Fact Check: "ಅಪ್‌ಡೇಟ್ ಕೊಡಲ್ಲ ಕಣ್ರೋ, ಈಗೇನ್ ಮಾಡ್ಕೊತ್ತೀರಾ" ಅಂದ್ರಾ ಯಶ್?

ರಾಕಿಂಗ್ ಸ್ಟಾರ್ ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಂದ ದೂರವೇ ಉಳಿದುಬಿಟ್ಟಿದ್ದಾರೆ. ಸಿನಿಮಾ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಎನ್ನುವುದು ಯಶ್ ನಿಯಮ.

ದಿಢೀರನ್ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ನಿಲ್ಲಿಸಿ ಯಶ್ 'ರಾಮಾಯಣ' ಸಿನಿಮಾ ಕಡೆ ಫೋಕಸ್ ಮಾಡಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಡ್ರಾಮಾ 'ಟಾಕ್ಸಿಕ್' ಕೆಲಸಗಳು ಎಲ್ಲಿಗೆ ಬಂತು ಎನ್ನುವುದು ಗೊತ್ತಿಲ್ಲ. ಸಿನಿಮಾ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಹೆಚ್ಚು ಮಾಹಿತಿ ಸಿಕ್ಕಿಲ್ಲ. ಮುಹೂರ್ತದ ಬಳಿಕ ಚಿತ್ರದ ಹೊಸ ರಿಲೀಸ್ ಡೇಟ್ ಬಗ್ಗೆ ಮಾತ್ರ ಅಪ್‌ಡೇಟ್ ಸಿಕ್ಕಿತ್ತು. ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಬಂದು ಧೂಳೆಬ್ಬಿಸಿತ್ತು. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಇಲ್ಲ.

Yash Fans Go Wild Over Viral AI Video Amid Silence on Toxic Movie Update

ಅಭಿಮಾನಿಗಳು 'ಟಾಕ್ಸಿಕ್' ಅಪ್‌ಡೇಟ್‌ ಕೇಳಿ ಕೇಳಿ ಸುಸ್ತಾಗಿದ್ದಾರೆ. ನಯನತಾರಾ, ಕಿಯಾರ ಅದ್ವಾನಿ ಸೇರಿದಂತೆ ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಧಿಕೃತವಾಗಿ ಮಾತ್ರ ಈ ಬಗ್ಗೆ ಚಿತ್ರತಂಡ ಮಾತನಾಡಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. "ಅಪ್‌ಡೇಟ್ ಕೊಡಲ್ಲ ಕಣ್ರೋ, ಈಗೇನ್ ಮಾಡ್ಕೊತ್ತೀರಾ" ಅಂತ ಯಶ್ ಹೇಳಿದಂತೆ ಎಐ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಎಐ ವೀಡಿಯೋಗಳು ವೈರಲ್ ಆಗುತ್ತಿರುವುದು ಗೊತ್ತೇಯಿದೆ. ಯಾರು ಯಾರ ಜೊತೆಗೆ ಬೇಕಾದರೂ ಇರುವಂತೆ ವೀಡಿಯೋಗಳನ್ನು ಕ್ರಿಯೇಟ್ ಮಾಡಿ ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ. ಕೆಲ ಫನ್ನಿ ವೀಡಿಯೋಗಳು ಗಮನ ಸೆಳೆಯುತ್ತಿವೆ. ಮತ್ತೆ ಕೆಲವು ಆತಂಕ ತರುತ್ತಿವೆ. ಶೀಘ್ರದಲ್ಲೇ ಎಐ ಬ್ಯಾನ್ ಮಾಡಿದರೂ ಮಾಡಬಹುದು ಎನ್ನುವ ಚರ್ಚೆ ಹುಟ್ಟುಹಾಕಿವೆ.

ಇದೀಗ ಸ್ವತಃ ಯಶ್ ಮಾತನಾಡಿರುವಂತೆ ಎಐ ವೀಡಿಯೋ ಮಾಡಿ ಅಭಿಮಾನಿಗಳು ತೇಲಿಬಿಟ್ಟಿದ್ದಾರೆ. ಇದು ಎಐ ವೀಡಿಯೋ ಎನ್ನುವುದು ಮೊದಲ ನೋಟದಲ್ಲೇ ಗೊತ್ತಾಗುತ್ತಿದೆ. ಸಮಯ ಬಂದಾಗ ಎಲ್ಲಾ ಅಪ್‌ಡೇಟ್ ಕೊಡ್ತೀವಿ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ಬಿಡುಗಡೆಗೆ ಇನ್ನು 9 ತಿಂಗಳು ಬಾಕಿಯಿದೆ. ಚಿತ್ರೀಕರಣದ ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ನಡೀತಿದೆ.

'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಿರುವುದು ಗೊತ್ತೇಯಿದೆ. ಚಿತ್ರಕ್ಕಾಗಿ 60 ದಿನ ಕಾಲ್‌ಶೀಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅದನ್ನು ಮುಗಿಸಿ ಬಳಿಕ ಮತ್ತೆ 'ಟಾಕ್ಸಿಕ್' ಅಖಾಡಕ್ಕೆ ಇಳಿಯಲಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ 'ರಾಮಾಯಣ' ಚಿತ್ರವನ್ನು ಕೂಡ ಯಶ್ ನಿರ್ಮಾಣ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೂ ಸಹ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ಎರಡೂ ಸಿನಿಮಾಗಳು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 'ಮ್ಯಾಡ್ ಮ್ಯಾಕ್ಸ್' ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy Norris) ನಿರ್ದೇಶನದಲ್ಲಿ ಇತ್ತೀಚೆಗೆ ಯಶ್ ಯುದ್ಧ ಸನ್ನಿವೇಶಗಳ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಬ್ಲೂಮ್ಯಾಟ್‌ನಲ್ಲಿ ಸಣ್ಣ ಪುಟ್ಟ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಚಿತ್ರಕ್ಕೆ ಹೊಸ ರೂಪ ಕೊಡಲಾಗುತ್ತಿದೆ.

ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ಇತ್ತೀಚೆಗೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಶೀಘ್ರದಲ್ಲೇ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಲಿದೆ.

More from Filmibeat

English summary
No major updates from Toxic film team, fans are frustrated. a fan-made AI video of Yash has gone viral, mimicking his voice and creating a buzz online
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X