ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ನ್ಯಾಷನಲ್ ಸ್ಟಾರ್ ಬರ್ತಡೇಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಈಗಾಗಲೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ವರ್ಷ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈಗಾಗಲೆ ಅಭಿಮಾನಿಗಳು ದಾಖಲೆಯ ಕಟೌಟ್ ಮತ್ತು ಕೇಕ್ ಅನ್ನು ನಿರ್ಮಿಸುತ್ತಿದ್ದಾರೆ.

ಈ ಬಾರಿಯ ಯಶ್ ಹುಟ್ಟುಹಬ್ಬ ಯಶ್ ನಿವಾಸದಲ್ಲಿ ನಡೆಯುತ್ತಿಲ್ಲ, ಬದಲಿಗೆ ಬೆಂಗಳೂರಿನ ನಾಯಂಡಹಳ್ಳಿಯ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆಯಲಿದೆ. ಸುಮಾರು ಒಂದು ವಾರದಿಂದನೆ ನಂದಿ ಲಿಂಕ್ ಗ್ರೌಂಡ್ ಸಿಂಗಾರಗೊಳ್ಳುತ್ತಿದೆ. ಯಶ್ ಅಭಿಮಾನಿ ಬಳಗ ಗ್ರೌಂಡ್ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಸಿದ್ಧಗೊಳ್ಳುತ್ತಿದೆ ನಂದಿ ಲಿಂಕ್ ಗ್ರೌಂಡ್

ಸಿದ್ಧಗೊಳ್ಳುತ್ತಿದೆ ನಂದಿ ಲಿಂಕ್ ಗ್ರೌಂಡ್

ಯಶ್ ಹುಟ್ಟುಹಬ್ಬದ ಪ್ರಯುಕ್ತ ನಂದಿ ಲಿಂಕ್ ಗ್ರೌಂಡ್ ರಾರಾಜಿಸುತ್ತಿದೆ. ಈಗಾಗಲೆ ಕಟೌಟ್ ನಿರ್ಮಾಣ, ಕೇಕ್ ತಯಾರಿಕೆ, ಸ್ಟೇಜ್ ಸೇರಿದಂತೆ ಎಲ್ಲಾ ರೀತಿಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಗ್ರೌಂಡ್ ತುಂಬೆಲ್ಲ ಯಶ್ ಫೋಟೋ ಬ್ಯಾನರ್ ಗಳು ರಾರಾಜಿಸುತ್ತಿವೆ. ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಭಿಮಾನಿಗಳು ಬೇರೆ ಬೇರೆ ರಾಜ್ಯಗಳಿಂದನೂ ಅಪಾರ ಸಂಖ್ಯೆಯಲ್ಲಿ ಬರುವ ಕಾರಣ ದೊಡ್ಡ ಗ್ರೌಂಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.

ಅತೀ ಎತ್ತರದ ಕಟೌಟ್

ಅತೀ ಎತ್ತರದ ಕಟೌಟ್

ಈಗಾಗಲೆ ನಂದಿ ಲಿಂಕ್ ಗ್ರೌಂಡ್ ನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಯಶ್ ಅವರ ಅತೀ ಎತ್ತರದ ಕಟೌಟ್ ಅನ್ನು ನಿರ್ಮಿಸುತ್ತಿದ್ದಾರೆ ಅಭಿಮಾನಿಗಳು. ಈಗಾಗಲೆ ಕಟೌಟ್ ನಿಲ್ಲಿಸುವ ಕಾರ್ಯ ಆರಂಭವಾಗಿದೆ. ವಿಶೇಷ ಅಂದರೆ ಈ ಕಟೌಟ್ 216 ಅಡಿ ಎತ್ತರವಿರಲಿದೆಯಂತೆ. ಇತ್ತೀಚಿಗೆ ತಮಿಳು ನಟ ಸೂರ್ಯ ಅವರ ಎತ್ತರದ ಕಟೌಟ್ ನಿರ್ಮಾಣವಾಗಿತ್ತು. ಈಗ ಯಶ್ ಅವರ ಕಟೌಟ್ ಆಕಾಶದೆತ್ತರಕ್ಕೆ ತಲೆ ಎತ್ತಿ ನಿಲ್ಲುತ್ತಿದೆ.

ದಾಖಲೆಯ ಕೇಕ್

ದಾಖಲೆಯ ಕೇಕ್

ಇನ್ನು ವಿಶೇಷ ಅಂದರೆ ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ದಾಖಲೆಯ ಕೇಕ್ ನಿರ್ಮಾಣವಾಗುತ್ತಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ಬರೋಬ್ಬರಿ 5 ಸಾವಿರ ಕೆಜಿಯ ಕೇಕ್ ಅನ್ನು ತಯಾರಿಸುತ್ತಿದ್ದಾರೆ. ಕೇಕ್ ವಿಚಾರದಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ ನ್ಯಾಷನಲ್ ಸ್ಟಾರ್ ಯಶ್. ಈಗಾಗಲೆ ನಂದಿ ಲಿಂಕ್ ಗ್ರೌಂಡ್ ನಲ್ಲಿ ಕೇಕ್ ಕೂಡ ತಯಾರಾಗುತ್ತಿದೆಯಂತೆ.

ಅಭಿಮಾನಿಗಳ ಪರಿಸರ ಕಾಳಜಿ

ಅಭಿಮಾನಿಗಳ ಪರಿಸರ ಕಾಳಜಿ

ಪರಿಸರ ಕಾಳಜಿ ವಿಚಾರವಾಗಿ ಯಶ್ ಅಭಿಮಾನಿಗಳು ಹುಟ್ಟುಹಬ್ಬಕ್ಕೂ 50 ದಿನಗಳ ಮುಂಚೆ ಪರಿಸರ ಸಂರಕ್ಷಣೆ ಜೊತೆಗೆ ಗಿಡಗಳನ್ನು ನೆಟ್ಟು ಬೆಳೆಸುವ ಹೊಸ ಅಭಿಯಾನ ಕೈಗೊಂಡಿದ್ದರು. ಜನವರಿ 8ರ ವರೆಗೂ ಈ ಅಭಿಯಾನ ಮಾಡಲು ಅಭಿಮಾನಿಗಳು ಯೋಜನೆ ಹಾಕಿಕೊಂಡಿದ್ದರು. ಇದಕ್ಕಾಗಿಯೆ ಯಶ್ ಕಾಮನ್ ಡಿಪಿ ಕೂಡ ರಿಲೀಸ್ ಮಾಡಲಾಗಿತ್ತು. ನಟಿ ಶಾನ್ವಿ ಶ್ರೀವಾತ್ಸವ್ ಡಿಪಿಯನ್ನು ರಿಲೀಸ್ ಮಾಡಿ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.

ಕಳೆದ ವರ್ಷ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ

ಕಳೆದ ವರ್ಷ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ

ಕಳೆದ ವರ್ಷ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಕಾರಣ, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ. ಅಂಬರೀಶ್ ರನ್ನ ಕಳೆದುಕೊಂಡ ನೋವಿನಲ್ಲಿದ್ದ ಯಶ್, ತಮ್ಮ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದರು. ಕೆಜಿಎಫ್ ಸಿನಿಮಾ ರಿಲೀಸ್ ಆಗಿ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ರು. ಆದರೆ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿರಲಿಲ್ಲ. ಈ ಬಾರಿ ಬಾರಿ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಕಳೆದ ವರ್ಷ ಹುಟ್ಟುಹಬ್ಬದ ಸಂಭ್ರವನ್ನು ಸೇರಿಸಿ ಈ ವರ್ಷ ಆಚರಿಸುತ್ತಿದ್ದಾರೆ.

More from Filmibeat

English summary
Kannada actor Yash fans are preparing record cutout for Rocking star birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X