಹೇಳುತ್ತೀರಾ ಎಂದು ನಿರೂಪಕರು ಕೇಳಿದ್ದ ಪ್ರಶ್ನೆ ಯಶ್ ಉತ್ತರಿಸಿದ್ದಾರೆ. ರಜನಿ-ತಲೈವಾ (ಗಾಡ್), ಕಮಲ್ ಹಾಸನ್-ಪ್ರತಿಭೆಯ ಗಣಿ, ಶಾರೂಖ್-ನನಗೆ ಸ್ಫೂರ್ತಿ, ಅಮಿತಾಭ್ ಬಚ್ಚನ್-ಜಂಟಲ್ ಮ್ಯಾನ್, ಲೆಜೆಂಡ್ ಎಂದಿದ್ದಾರೆ.

  ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ

  ರಾಧಿಕಾ ಅಥವಾ ಶ್ರೀನಿಧಿ ಶೆಟ್ಟಿ.?

  ರಾಧಿಕಾ ಅಥವಾ ಶ್ರೀನಿಧಿ ಶೆಟ್ಟಿ.?

  ನಿಮ್ಮೆ ನೆಚ್ಚಿನ ಸಹನಟಿ ಯಾರು ಎಂದು ಕೇಳಿ ರಾಧಿಕಾ ಪಂಡಿತ್ ಮತ್ತು ಶ್ರೀನಿಧಿ ಶೆಟ್ಟಿ ಎಂದು ಆಯ್ಕೆ ನೀಡಲಾಗಿತ್ತು. ಇದಕ್ಕೆ ಉತ್ತರ ಕೊಟ್ಟ ಯಶ್, ''ನನ್ನ ಆಯ್ಕೆ ರಾಧಿಕಾ ಪಂಡಿತ್, ನನ್ನ ಪತ್ನಿ'' ಎಂದು ಹೇಳಿದ್ರು.

  ಅಭಿಮಾನಿಗಳ ಪ್ರೀತಿ ಕಂಡು ಮೂಕವಿಸ್ಮಿತರಾದ ರಾಧಿಕಾ ಪಂಡಿತ್

  ಆಲಿಯಾ ಭಟ್-ಅನುಷ್ಕಾ ಶರ್ಮಾ

  ಆಲಿಯಾ ಭಟ್-ಅನುಷ್ಕಾ ಶರ್ಮಾ

  ಇನ್ನು ಬಾಲಿವುಡ್ ನಲ್ಲಿ ಯಾರು ನೆಚ್ಚಿನ ನಟಿ ಎಂದು ಕೇಳಿ ಅನುಷ್ಕಾ ಶರ್ಮಾ ಮತ್ತು ಆಲಿಯಾ ಭಟ್ ಆಯ್ಕೆ ನೀಡಲಾಗಿತ್ತು. ಇವರಿಬ್ಬರಲ್ಲಿ ಯಶ್ ಆಯ್ಕೆ ಮಾಡಿಕೊಂಡ ನಟಿ ಆಲಿಯಾ ಭಟ್.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  ಯಾವ ಬಾಹುಬಲಿ ಇಷ್ಟ.?

  ಯಾವ ಬಾಹುಬಲಿ ಇಷ್ಟ.?

  ಎಸ್ ಎಸ್ ರಾಜಮೌಳಿ ನಿರ್ದೇಶನ 'ಬಾಹುಬಲಿ ದಿ ಬಿಗಿನಿಂಗ್' ಅಥವಾ 'ಬಾಹುಬಲಿ ದಿ ಕನ್ ಕ್ಲೂಷನ್' ಈ ಎರಡು ಚಿತ್ರಗಳಲ್ಲಿ ಯಾವುದು ಇಷ್ಟ ಎಂದು ಕೇಳಿದ್ದ ಪ್ರಶ್ನೆಗೆ ''ಬಾಹುಬಲಿ ದಿ ಕನ್ ಕ್ಲೂಷನ್'' ಎಂದು ಉತ್ತರ ನೀಡಿದರು.

  ರಾಜಮೌಳಿ ಚಿತ್ರದಲ್ಲಿ ನಟಿಸ್ತಾರಾ ಯಶ್.? ರಾಕಿಂಗ್ ಸ್ಟಾರ್ ಬಿಚ್ಚಿಟ್ಟ ಸತ್ಯ ಇದು.!

  ಕೆಜಿಎಫ್ ದಾಖಲೆಯ ಚಿತ್ರ

  ಕೆಜಿಎಫ್ ದಾಖಲೆಯ ಚಿತ್ರ

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರಗಳ ಪೈಕಿ, ಕೆಜಿಎಫ್ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಎಂದು ಸ್ವತಃ ಯಶ್ ಅವರೇ ಒಪ್ಪಿಕೊಂಡಿದ್ದಾರೆ. ಸದ್ಯ, ಪ್ರೀ ರಿಲೀಸ್ ನಿಂದಲೇ ಹೆಚ್ಚು ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ.

  ಕೆಜಿಎಫ್ ಟ್ರೈಲರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಲಿವುಡ್ ನಟಿ.!

  English summary
  Kannada actor, rocking star yash describes about rajinikanth, kamal haasan, shahrukh khan and amitabh bachchan in bollywood interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X