ಆಂಧ್ರ ಪ್ರದೇಶದ ಕಡಪದಲ್ಲಿ ರಾಕಿ ಭಾಯ್ ನೋಡಲು ಮುಗಿಬಿದ್ದ ಜನಸಾಗರ

Recommended Video

ಆಂಧ್ರದಲ್ಲಿ ಯಶ್ ನೋಡೋದಕ್ಕೆ ಬಂತು ಜನಸಾಗರ | FILMIBEATY KANNADA

ಕೆಜಿಎಫ್ ಸಿನಿಮಾ ಬಂದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಇಮೇಜ್ ರಾಷ್ಟ್ರಮಟ್ಟದಲ್ಲಿ ಬದಲಾಯ್ತು. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ರಾಜಾಹುಲಿಯ ಅಬ್ಬರ ಗಡಿಯಾಚೆಯೂ ಘರ್ಜಿಸಿತು.

ಕನ್ನಡ ಸಿನಿಮಾಗಳು ಅಂದ್ರೆ, ಸ್ವಲ್ಪ ಅಸಡ್ಡೆಯಿಂದ ನೋಡುತ್ತಿದ್ದವರೆಲ್ಲಾ ನಮ್ಮ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಆಯಿತು. ಇದರ ಪರಿಣಾಮ ಯಶ್ ಹೋದಲ್ಲಿ ಬಂದಲ್ಲಿ ಜನಸಾಗರ ಸೇರುತ್ತಿದೆ.

ಸದ್ಯ ಯಶ್ ಅವರು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಹಳ್ಳಿಯೊಂದರಲ್ಲಿದ್ದಾರೆ. ಶೂಟಿಂಗ್ ಕಾರಣದಿಂದ ಅಲ್ಲಿಗೆ ಹೋಗಿರುವ ಯಶ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.

ಕೆಜಿಎಫ್ ಹೀರೋ ಬಂದಿರುವ ವಿಚಾರ ತಿಳಿಯುತ್ತಿದ್ದ ಸುತ್ತಮುತ್ತಲಿನ ಊರಿನವರೆಲ್ಲಾ ಜಾತ್ರೆಯಂತೆ ಸೇರಿದ್ದಾರೆ. ಅಷ್ಟು ಜನ ಬಂದಿರುವುದನ್ನ ಖುಷಿಯಿಂದ ಸ್ವಾಗತಿಸಿದ ರಾಕಿ ಭಾಯ್ ತಾಳ್ಮೆಯಿಂದ ಮಾತನಾಡಿಸಿದ್ದಾರೆ.

Yash Fans Craze In Kadapa District

ನಗುನಗುತ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜನಸಂಖ್ಯೆ ಹೆಚ್ಚಿರುವುದನ್ನು ಲೆಕ್ಕಿಸಿದ, ಬಹುತೇಕರಿಗೆ ಸೆಲ್ಫಿ ನೀಡಿದ್ದಾರೆ. ಜನರು ಕೂಡ ಸಾಲಿನಲ್ಲಿ ನಿಂತು ಯಶ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಮುಂಚೆ ಯಶ್ ಅವರನ್ನು ನೋಡಲು ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದರು. ಆಗಲೂ ಹೊರರಾಜ್ಯದಿಂದ ಬಂದ ಎಲ್ಲ ಅಭಿಮಾನಿಗಳ ಜೊತೆ ಮಾತನಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ಯಶ್.

ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಮಧ್ಯದಲ್ಲಿ ತೆರೆಗೆ ಬರುವ ತಯಾರಿ ಮಾಡಲಾಗುತ್ತಿದೆ. ಈ ಸಲ ಯಶ್ ಕೆಜಿಎಫ್ ಗೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಕೂಡ ಸಾಥ್ ನೀಡಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Yash fans craze in Kadapa district. rocking star yash has visit to kadapa district in andhra pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X