ಅಯಿರಾ ಯಶ್ ಮತ್ತು ಚರಿಷ್ಮಾ ರಾವ್ ಕೃಷ್ಣಾವತಾರಗಳು
ಅಯಿರಾ ಯಶ್ ಮತ್ತು ರಾಧಿಕಾ ದಂಪತಿಯ ಮುದ್ದನ ಮಗಳು. ಚರಿಷ್ಮಾ ಕೃಷ್ಣ ಅಜೇಯ್ ರಾವ್ ಮಗಳು. ಇಬ್ಬರು ಕೂಡ ಸ್ಯಾಂಡಲ್ ವುಡ್ ನ ಕ್ಯೂಟ್ ಬೇಬಿ. ಅಯಿರಾ ಮತ್ತು ಚರೀಷ್ಮಾ ಇಬ್ಬರು ಕೃಷ್ಣನ ಅವತಾರದಲ್ಲಿ ಹೇಗೆ ಕಾಣಿಸುತ್ತಾರೆ ಗೊತ್ತಾ? ಮುದ್ದು ಮುದ್ದಾದ ಈ ಎರಡು ಕೃಷ್ಣನನ್ನು ನೊಡಲು ಎರಡು ಕಣ್ಣುಗಳು ಸಾಲುತಿಲ್ಲ.
ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಅಯಿರಾ ಮತ್ತು ಚರಿಷ್ಮಾ ಇಬ್ಬರಿಗೂ ಕೃಷ್ಣನ ವೇಷ ಧರಿಸಿ ಫೊಟೋಶೂಟ್ ಮಾಡಿಸಲಾಗಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ಈ ಮುದ್ದು ಮುದ್ದಾದ ಕೃಷ್ಣಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿವೆ.

ಅಯಿಯಾ ಯಶ್ ಗೆ ಒಂಬತು ತಿಂಗಳು. ಪ್ರತೀಬಾರಿಯೂ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಈ ಬಾರಿ ಕೃಷ್ಣ ಅಯಿರಾ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ.

ಇನ್ನು ಕೃಷ್ಣ ಚರಿಷ್ಮಾ ರಾವ್ ಕೂಡ ಎಲ್ಲರ ಮನ ಕದ್ದಿದ್ದಾಳೆ. ಮೊನ್ನೆ ಮೊನ್ನೆಯಷ್ಟೆ ಬಸವಣ್ಣ ವೇಷ ಧರಿಸಿದ್ದ ಅಜೇಯ್ ರಾವ್ ದಂಪತಿ. ಈ ಬಾರಿ ಕೃಷ್ಣನ ವೇಷ ಧರಿಸಿದ್ದಾರೆ. ಕೃಷ್ಣ ಚರಿಷ್ಮಾ ಕೂಡ ಫೊಟೋಗೆ ತರಹೇವಾರಿ ಫೋಸ್ ನೀಡಿದ್ದಾಳೆ. ಅಪ್ಪ ಅಜೇಯ್ ರಾವ್ ಕೃಷ್ಣ ಅಂತಾನೆ ಖ್ಯಾತಿಗಳಿಸಿದ್ದಾರೆ. ಹಾಗಾಗಿ ಮಗಳನ್ನು ಮುದ್ದು ಕೃಷ್ಣ ಮಾಡಿ ಫೊಟೋಶೂಟ್ ಮಾಡಿಸಿದ್ದಾರೆ.


Click it and Unblock the Notifications











