ಮೀತಿ ಮೀರಿದ ಯಶ್ ಫ್ಯಾನ್ಸ್ ಹುಚ್ಚಾಟ: ಯಶ್, ರಾಧಿಕಾಗೆ ಸಂಗೀತಾ ಮನವಿ
ಕನ್ನಡದ ಸ್ಟಾಂಡ್ ಅಪ್ ಕಾಮಿಡಿಯನ್ ಸುದರ್ಶನ್ ರಂಗಪ್ರಸಾದ್ ತಮ್ಮ ಕುಟುಂಬದ ಮೇಲೆ ಯಶ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಾಕ್ಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಬಂದ ಕಾಮೆಂಟ್ಸ್ ಗಳನ್ನು ಹಂಚಿಕೊಂಡಿದ್ದರು.
ಇದೀಗ ಇವರ ಕುಟುಂಬಕ್ಕೆ ಯಶ್ ಅಭಿಮಾನಿಗಳು ಎಂದು ಬಿಂಬಿಸಿಕೊಂಡಿರುವ ಕಿಡಿಗೇಡಿಗಳು ಟಾರ್ಗೆಟ್ ಮಾಡಿದ್ದಾರೆ. ಸುದರ್ಶನ್ ರಂಗಪ್ರಸಾದ್ ಪತ್ನಿ, ಖ್ಯಾತ ನಟಿ ಸಂಗೀತ ಭಟ್ ಫೋಟೋಗೆ ಕೆಟ್ಟ ಕೆಟ್ಟ ಕಾಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ. ಈ ಕಿಡಿಗೇಡಿಗಳು ಬಳಸಿರುವ ಪದಗಳು ಅಸಯ್ಯ ಹುಟ್ಟಿಸುತ್ತವೆ.
ಎರಡು ವರ್ಷದ ಹಿಂದೆ ಒಂದು ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ನಟ ಯಶ್ ಡೈಲಾಗ್ ಅನ್ನು ಸುದರ್ಶನ್ ರಂಗಪ್ರಸಾದ್ ಇಮಿಟೇಟ್ ಮಾಡಿದ್ದರು. 'ಬಿಲ್ಡಪ್ ಡೈಲಾಗ್' ಎಂಬ ಪದವನ್ನು ಯಶ್ ಗೆ ಬಳಕೆ ಮಾಡಿದ್ದರು. ಈ ಕುರಿತಾಗಿ ಕ್ಷಮೆಯನ್ನೂ ಕೇಳಿದ್ದರು. ಆದರೆ, ಕೆಲವೊಂದು ಕಿಡಿಗೇಡಿಗಳು ಇದನ್ನೆ ಅಸ್ತ್ರವಾಗಿ ಬಳಸಿಕೊಂಡು ನಟಿ ಸಂಗೀತ ಭಟ್ ಗೆ ಹಿಂಸೆ ನೀಡುತ್ತಿದ್ದಾರೆ.

ಕಿಡಿಗೇಡಿಗಳ ಮಿತಿ ಮೀರಿದ ವರ್ತನೆ
ನಟ ಯಶ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಕೆಲವು ಕಿಡಿಗೇಡಿಗಳು ಸಂಗೀತ ಭಟ್ ಅನ್ನು ಟಾರ್ಗೆಟ್ ಮಾಡಿದ್ದಾರೆ. ಯಶ್ ಬಗ್ಗೆ ಸಂಗೀತ ಭಟ್ ಪತಿ ತಮಾಷೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆಕೆಯ ಬಗ್ಗೆ ಕೆಟ್ಟ ಕಾಮೆಂಟ್ಸ್, ಟ್ರೋಲ್ ಮಾಡಲಾಗುತ್ತಿದೆ. ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂಗೀತ ಭಟ್ ಹಂಚಿಕೊಂಡಿದ್ದಾರೆ.

ಸಂಗೀತ ಭಟ್ ಪ್ರತಿಕ್ರಿಯೆ
''ನಾನು ಸಾಧಾರಣವಾಗಿ ಈ ರೀತಿ ವಿಷಯಗಳನ್ನು ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಇದು ಮಿತಿ ಮೀರುತ್ತಿದೆ, ಈ ಪೋಸ್ಟ್ ಗಳು ನಿಮಗೆ ಹೇಳುತ್ತದೆ, ನಾನು ಹೆಚ್ಚು ಏನು ಹೇಳಲು ಇಚ್ಛಿಸುವುದಿಲ್ಲ, ಇದು ಯಶ್ ಅವರು ನೋಡಿ ಇನ್ನೂ ಇದರ ಬಗ್ಗೆ ಸುಮ್ಮನಿರಬೇಕು ಅಥವಾ ಅವರನ್ನು ಹುಚ್ಚಾಗಿ ಮೆಚ್ಚುವ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕ ಯೋಚಿಸಲಿ.'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಸಂಗೀತ ಭಟ್ ಬರೆದುಕೊಂಡಿದ್ದಾರೆ.

ಯಶ್, ರಾಧಿಕಾ ಮೊರೆ ಹೋದ ಸಂಗೀತ
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಘಟನೆಯ ಬಗ್ಗೆ ಸಂಗೀತ ಭಟ್ ವಿವರಿಸಿದ್ದಾರೆ. ಅಲ್ಲದೆ ಈ ಬಗ್ಗೆ ಯಶ್, ರಾಧಿಕಾ ಪಂಡಿತ್ ಮೊರೆ ಹೋಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಅವರಿಗೂ ಟ್ಯಾಗ್ ಮಾಡಿ, ವಿಷಯ ತಲುಪುವ ಹಾಗೆ ಮಾಡಿದ್ದಾರೆ. ಯಶ್, ರಾಧಿಕಾ ಇದರ ಬಗ್ಗೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಸಂಗೀತ ಪತಿ ಹೇಳಿದ್ದು ಏನು?
''ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ 'ಬಿಲ್ಡಪ್ ಡೈಲಾಗ್' ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ'' ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ 'ಅಣ್ತಾಮ್ಮ', 'ಹವಾ' ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಯಶ್ ಬಗ್ಗೆ 'ಬಿಲ್ಡಪ್ ಡೈಲಾಗ್' ಎಂದು ಬಳಸಿದ್ದರು. ಆದರೆ, ಈ ಬಗ್ಗೆ ಕ್ಷಮೆ ಕೇಳಿದ್ದರು.


Click it and Unblock the Notifications











