ಕನ್ನಡದಲ್ಲಿ ಸೈರಾ ಟೀಸರ್ ಅಬ್ಬರ: ನಿರಾಸೆಯಾದ ಯಶ್ ಅಭಿಮಾನಿಗಳು
Recommended Video
ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಟೀಸರ್ ಅದ್ಭುತವಾಗಿ ಮೂಡಿಬಂದಿದ್ದು, ಧೂಳೆಬ್ಬಿಸುತ್ತಿದೆ.
ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲೂ ಈ ಟೀಸರ್ ಬಂದಿದೆ. 1.7 ಲಕ್ಷಕ್ಕೂ ಅಧಿಕ ಮಂದಿ ಕನ್ನಡ ಭಾಷೆಯಲ್ಲಿ ಟೀಸರ್ ವೀಕ್ಷಿಸಿದ್ದಾರೆ. ಕನ್ನಡದಲ್ಲಿ ಟೀಸರ್ ನೋಡಿ ಮೆಚ್ಚಿಕೊಂಡಿರುವ ಸ್ಯಾಂಡಲ್ ವುಡ್ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಕಾತುರರಾಗಿದ್ದಾರೆ.
ಆದ್ರೆ, ಸೈರಾ ಟೀಸರ್ ನೋಡಿದ ಯಶ್ ಅಭಿಮಾನಿಗಳಿಗೆ ಸಹಜವಾಗಿದೆ ನಿರಾಸೆಯಾಗಿದೆ. ಯಾಕೆ? ಮುಂದೆ ಓದಿ...

ಯಶ್ ಧ್ವನಿ ಇರಬಹುದು..
ಸೈರಾ ಟೀಸರ್ ಬರುವುದಕ್ಕೆ ಮುಂಚೆ ವಿಷ್ಯವೊಂದು ಭಾರಿ ಸುದ್ದಿಯಾಗಿತ್ತು. ಸೈರಾ ಕನ್ನಡ ವರ್ಷನ್ ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದಾರೆ ಎನ್ನಲಾಗಿತ್ತು. ಹಾಗಾಗಿ, ಭಾರತದ ಬಹುದೊಡ್ಡ ಚಿತ್ರದಲ್ಲಿ ಯಶ್ ಅವರ ಧ್ವನಿ ಇರುತ್ತೆ ಎಂಬ ಕಾತುರದಿಂದ ಕಾದಿದ್ದರು.

ನಿರಾಸೆ ಎದುರಾಯ್ತು
ಸೈರಾ ಟೀಸರ್ ಬಂದ್ಮೇಲೆ ಈ ವಿಚಾರದಲ್ಲಿ ಕನ್ನಡ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಫಾಲೋವರ್ಸ್ ಗೆ ಹೆಚ್ಚು ಬೇಸರವಾಗಿದೆ. ಆ ವಿಚಾರ ಬಿಟ್ಟರೇ ಸಿನಿಮಾದ ಮೇಲೆ ಯಾವುದೇ ಮುನಿಸು ಇಲ್ಲ. ಬಟ್, ಅಧಿಕೃತವಾಗಿ ಎಲ್ಲಿಯೂ ಹೇಳಿರಲಿಲ್ಲ. ಹಾಗಾಗಿ, ಈ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಂಡಿಲ್ಲ.

ಕನ್ನಡದಲ್ಲಿ ಸ್ಟಾರ್ ನಟರ ಧ್ವನಿ ಇಲ್ಲ
ಹಾಗ್ನೋಡಿದ್ರೆ, ಬೇರೆ ಭಾಷೆಯ ಟೀಸರ್ ಗಳಲ್ಲಿ ಆಯಾ ಇಂಡಸ್ಟ್ರಿಯ ಖ್ಯಾತ ನಟರೊಬ್ಬರಿಂದ ಟೀಸರ್ ಗೆ ಹಿನ್ನೆಲೆ ಧ್ವನಿ ಕೊಡಿಸಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್, ಮಲಯಾಳಂ ಭಾಷೆಯಲ್ಲಿ ಮೋಹನ್ ಲಾಲ್ ಧ್ವನಿ ನೀಡಿದ್ದಾರೆ. ಆದ್ರೆ, ಕನ್ನಡದಲ್ಲಿ ಅಪರಿಚಿತ ವ್ಯಕ್ತಿಯಿಂದ ಧ್ವನಿ ನೀಡಿಸಿದ್ದಾರೆ. ಇದು ಕೂಡ ನಿರಾಸೆ ಮೂಡಿಸಿದೆ.

ರಾಮ್ ಚರಣ್ ನಿರ್ಮಾಣ
ಇನ್ನುಳಿದಂತೆ ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಿಸಿದ್ದು, ಚಿರಂಜೀವಿ, ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ, ಸುದೀಪ್, ನಯನತಾರ, ತಮನ್ನಾ, ರವಿ ಕಿಶನ್ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿದೆ. ಅಕ್ಟೋಬರ್ 2 ರಂದು ಐದು ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.


Click it and Unblock the Notifications











