For Quick Alerts
  ALLOW NOTIFICATIONS  
  For Daily Alerts

  ಅಂತ್ಯಕ್ರಿಯೆಗೆ ಯಶ್ ಮತ್ತು ಸಿದ್ದರಾಮಯ್ಯ ಬರಬೇಕೆಂದು ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ

  |

  ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಬರಬೇಕು ಎಂದು ಡೆಟ್ ನೋಟ್ ಬರೆದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

  ಆತ್ಮ ಹತ್ಯೆಗೆ ಮಾಡಿಕೊಂಡಾತ ಮಂಡ್ಯದ ಕೆರೆಗೋಡು ಹೊಬಳಿಯ ಕೊಡಿದೊಡ್ಡ ಗ್ರಾಮದ ಕೃಷ್ಣ ಎನ್ನುವ ಕಾಂಗ್ರೆಸ್ ಕಾರ್ಯಕರ್ತ. ಡೆತ್ ನೋಟ್ ನಲ್ಲಿ ತನ್ನ ಮೊಬೈಲ್ ಅನ್ನು ಚಿತೆಗೆ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

  ನಾನು ಯಶ್ ಮತ್ತು ಸಿದ್ದರಾಮಯ್ಯ ಅವರ ದೊಡ್ಡ ಅಭಿಮಾನಿ. ಅವರು ನನ್ನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು. ಇದು ನನ್ನ ಕೊನೆಯ ಎರಡು ಆಸೆ ಎಂದು ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

  ಡೆತ್ ನೋಟ್ ನಲ್ಲಿ ಕೃಷ್ಣ,'ನನ್ನನ್ನು ಎಲ್ಲರೂ ಕ್ಷಮಿಸಿ ಎಂದು ಬರೆದು, ತಂದೆ-ತಾಯಿಗೆ ತಕ್ಕ ಮಗನಾಗಿಲ್ಲ. ಅಣ್ಣನಿಗೆ ತಕ್ಕ ತಮ್ಮನಾಗಲಿಲ್ಲ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿಲ್ಲ, ಹುಡುಗಿಗೆ ಒಳ್ಳೆ ಹುಡುಗನಾಗಿಲ್ಲ ಎಂದು ಬರೆದಿದ್ದಾರೆ. ಜೊತೆಗೆ ಕೊನೆಯ ಎರಡು ಆಸೆಯನ್ನು ಈಡೇರಿಸುವಂತೆ ಹೇಳಿಕೊಂಡಿದ್ದಾರೆ.

  English summary
  Yash fan from Mandya ends his life: request to yash and siddaramaiah to attend his funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X