For Quick Alerts
  ALLOW NOTIFICATIONS  
  For Daily Alerts

  'KGF-2' ಅಪ್ ಡೇಟ್‌ಗಾಗಿ ಅಭಿಮಾನಿಗಳ ಒತ್ತಾಯ

  |

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಜುಲೈ 16 ಇಡೀ ಭಾರತೀಯ ಸಿನಿಮಾರಂಗವೇ ಎದುರು ನೋಡುತ್ತಿರುವ 'ಕೆಜಿಎಫ್-2' ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸಬೇಕಿತ್ತು. ಆದರೆ ಹಾಗಾಗಿಲ್ಲ. ಕೊರೊನಾ ಮಹಾಮಾರಿ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿದೆ.

  ಅಂದಹಾಗೆ ಕೆಜಿಎಫ್-2 ಬಿಡುಗಡೆ ದಿನಾಂಕ ಅನೌನ್ಸ್ ಮಾಡುತ್ತಿರುವುದು ಇದೇನು ಮೊದಲಲ್ಲ. ಈಗಾಗಲೇ ಕಳೆದ ವರ್ಷ ರಿಲೀಸ್ ಮಾಡುವುದಾಗಿ ಒಂದು ಡೇಟ್ ಘೋಷಣೆ ಮಾಡಿತ್ತು ಸಿನಿಮಾತಂಡ. ಆದರೆ ಮೊದಲ ದಿನಾಂಕ ಕಳೆದು ಹೋಗಿ ಇದೀಗ 2ನೇ ದಿನಾಂಕ ಕೂಡ ಹೊರಟು ಹೋಗುತ್ತಿದೆ. ಆದರೆ ಕೆಜಿಎಫ್-2 ಮಾತ್ರ ಎಂಟ್ರಿ ಕೊಟ್ಟಿಲ್ಲ.

  'ಕೆಜಿಎಫ್ 2' ಆಡಿಯೋ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ? ಸಿನಿಮಾದಲ್ಲಿ ಎಷ್ಟು ಹಾಡುಗಳಿವೆ?'ಕೆಜಿಎಫ್ 2' ಆಡಿಯೋ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ? ಸಿನಿಮಾದಲ್ಲಿ ಎಷ್ಟು ಹಾಡುಗಳಿವೆ?

  2 ಬಾರಿಯೂ ಅಂದುಕೊಂಡ ದಿನಕ್ಕೆ ಕೆಜಿಎಫ್-2 ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಕೆಜಿಎಫ್-2ನಿಂದ ಪೋಸ್ಟರ್ ಮತ್ತು ಪುಟ್ಟ ಟೀಸರ್ ಬಿಟ್ರೆ ಅಭಿಮಾನಿಗಳಿಗೆ ಮತ್ತೇನು ನೋಡಲು ಸಾಧ್ಯವಾಗಿಲ್ಲ. ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಚಿತ್ರದ ಬಗ್ಗೆ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.

  ಜುಲೈ 16 ಕೆಜಿಎಫ್-2 ಚಿತ್ರಮಂದಿರಕ್ಕೆ ಬರಬೇಕಾಗಿದ್ದ ದಿನ. ಇವತ್ತಾದರೂ ಚಿತ್ರದ ಹೊಸ ಬಿಡುಗಡೆ ದಿನಾಂಕ ಸಿಗಬಹುದೇನೋ ಎಂದು ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದರು. ಆದರೆ ಇಂದು ಕೂಡ ನಿರಾಸೆಯಾಗಿದೆ. ಹಾಗಾಗಿ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಎಂದು ನೆಟ್ಟಿಗರು ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಟ್ವಿಟ್ಟರ್‌ನಲ್ಲಿ ಹೊಸ ಅಪ್ ಡೇಟ್ ಗಾಗಿ ಟ್ರೆಂಡ್ ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಕೆಜಿಎಫ್ ತಂಡ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಬಹಿರಂಗ ಪಡಿಸಿತ್ತು. ''ಗ್ಯಾಂಗ್ ಸ್ಟರ್‌ಗಳಿಂದ ಹಾಲ್ ತುಂಬಿದ್ದಾಗ ಮಾತ್ರವೇ ಮಾನ್ಸ್ಟರ್ (ರಾಕ್ಷಸ) ಬರುತ್ತಾನೆ. ಮಾನ್ಸ್ಟರ್ ಬರಲಿರುವ ಹೊಸ ದಿನಾಂಕವನ್ನು ಶೀಘ್ರವಾಗಿಯೇ ಘೋಷಿಸುತ್ತೇವೆ'' ಎಂದಿದ್ದರು. ಆದರೆ ಇದುವರೆಗೂ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿಲ್ಲ.

  Yash Fans are Demanding an update on KGF-2 movie

  ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಚಿತ್ರತಂಡ ಸದ್ಯದಲ್ಲೇ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಾ ಎಂದು ಕಾದುನೋಡಬೇಕು. ಮೂಲಗಳ ಪ್ರಕಾರ ಸಿನಿಮಾ ಅಕ್ಟೋಬರ್ ಅಥವಾ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ರಾಕಿ ಭಾಯ್ ಯಾವಾಗ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಾರೆ ಎನ್ನುವುದನ್ನು ಚಿತ್ರತಂಡವೇ ಬಹಿರಂಗ ಪಡಿಸಬೇಕಿದೆ.

  ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

  'ಕೆಜಿಎಫ್ 2'ನಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಸಹ ಸೇರ್ಪಡೆಗೊಂಡಿರುವು ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  English summary
  Rocking Star Yash Fans are Demanding an update on KGF-2 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X