»   » ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಪರ ಯಶ್ ಸಮರ.!

ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಪರ ಯಶ್ ಸಮರ.!

Posted By:
Subscribe to Filmibeat Kannada

''ನಮ್ಮ ನಮ್ಮಲ್ಲಿ ಕಿತ್ತಾಟ ಇಲ್ಲ. ಕಾಂಪಿಟೇಷನ್ ಇದೆ ನಿಜ. ಹಾಗಂತ ನಾವೆಲ್ಲಾ ವೈರಿಗಳು ಅಲ್ಲ. ನಾವೆಲ್ಲಾ ಒಂದೇ. ಅಭಿಮಾನಿಗಳು ಸ್ವಲ್ಪ ಕೂಲ್ ಆಗಿರಬೇಕು'' ಅಂತ ಆವಾಗವಾಗ ರಾಕಿಂಗ್ ಸ್ಟಾರ್ ಯಶ್ ಪರಿ ಪರಿಯಾಗಿ ಹೇಳುತ್ತಿರುತ್ತಾರೆ.

ಅಲ್ಲದೇ, ಎಲ್ಲಾ ನಟರ ಜೊತೆ ಅನ್ಯೋನ್ಯವಾಗಿರುವ ಯಶ್, ಎಲ್ಲರ ಸಿನಿಮಾಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್ ಮಾಡ್ತಿದ್ದಾರೆ.

ಇಂತಿಪ್ಪ ಯಶ್ ಕೆಲ ದಿನಗಳ ಹಿಂದೆಯಷ್ಟೇ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರವನ್ನ ವೀಕ್ಷಿಸಿ ಜೈ ಅಂದಿದ್ದರು. ಈಗ ಅದೇ ಸುದೀಪ್ ಪರ ಫೇಸ್ ಬುಕ್ ನಲ್ಲಿ ಯಶ್ ಸಮರಕ್ಕಿಳಿದ್ದಿದ್ದಾರೆ. ಅಸಲಿಗೆ ಅಂಥದ್ದು ಏನಾಯ್ತು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...

ಶುರುವಾಗಿದ್ದು ಶಿವರಾಜ್ ಕುಮಾರ್ ಇಂದ.!

ಅದು ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ರಿಲೀಸ್ ಆಗುವ ಸಂದರ್ಭ. ರಾಕಿಂಗ್ ಸ್ಟಾರ್ ಯಶ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ 'ವಜ್ರಕಾಯ' ಚಿತ್ರಕ್ಕೆ ಶುಭಾಶಯ ಕೋರಿ ಒಂದು ಸ್ಟೇಟಸ್ ಹಾಕಿದ್ದರು. [ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]

'ವಜ್ರಕಾಯ' ಬಗ್ಗೆ ಯಶ್ ಹೇಳಿದ್ದೇನು?

''ನಮ್ಮ ಪ್ರೀತಿಯ ಡಾರ್ಲಿಂಗ್ ಶಿವಣ್ಣ ಅಭಿನಯದ 'ವಜ್ರಕಾಯ' ರಿಲೀಸ್ ಆಗ್ತಿದೆ. ಥಿಯೇಟರ್ ಟಾಪ್ ಕಿತ್ತೋಗ್ಬೇಕು. ಹಂಗೆ ಶಿಳ್ಳೆ ಹೊಡೆದು ಎಂಜಾಯ್ ಮಾಡಿ. 'ವಜ್ರಕಾಯ' ಚಿತ್ರತಂಡಕ್ಕೆ ನನ್ನ ಕಡೆಯಿಂದ ಗುಡ್ ಲಕ್'' ಅಂತ ಯಶ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]

ಶುರುವಾಯ್ತು ನೋಡಿ ಕಾಮೆಂಟ್ ಗಳು

ಸ್ಟೇಟಸ್ ಅಪ್ ಲೋಡ್ ಆದ ಕ್ಷಣದಲ್ಲೇ ನೂರಾರು ಕಾಮೆಂಟ್ ಗಳು ಬರೋಕೆ ಶುರುವಾಯ್ತು. ಯಶ್ ವಿಶಾಲ ಹೃದಯಕ್ಕೆ ಕೆಲವರು ಹ್ಯಾಟ್ಸ್ ಆಫ್ ಹೇಳಿದರೆ, ಇನ್ನೂ ಕೆಲವರು 'ವಜ್ರಕಾಯ' ಚಿತ್ರಕ್ಕೆ ಶುಭಾಶಯ ಕೋರಿದರು. ಆಗ, ಮಧ್ಯದಲ್ಲಿ ಎಂಟ್ರಿಕೊಟ್ಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರು, ಸುದೀಪ್ ಬಗ್ಗೆ ಬಾಯಿಗೆ ಬಂದಹಾಗೆ ಬಯ್ಯೋಕೆ ಶುರುಮಾಡಿದರು. [ಮೈಸೂರಲ್ಲಿ ಪ್ರೇಕ್ಷಕರೊಂದಿಗೆ 'ರನ್ನ' ನೋಡಿದ ಯಶ್]

ಸುದೀಪ್ ಬಗ್ಗೆ ಅಭಿಮಾನಿ ಹೇಳಿದ್ದೇನು?

''ಯಶ್ ನೀವು ಉತ್ತಮ ನಟ. ಸುದೀಪ್ ಅವರನ್ನ ನೀವು ನಂಬಬೇಡಿ. ಅವರಿಗೆ ಸಪೋರ್ಟ್ ಮಾಡಬೇಡಿ. ಸುದೀಪ್ ಇಂಡಸ್ಟ್ರಿಗೆ ಬಂದಿದ್ದೇ ಡಿವೈಡ್ ಮಾಡೋಕೆ. ನೀವು ಒಳ್ಳೆಯವರು. ನೀವು ಹೀಗೇ ಇರಬೇಕು. ಜೈ ಶಿವಣ್ಣ. ಜೈ ಯಶ್. ಲವ್ ಯೂ ಬ್ರೋ'' - ಬ್ರಾವೋ ಲೇನೋ

ಅಭಿಮಾನಿ ಕಾಮೆಂಟ್ ಗೆ ತಿರುಗಿಬಿದ್ದ ಯಶ್

ಸುದೀಪ್ ಬಗ್ಗೆ ಅಭಿಮಾನಿಯಿಂದ ಹೀಗೆ ಕಾಮೆಂಟ್ ಬರ್ತಿದ್ದ ಹಾಗೆ ಯಶ್ ಕೂಡ ಮಾತಿಗಿಳಿದರು. ''ಒಬ್ಬ ಹೀರೋ ಬಗ್ಗೆ ಹಂಗೆ ಮಾತಾಡೋದು ತಪ್ಪು. ನಿಂಗೆ ಇಷ್ಟ ಇಲ್ಲ ಅಂದ್ರೆ ಸುಮ್ನೆ ಇರು. ಹಾಗೆಲ್ಲಾ ಕೆಟ್ಟದಾಗಿ ಮಾತಾಡ್ಬೇಡ.'' ಅಂತ ಯಶ್ ತಿರುಗೇಟು ನೀಡಿದ್ದಾರೆ. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]

'ಇಂಡಸ್ಟ್ರಿ ಹಾಳಾಗೋದು ಹೀಗೆ'

ಹಾಗೆ ಮಾತು ಮುಂದುವರಿಸಿದ ಯಶ್ ''ನೀವ್ ಮಾತಾಡಿದ್ರೆ ಸುದೀಪ್ ಫ್ಯಾನ್ಸ್ ಕೂಡ ಮಾತಾಡ್ತಾರೆ. ಹೀಗೆ ಇಂಡಸ್ಟ್ರಿ ಹಾಳಾಗೋದು. ಯಾರ ಬಗ್ಗೆನೂ ಯಾರೂ ಕೆಟ್ಟದಾಗಿ ಮಾತಾಡಬಾರದು. ಸೋಷಿಯಲ್ ಮೀಡಿಯಾನ ಮೀನಿಂಗ್ ಫುಲ್ ಆಗಿ ಯ್ಯೂಸ್ ಮಾಡ್ಕೋ. ಗುಡ್ ಲಕ್'' - ಯಶ್

ಫೇಸ್ ಬುಕ್ ನಲ್ಲಿ ಸಮರಕ್ಕಿಳಿದ ಸುದೀಪ್ ಅಭಿಮಾನಿಗಳು

ಯಾರೋ ಒಬ್ಬ ಅಭಿಮಾನಿ ಮಾಡಿದ ಕಿತಾಪತಿಗೆ ಅಂದು ಯಶ್ ಫೇಸ್ ಬುಕ್ ಪುಟದಲ್ಲಿ ಯುದ್ಧವೇ ನಡೆದಿದೆ. ಸುದೀಪ್ ಪರ ಅಭಿಮಾನಿಗಳು ಕತ್ತಿ ಹಿಡಿದುಕೊಂಡು ನಿಂತಿದ್ದರೆ, ಥೇಟ್ ಯಶ್ ಸ್ಟೈಲ್ ನಲ್ಲಿ ಅವರ ಫ್ಯಾನ್ಸ್ ಎಲ್ಲರನ್ನ ಕೂಲ್ ಮಾಡಿದ್ದಾರೆ.

ರಿಯಲ್ ನಲ್ಲೂ 'ಅಣ್ತಮ್ಮ'

ತೆರೆ ಮೇಲೆ ಮಾತ್ರ 'ಅಣ್ತಮ್ಮ' ಅಂತ ಡೈಲಾಗ್ ಹೊಡೆಯದೇ, ರಿಯಲ್ ನಲ್ಲೂ ಎಲ್ಲರನ್ನೂ 'ಅಣ್ತಮ್ಮ' ಅಂತ ಕರೆದು ರಾಕಿಂಗ್ ಸ್ಟಾರ್ ಯಶ್ ದಿನದಿಂದ ದಿನಕ್ಕೆ ಹೆಚ್ಚು ಖ್ಯಾತಿ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಎಲ್ಲರ ಅಭಿಮಾನಿಗಳನ್ನೂ ಪ್ರೀತಿಯಿಂದ ಕಾಣುತ್ತಿರುವ ಯಶ್, ತಮ್ಮ ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಳ್ಳುತ್ತಿರುವುದು ಸುಳ್ಳಲ್ಲ.

English summary
Kannada Actor Yash has taken his Facebook account to put an end to Fan Fights. During one such situation, Yash has defended Sudeep. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada