For Quick Alerts
  ALLOW NOTIFICATIONS  
  For Daily Alerts

  ಸೈಮಾ ಪ್ರಶಸ್ತಿ ಪಡೆದ ರಾಕಿ ಭಾಯ್ ಅದನ್ನ ಅರ್ಪಿಸಿದ್ದು ಯಾರಿಗೆ?

  |

  2019ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಕೆಜಿಎಫ್ ಚಿತ್ರದ ಅದ್ಭುತ ನಟನೆಗಾಗಿ ಈ ಅವಾರ್ಡ್ ಗಳಿಸಿಕೊಂಡರು. ಜೊತೆಗೆ ಸ್ಟೈಲ್ ಐಕಾನ್ ಎಂಬ ವಿಶೇಷವಾದ ಪ್ರಶಸ್ತಿಗೆ ಕೂಡ ರಾಕಿ ಭಾಯ್ ಪಾತ್ರರಾಗಿದ್ದಾರೆ.

  ಸೈಮಾ ಪ್ರಶಸ್ತಿ ಪಡೆದ ಯಶ್ ಅವರು ಫೋಟೋ ಮಾತ್ರ ಬಹಿರಂಗವಾಗಿತ್ತು. ಇದೀಗ, ಯಶ್ ವೇದಿಕೆಯಲ್ಲಿ ಏನು ಮಾತನಾಡಿದ್ರು ಎಂಬುದರ ವಿಡಿಯೋ ಝಲಕ್ ಕೂಡ ಯೂಟ್ಯೂಬ್ ನಲ್ಲಿ ಲಭ್ಯವಾಗಿದೆ.

  ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಕಿ ಬಾಯ್ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಕಿ ಬಾಯ್

  ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಂದ ಸೈಮಾ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡ ಯಶ್, ಮೊದಲಿಗೆ ಮೆಗಾಸ್ಟಾರ್ ಗೆ ಥ್ಯಾಂಕ್ಸ್ ಹೇಳಿದರು. ನಂತರ ಮಾತು ಮುಂದುವರಿಸಿದ ಯಶ್, ಈ ಪ್ರಶಸ್ತಿಯನ್ನ ವಿಶೇಷವಾದ ವ್ಯಕ್ತಿಗಳಿಗೆ ಅರ್ಪಿಸಿ ಮತ್ತಷ್ಟು ಜೋಶ್ ಹೆಚ್ಚಿಸಿದರು. ಅಷ್ಟಕ್ಕೂ, ಯಶ್ ಅವಾರ್ಡ್ ಡೆಡಿಕೇಟ್ ಮಾಡಿದ್ದು ಯಾರಿಗೆ? ಮುಂದೆ ಓದಿ....

  ಇದು ಬರಿ ಸಿನಿಮಾ ಅಲ್ಲ

  ಇದು ಬರಿ ಸಿನಿಮಾ ಅಲ್ಲ

  ''ಕೆಜಿಎಫ್ ಎನ್ನುವುದು ಬರಿ ಸಿನಿಮಾ ಅಲ್ಲ. ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಕನಸು. ಕನ್ನಡ ಚಿತ್ರರಂಗದ ಗುಣಮಟ್ಟ ಹಾಗೂ ಇನ್ನೊಂದು ಲೆವಲ್ ಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಭರವಸೆ ಹುಟ್ಟಿಸಿದ ಚಿತ್ರ ಇದು'' ಎಂದು ಕೆಜಿಎಫ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  Siima Awards 2019: ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿSiima Awards 2019: ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ

  ಪ್ರಶಾಂತ್ ಮತ್ತು ವಿಜಯ್ ಗೆ ಥ್ಯಾಂಕ್ಸ್

  ಪ್ರಶಾಂತ್ ಮತ್ತು ವಿಜಯ್ ಗೆ ಥ್ಯಾಂಕ್ಸ್

  ಕೆಜಿಎಫ್ ಎಂಬ ಅದ್ಭುತ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ ಮತ್ತು ಅದರ ಹಿಂದೆ ಬೆನ್ನೆಲುಬಾಗಿ ನಿಂತ ವಿಜಯ್ ಕಿರಗಂದೂರ್ ಅವರನ್ನ ನೆನಪಿಸಿಕೊಂಡರು. ಅವರಿಬ್ಬರಿಗೂ ವಿಶೇಷ ಧನ್ಯವಾದ ತಿಳಿಸಿದರು. ಮತ್ತು ಕೆಜಿಎಫ್ ಚಿತ್ರಕ್ಕೆ ಕೆಲಸ ಮಾಡಿದ ಎಲ್ಲರಿಗೂ ಹಾಗೂ ಭಾರತೀಯ ಸಿನಿಮಾರಂದ ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳಿದರು.

  Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ' Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ'

  ವಿಶೇಷ ವ್ಯಕ್ತಿಗಳಿಗೆ ಅರ್ಪಣೆ

  ವಿಶೇಷ ವ್ಯಕ್ತಿಗಳಿಗೆ ಅರ್ಪಣೆ

  ಯಶ್ ಪಡೆದ ಸೈಮಾ ಪ್ರಶಸ್ತಿಯನ್ನ ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದರು. ಕನ್ನಡ ಚಿತ್ರರಂಗವನ್ನ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಅಂತ, ಸಣ್ಣಪುಟ್ಟ ರೂಂಗಳಲ್ಲಿ ಕಥೆ ಮಾಡ್ಕೊಂಡು ಕುಳಿತಿರುವ ಭವಿಷ್ಯದ ನಿರ್ದೇಶಕರಿಗೆ ಅರ್ಪಿಸಿದ್ದಾರೆ.

  Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್

  ಕೆಜಿಎಫ್ ಗೆ ಸಿಕ್ಕ ಪ್ರಶಸ್ತಿಗಳು ಎಷ್ಟು

  ಕೆಜಿಎಫ್ ಗೆ ಸಿಕ್ಕ ಪ್ರಶಸ್ತಿಗಳು ಎಷ್ಟು

  2019ರ ಸೈಮಾದಲ್ಲಿ ಕೆಜಿಎಫ್ ಸಿನಿಮಾ ಅಬ್ಬರಿಸಿದೆ. ಅತ್ಯುತ್ತಮ ನಟ ಯಶ್, ಅತ್ಯುತ್ತಮ ಸಿನಿಮಾ ಕೆಜಿಎಫ್, ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್, ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ, ಅತ್ಯುತ್ತಮ ಪೋಷಕ ನಟ ಅಚ್ಚುತ್ ಕುಮಾರ್, ಅತ್ಯುತ್ತಮ ಪೋಷಕ ನಟಿ ಅರ್ಚನಾ ಜೋಯಿಸ್ ಹಾಗೂ ಅತ್ಯುತ್ತಮ ಗಾಯಕ ವಿಭಾಗದಲ್ಲಿ ವಿಜಯ ಪ್ರಕಾಶ್ ಮತ್ತು ತಂಡಕ್ಕೆ ಸೈಮಾ ಪ್ರಶಸ್ತಿ ಲಭಿಸಿದೆ.

  English summary
  Rocking star yash dedicated to his siima award for special persons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X