ಸೆಲ್ಫಿಗಾಗಿ ಯಶ್ ಮೇಲೆ ಮುಗಿಬಿದ್ದ ತೆಲುಗು ಮಂದಿ
Recommended Video

ಡಿಸೆಂಬರ್ 9 ರಂದು ಹೈದರಾಬಾದ್ ನಲ್ಲಿ ಕೆಜಿಎಫ್ ತೆಲುಗು ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಸಂಜೆ 7 ಗಂಟೆಗೆ ಆರಂಭವಾದ ಈ ಶೋಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಇದರಲ್ಲಿ ಕರ್ನಾಟಕದ ಮೂಲದ ಹೈದರಾಬಾದ್ ನಲ್ಲಿ ನೆಲೆಸಿರುವ ಕನ್ನಡ ಅಭಿಮಾನಿಗಳು ಹಾಗೂ ತೆಲುಗು ಫ್ಯಾನ್ಸ್ ಇದ್ದರು.
ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಅದ್ಧೂರಿಯಾಗಿ ಆರಂಭಿಸಿದ ಶೋಗೆ, ರಾಕಿಂಗ್ ಸ್ಟಾರ್ ಗ್ರ್ಯಾಂಡ್ ಎಂಟ್ರಿ ಕೂಡ ಆಗಿತ್ತು. ಅಲ್ಲಿಗೆ ಕೆಜಿಎಫ್ ಪ್ರೀ-ರಿಲೀಸ್ ಗೆ ಅಧಿಕೃತ ಚಾಲನೆ ದೊರೆಯಿತು.
ನಿಗದಿಯಂತೆ ಕೆಜಿಎಫ್ ಚಿತ್ರತಂಡ, ರಾಜಮೌಳಿ ಎಲ್ಲರೂ ಮಾತನಾಡಿದರು. ಈ ಮಧ್ಯೆ ಕೆಲವು ಮನರಂಜನೆ ಕಾರ್ಯಕ್ರಮ, ಡ್ಯಾನ್ಸ್, ಹರಟೆ, ನಿರೂಪಕರ ಫನ್ನಿ ಮಾತುಗಳು ಎಲ್ಲವೂ ಕಿಕ್ ನೀಡಿತ್ತು.

ಎಲ್ಲವೂ ಮುಗಿದ ಮೇಲೆ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಅಭಿಮಾನಿಗಳ ಕಡೆಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ವೇದಿಕೆ ಮೇಲೆ ಏರಿದ ಅಭಿಮಾನಿಗಳು ಯಶ್ ಜೊತೆ ಸೆಲ್ಫಗಾಗಿ ಮುಗಿಬಿದ್ದರು.
ಕರ್ನಾಟಕದಲ್ಲಿ ಯಶ್ ಗೆ ಸಿಗುವಷ್ಟು ಕ್ರೇಜ್ ಹೈದರಾಬಾದ್ ವೇದಿಕೆಯಲ್ಲೂ ಸಿಕ್ತು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫೋಟೋಗಾಗಿ ಯಶ್ ಮೇಲೆ ಮುಗಿಬಿದ್ದರು. ಅಭಿಮಾನ ಕಂಡು ತಬ್ಬಿಬಾದ ಯಶ್ ಒಂದ ಕ್ಷಣ ಅಲ್ಲೇ ನಿಂತರು. ಆದ್ರೆ, ಜನರು ಹೆಚ್ಚಾಗಿದ್ದನ್ನ ಗಮನಿಸಿ ವೇದಿಕೆಯಿಂದ ನಿರ್ಗಮಿಸಿದರು.

ಈ ದೃಶ್ಯವನ್ನ ನೋಡಲು ಕನ್ನಡ ಕಲಾರಸಿಕರಿಗೆ ನಿಜಕ್ಕೂ ಖುಷಿ ಆಯ್ತು. ಕನ್ನಡ ಸಿನಿಮಾಗೆ ಇಷ್ಟು ದೊಡ್ಡ ಸ್ವಾಗತ ಸಿಗ್ತಿದೆ ಎಂಬ ಸಂತಸದ ನಡುವೆ ಕನ್ನಡ ನಟನಿಗೆ ಅಲ್ಲಿಯೂ ದೊಡ್ಡ ಅಭಿಮಾನಿ ಹುಟ್ಟಿಕೊಂಡಿದೆ ಎಂಬುದು ಹೆಮ್ಮೆಯ ವಿಚಾರ.


Click it and Unblock the Notifications











