For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2: ಪ್ರಧಾನಿ ಮೋದಿ ಬಳಿ ಯಶ್ ಅಭಿಮಾನಿಗಳ ವಿಶೇಷ ಮನವಿ

  |

  ದೇಶದ ಬಹು ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಕನ್ನಡದ ಕೆಜಿಎಫ್ 2 ಮೊದಲಿದೆ. ಕೆಜಿಎಫ್ 2 ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ದೇಶದಾದ್ಯಂತ ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾತರರಾಗಿ ಕಾಯುತ್ತಿದ್ದಾರೆ.

  ಮೋದಿ ವರೆಗೂ ತಲುಪಿದ KGF 2 ಹವಾ | Filmibeat Kannada

  ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದ್ದು. ಜುಲೈ 16 ಕ್ಕೆ ರಾಖಿ ಭಾಯ್ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಮೋಡಿ ಮಾಡಲಿದ್ದಾನೆ.

  ಇದರ ನಡುವೆ ಯಶ್ ಹಾಗೂ ಕೆಜಿಎಫ್ ಸಿನಿಮಾ ಸರಣಿ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ವಿಶೇಷ ಮನವಿಯೊಂದನ್ನು ಮಾಡುತ್ತಿದ್ದಾರೆ.

  ಕೆಜಿಎಫ್ 2 ಸಿನಿಮಾವು ಜುಲೈ 16 ಕ್ಕೆ ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗುತ್ತಿದ್ದು, ಆ ದಿನದಂದು ರಾಷ್ಟ್ರೀಯ ರಜೆ ಘೋಷಿಸಿರೆಂದು ಕೆಲವು ಮೋದಿ ಅವರಿಗೆ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಮನವಿ ಮಾಡುತ್ತಿದ್ದಾರೆ.

  'ಅಭಿಮಾನಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ, ಜುಲೈ 16 ರಂದು ನ್ಯಾಷನಲ್ ಹಾಲಿಡೆ (ರಾಷ್ಟ್ರದಾದ್ಯಂತ ರಜೆ) ಎಂದು ಘೋಷಿಸಿ ಎಂದು ಓನ್ಲಿ ಯಶ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್‌ ಮೂಲಕ ಅಭಿಮಾನಿಯೊಬ್ಬ ಮೋದಿ ಅವರಲ್ಲಿ ಮನವಿ ಮಾಡಿದ್ದಾನೆ. ಈ ಟ್ವೀಟ್‌ನ ಸ್ಕ್ರೀನ್‌ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಜುಲೈ 16 ಕ್ಕೆ ಯಶ್ ರ ಕೆಜಿಎಫ್ 2 ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಂಜಯ್ ದತ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ನಟಿ ರವೀನಾ ಟಂಡನ್, ಪ್ರಕಾಶ್ ರೈ ಹಾಗೂ ಇನ್ನೂ ಕೆಲವರು ಕೆಜಿಎಫ್ 2 ನಲ್ಲಿರಲಿದ್ದಾರೆ.

  English summary
  Yash fans asking PM Narendra Modi to declare national holiday on July 16 on which KGF 2 movie is releasing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X