'KGF-2' ಟೀಸರ್ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ: ಟ್ವಿಟ್ಟರ್ ನಲ್ಲಿ ಟ್ರೆಂಡ್

ದೇಶದ ಗಮನ ಸೆಳೆದ ಕೆಜಿಎಫ್ ಸಿನಿಮಾದ ಪಾರ್ಟ್-2ಗಾಗಿ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಸಿನಿಮಾ ಯಾವಾಗ ಬರುತ್ತೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆದರೆ ಸಿನಿಮಾ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಚಿತ್ರತಂಡ, ಅಭಿಮಾನಿಗಳಿದ್ದ ಕುತೂಹಲಕ್ಕೆ ತೆರೆ ಎಳೆದಿದೆ.

Recommended Video

ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

ಆದರೀಗ ಸಿನಿಮಾ ಟೀಸರ್ ಯಾವಾಗ ಎಂದು ಯಶ್ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಟೀಸರ್ ಬಗ್ಗೆ ಅಪ್ ಡೇಟ್ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಕೆಜಿಎಫ್-2 ಸಿನಿಮಾ ಸದ್ಯ ಲಾಕ್ ಡೌನ್ ನ ಸಮಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದೆ. ಈ ಸಮಯದಲ್ಲಾದ್ದರು ಚಿತ್ರದ ಟೀಸರ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಮುಂದೆ ಓದಿ..

ಟೀಸರ್ ಗಾಗಿ ಅಭಿಮಾನಿಗಳ ಅಭಿಯಾನ

ಟೀಸರ್ ಗಾಗಿ ಅಭಿಮಾನಿಗಳ ಅಭಿಯಾನ

ಅಭಿಮಾನಿಗಳ ನಿರೀಕ್ಷೆ ಪ್ರಕಾರ ಯಶ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಟೀಸರ್ ಬಿಡುಗಡೆಯಾಗಿರಲ್ಲಿ. ಆದರೆ ಹುಟ್ಟುಹಬ್ಬ ಆಗಿ ನಾಲ್ಕು ತಿಂಗಳು ಕಳೆದರು ಟೀಸರ್ ಪತ್ತೆಕ್ಕಿಲ್ಲ. ಕಾದು ಕಾದು ಸುಸ್ತಾದ ಅಭಿಮಾನಿಗಳು ಟೀಸರ್ ರಿಲೀಸ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುತ್ತಿದ್ದಾರೆ.

WeWantKGFChapter2TeaserUpdate ಟ್ರೆಂಡ್

WeWantKGFChapter2TeaserUpdate ಟ್ರೆಂಡ್

"ನಮಗೆ ಕೆಜಿಎಫ್ ಚಾಪ್ಟರ್-2 ಟೀಸರ್ ಬಗ್ಗೆ ಅಪ್ ಡೇಟ್" ನೀಡಿ ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. WeWantKGFChapter2TeaserUpdate ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ಸಾಕಷ್ಟು ಜನ ಅಭಿಮಾನಿಗಳು ಸೇರಿಕೊಂಡಿದ್ದಾರೆ. ಕೇವಲ ಕನ್ನಡ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಟೀಸರ್ ಯಾವಾಗ ಎಂದು ಚಿತ್ರತಂಡದ ಬೆನ್ನು ಬಿದ್ದಿದ್ದಾರೆ.

ಅಭಿಮಾನಿಗಳ ಮನವಿ

ಅಭಿಮಾನಿಗಳ ಮನವಿ

"ಪ್ರೀತಿಯ ಹೊಂಬಾಳೆ ಫಿಲ್ಮ್, ಕಾರ್ತಿಕ್ ಗೌಡ ಮತ್ತು ಪ್ರಶಾಂತ್ ನೀಲ್ ಅವರೆ, ನಾವು ಯಶ್ ಅವರ ಅಪ್ಪಟ ಅಭಿಮಾನಿಗಳಾಗಿದ್ದು, ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಬಹಳ ತಿಂಗಳಿಂದ ಕಾಯುತ್ತಿದ್ದೇವೆ. ದಯವಿಟ್ಟು ಟೀಸರ್ ದಿನಾಂಕ ಘೋಷಿಸಿ ಅಭಿಮಾನಿಗಳ ಆಸೆ ಈಡೇರಿಸಿ" ಎಂದು ಚಿತ್ರತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಏಪ್ರಿಲ್ 12ಕ್ಕೆ ಟೀಸರ್ ಬಗ್ಗೆ ಅಪ್ ಡೇಟ್

ಏಪ್ರಿಲ್ 12ಕ್ಕೆ ಟೀಸರ್ ಬಗ್ಗೆ ಅಪ್ ಡೇಟ್

ಏಪ್ರಿಲ್ 12 ಸಂಜೆ 6 ಗಂಟೆಗೆ ಬಹುನಿರೀಕ್ಷೆಯ ಚಿತ್ರದ ಕೆಜಿಎಫ್-2 ಸಿನಿಮಾದ ಟೀಸರ್ ಬಗ್ಗೆ ಹೊಂಬಾಳೆ ಫಿಲ್ಮ್ ಅಪ್ ಡೇಟ್ ನೀಡಲಿದೆ ಎಂದು ಅಭಿಮಾನಿಗಳು ಟ್ರೆಂಡ್ ಮಾಡಿದ್ದಾರೆ. ಆದರೆ ಏಪ್ರಿಲ್ 12 ಕಳೆದೋಯಿತು. ಟೀಸರ್ ಬಗ್ಗೆ ಅಪ್ ಡೇಸ್ ಸಿಕ್ಕಿಲ್ಲ. ಟೀಸರ್ ಗಾಗಿ ಕಾದ ಅಭಿಮಾನಿಗಳೀಗ ಭಾರಿ ನಿರಾಸೆ ಪಟ್ಟಿದ್ದಾರೆ.

ಅಕ್ಟೋಬರ್ ನಲ್ಲಿ ಸಿನಿಮಾ

ಅಕ್ಟೋಬರ್ ನಲ್ಲಿ ಸಿನಿಮಾ

ಕೆಜಿಎಫ್ ಚಾಪ್ಟರ್ 2' ಚಿತ್ರ 2020ರ ಅಕ್ಟೋಬರ್ 23ರಂದು ವಿಶ್ವವ್ಯಾಪಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂ ತಿಳಿಸಿದೆ. ಇದರಿಂದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಪಕ್ಕಾ ಆದಂತಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು ಅಭಿಮಾನಿಗಳು ಆ ದಿನಕ್ಕಾಗಿ ಕಾರತರದಿಂದ ಕಾಯುತ್ತಿದ್ದಾರೆ.

More from Filmibeat

English summary
Yash Fans are requesting to release most expected KGF-2 teaser release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X