For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಚಿತ್ರೀಕರಣ ಮುಗಿಸಿ ಕುಟುಂಬದೊಂದಿಗೆ 'ಸ್ವರ್ಗ'ಕ್ಕೆ ಹಾರಿದ ಯಶ್!

  |

  ಸತತ ಕೆಲವು ತಿಂಗಳಿಂದ ಕೆಜಿಎಫ್ 2 ಚಿತ್ರೀಕರಣದಲ್ಲಿದ್ದ ಯಶ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಹೊರಾಂಗಣ ಚಿತ್ರೀಕರಣದಲ್ಲಿದ್ದ ಕಾರಣ ಕೊರೊನಾ ಭೀತಿಯೂ ಇದ್ದು, ಕುಟುಂಬದಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು ಯಶ್.

  ಮಾಲ್ಡೀವ್ಸ್ ಅಂದ್ರೆ ಸ್ವರ್ಗ ಅಂದ್ರು ಯಶ್ | Filmibeat Kannada

  ಆದರೆ ಈಗ ಕೆಜಿಎಫ್ 2 ಚಿತ್ರೀಕರಣ ಮುಗಿದಿದ್ದು, ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ನಟ ಯಶ್.

  ಸಿನಿಮಾ ಸೆಲೆಬ್ರಿಟಿಗಳ ಮೆಚ್ಚಿನ ಪ್ರವಾಸಿ ತಾಣವಾಗಿರುವ ಮಾಲ್ಡಿವ್ಸ್‌ಗೆ ಹೋಗಿದ್ದಾರೆ ಯಶ್-ರಾಧಿಕಾ ಹಾಗೂ ಮಕ್ಕಳು. ಯಶ್ ಕುಟುಂಬವು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ಯಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್ ಮಾತ್ರ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಯಶ್. ಮಕ್ಕಳೊಂದಿಗೆ ಬೀಚ್‌ನ ಮರಳಲ್ಲಿ ಆಟವಾಡಿ. ಮುದ್ದಿನ ಮಡದಿಯೊಂದಿಗೆ ಸೆಫ್ಲಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

  ಕೆಲವು ತಿಂಗಳ ಹಿಂದೆಯಷ್ಟೆ ಮಗನ ಹುಟ್ಟುಹಬ್ಬವನ್ನು ಗೋವಾದ ಐಶಾರಾಮಿ ಯಾಕ್ಚ್‌ ನಲ್ಲಿ ಆಚರಿಸಿದ್ದರು ಯಶ್ ಹಾಗೂ ರಾಧಿಕಾ. ಈ ಜೋಡಿ ಮದುವೆಯಾದಾಗಲೂ ಸಹ ವಿದೇಶಕ್ಕೆ ಪ್ರವಾಸ ಹೋಗಿದ್ದರು.

  English summary
  Actor Yash enjoying in Maldives with his family. He just finished KGF 2 movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X