»   » ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

Posted By:
Subscribe to Filmibeat Kannada

ಸಿನಿಮಾ ನಟ ನಟಿಯರು ಒಂದು ಮಾತು ಆಡುವಾಗಲೂ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಮಾತನಾಡುವಾಗ ಸ್ವಲ್ಪ ಏನಾದರೂ ಹೆಚ್ಚು ಕಡಿಮೆ ಆದರೂ ಅದು ದೊಡ್ಡ ಸುದ್ದಿಯಾಗಿ ಬಿಡುತ್ತೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಪರಿಸ್ಥಿತಿ ಈಗ ರಶ್ಮಿಕಾ ಮಂದಣ್ಣ ಅವರದ್ದಾಗಿದೆ.

ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಯಶ್ ಬಗ್ಗೆ ಒಂದು ಮಾತನ್ನು ಆಡಿದ್ದರು. ಅದೇ ಮಾತು ಈಗ ಯಶ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ರಶ್ಮಿಕಾ ಅವರು ಯಶ್ ಗೆ ಕ್ಷಮೆ ಕೇಳಬೇಕು ಅಂತ ಯಶ್ ಅಭಿಮಾನಿಗಳು ಹಠ ಹಿಡಿದು ಕುಳಿತಿದ್ದಾರೆ. ಮುಂದೆ ಓದಿ...

ಟ್ರೋಲ್ ಮಾಡಿದವರಿಗೆಲ್ಲ ಮಾತಲ್ಲೇ ಗುಂಡ್‌ಪಿನ್ ಚುಚ್ಚಿದ ರಕ್ಷಿತ್ ಶೆಟ್ಟಿ.!

ಸಂದರ್ಶನದಲ್ಲಿ

ಇತ್ತೀಚಿನ ಸಂದರ್ಶನ ವೊಂದರಲ್ಲಿ ರಶ್ಮಿಕಾ ಅವರಿಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಅಂತ ನಿಮಗೆ ಅನಿಸುತ್ತದೆ ಅಂತ ಪ್ರಶ್ನೆ ಕೇಳಿದ್ದರು

ರಶ್ಮಿಕಾ ಉತ್ತರ

ನಿರೂಪಕರ ಆ ಪ್ರಶ್ನೆಗೆ ರಶ್ಮಿಕಾ ಮೊದಲು 'ಯಾರು ಇಲ್ಲ.. ನಾನು ಸುಮ್ನೆ ಈ ಪ್ರಶ್ನೆಗೆ ಉತ್ತರಿಸಿ ತೊಂದರೆಗೆ ಸಿಕ್ಕಿ ಹಾಕಿ ಕೊಳ್ಳುವುದಿಲ್ಲ' ಅಂತ ಹೇಳಿದರು. ಕೊನೆಗೆ ಯಶ್ ಅಂತ ಹೇಳೇಬಿಟ್ಟರು.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

ಯಶ್ ಅಭಿಮಾನಿಗಳ ಗರಂ

ರಶ್ಮಿಕಾ ಅವರ ಈ ಉತ್ತರಕ್ಕೆ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಫ್ಯಾನ್ಸ್ ರಶ್ಮಿಕಾ ಅವರ ವಿರುದ್ಧ ಗುಡುಗಿದ್ದಾರೆ.

ಏನ್ ಹೇಳ್ತಾರೆ ಫ್ಯಾನ್

''ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ Mr Show Off ಅಲ್ಲಾ, Mr Show Man. ಯಶ್ ಬಾಸ್ ಗೆ ಕ್ಷಮೆ ಕೇಳಬೇಕು'' ಅಂತ ಯಶ್ ಅಭಿಮಾನಿಗಳು ಹೇಳುತ್ತಿದ್ದಾರೆ.

'ಕಿರಿಕ್' ಹುಡುಗಿ ಸಾನ್ವಿಯ ಫ್ಯಾಷನ್ ಲೋಕದ ಅದ್ಭುತ ಕ್ಷಣಗಳಿವು

ಉದ್ದೇಶ ಪೂರ್ವಕ ಅಲ್ಲ

ರಶ್ಮಿಕಾ ಈ ಹಿಂದೆ ಕೆಲ ಬಾರಿ ಯಶ್ ಅವರ ನಟನೆ ಅಂದ್ರೆ ನನಗೆ ಇಷ್ಟ. ಅವರ ಜೊತೆ ಸಿನಿಮಾ ಸಿಕ್ಕರೆ ಹಿಂದು ಮುಂದು ನೋಡದೆ ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದರು. ಅಲ್ಲದೆ ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಪಾಸಿಟಿವ್ ಆಗಿ ಸಹ ಮಾತನಾಡಿದ್ದಾರೆ.

ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

ಹೋಗ್ಲಿ ಬಿಡಿ..

ರಶ್ಮಿಕಾ ಮಂದಣ್ಣ ಅವರ ಆ ಸಂದರ್ಶನವನ್ನು ಗಮನಿಸಿದರೆ ಅದು ಬೇಕು ಅಂತ ಹೇಳಿರುವ ಮಾತಲ್ಲ ಅಂತ ಗೊತ್ತಾಗುತ್ತೆ. ಅಲ್ಲದೆ ಆ ಪ್ರಶ್ನೆಗೆ ಅವ್ರು ಸ್ವಲ್ಪ ಟೈಂ ತೆಗೆದುಕೊಂಡು ಕೊನೆಗೆ ಒಂದು ಹೆಸರು ಹೇಳಬೇಕಲ್ಲ ಅಂತ ಆತುರದಲ್ಲಿ ಹೇಳಿಬಿಟ್ಟಿದ್ದಾರೆ.

'ರಶ್ಮಿಕಾ'ಗೆ ಅದೃಷ್ಟವೋ ಅದೃಷ್ಟ: ಈಕೆಗೆ 'ಅರ್ಜುನ್' ಕೂಡ ಬೌಲ್ಡ್.!

English summary
Kananda Actor Rocking Star Yash Fans are Angry with Rashmika Mandanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada