ಸಂಗೀತಾ ಭಟ್ ಪತಿ ವಿವಾದ: ಯಶ್ ಅಭಿಮಾನಿಗಳಿಂದ ಬಹಿರಂಗ ಪತ್ರ

Recommended Video

Yash fans wrote open letter about Sangeetha Bhat Husband | FILMIBEAT KANNADA

ಕನ್ನಡ ನಟಿ ಸಂಗೀತಾ ಭಟ್ ಅವರ ಪತಿ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಸುದರ್ಶನ್ ಅವರ ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂಬ ವಿಷ್ಯ ಚರ್ಚೆಯಾಗುತ್ತಿತ್ತು.

ವೇದಿಕೆಯೊಂದರಲ್ಲಿ ಸುದರ್ಶನ್ ಅವರು ಕಾರ್ಯಕ್ರಮ ನೀಡುವಾಗ ಯಶ್ ಅವರ ಬಗ್ಗೆ ಅಪಹಾಸ್ಯ ಮಾಡಲಾಗಿದೆ, ಅದು ಮಾಡಬಾರದಿತ್ತು ಎಂದು ರಾಕಿಭಾಯ್ ಅಭಿಮಾನಿಗಳು ಕಿಡಿಕಾರಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಳೆಯ ವಿಡಿಯೋ ಇದಕ್ಕೆಲ್ಲಾ ಕಾರಣವಾಗಿತ್ತು..

ಈ ಟೀಕೆ, ನಿಂದನೆ ತೀರಾ ವೈಯಕ್ತಿಕವಾದ ಕಾರಣ ಸಂಗೀತ ಭಟ್ ಕೂಡ ಬಹಿರಂಗವಾಗಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿ, ಯಶ್ ಮತ್ತು ರಾಧಿಕಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಇದೀಗ, ಈ ಘಟನೆ ಬಗ್ಗೆ ಯಶ್ ಅಭಿಮಾನಿಗಳು ಬಹಿರಂಗ ಪತ್ರ ಬರೆದಿದ್ದು, ಈ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ. ಅಷ್ಟಕ್ಕೂ, ಈ ಬಹಿರಂಗ ಪತ್ರದಲ್ಲಿ ಏನಿದೆ? ಮುಂದೆ ಓದಿ....

ಆತ್ಮೀಯ ಅಭಿಮಾನಿ ಗೆಳೆಯರಲ್ಲಿ ಮನವಿ...

ಆತ್ಮೀಯ ಅಭಿಮಾನಿ ಗೆಳೆಯರಲ್ಲಿ ಮನವಿ...

ರಾಕಿಂಗ್ ಸ್ಟಾರ್ ಅಭಿಮಾನಿಗಳು ಅಂದ್ರೆ ಸಾಮಾಜಿಕ ಕಳಕಳಿ ಇರೋರು, ಜವಾಬ್ದಾರಿ ಇರೋರು, ಸ್ನೇಹಕ್ಕೆ- ಪ್ರೀತಿಗೆ ಬೆಲೆ ಕೊಡೋರು. ಆದ್ರೆ ನಮ್ಮನ್ನ ಕೆಣಕಿದೋರಿಗೆ ಯಾವ ಮುಲಾಜು ಇಲ್ದೇ ಪಾಠ ಕಲಿಸ್ತಿವಿ ನಿಜ. ಹಾಗೇ ಅಣ್ಣನ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ಬಗ್ಗೆ ಅವರ ಅಭಿಮಾನಿಗಳಾಗಿ ನಾವು ಕೆರಳವುದು, ಅವರನ್ನ ಖಂಡಿಸುವುದು ಸಹಜ. ಆದರೆ ನಾವು ಹೆಣ್ಣಿನ ಬಗ್ಗೆ ಕೆಟ್ಟ ಪದಗಳನ್ನ ಬಳಸುವ ಹಂತಕ್ಕೆ ಹೋಗುವುದು ಬೇಡ. ನಮ್ಮ ಅಭಿಮಾನಿ ಬಳಗ ಅದನ್ನ ಒಪ್ಪುವುದಿಲ್ಲ.

ಸಾಮಾಜಿಕ ಪ್ರಜ್ಞೆಯಿಂದ ನಾವು ವರ್ತಿಸಬೇಕು

ಸಾಮಾಜಿಕ ಪ್ರಜ್ಞೆಯಿಂದ ನಾವು ವರ್ತಿಸಬೇಕು

ಯಶ್ ಬಾಸ್ ಮಹಿಳೆಯರನ್ನ ಗೌರವಿಸೋದ್ರಲ್ಲಿ ಎಲ್ಲಾರಿಗೂ ಮಾದರಿಯಾಗಿದ್ದಾರೆ. ಅಂತವರ ಅಭಿಮಾನಿಗಳಾದ ನಾವು ಅವ್ರ ಹಾದಿಯಲ್ಲೇ ಸಾಗಬೇಕು. ದಯವಿಟ್ಟು ಪ್ರೀತಿ- ಅಭಿಮಾನದ ಭರದಲ್ಲಿ, ಬಳಸೋ ಭಾಷೆಯ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಸಾಮಾಜಿಕ ಪ್ರಜ್ಞೆಯಿಂದ ನಾವು ವರ್ತಿಸಬೇಕು. ಯಾರೋ ಒಬ್ಬರೋ ಇಬ್ಬರೋ ಮಾಡುವ ಆಚಾತುರ್ಯದಿಂದ ಇಡೀ ಯಶ್ ಬಾಸ್ ಅಭಿಮಾನಿ ವೃಂದಕ್ಕೆ ಮಸಿಬಳಿದಂತಾಗುತ್ತೆ. ಸಿಟ್ಟಿನಲ್ಲಿ ನಾವು ಬಳಸುವ ಭಾಷೆಯನ್ನ ಹಿಡಿತದಲ್ಲಿ ಇಟ್ಟುಕೊಳ್ಳೋಣ. ಮಹಿಳೆ ಬಗ್ಗೆ ಕೆಟ್ಟಪದಗಳನ್ನ ಬಳಸಿ, ನಾವು ಗೌರವಿಸುವ ನಮ್ಮ ಪ್ರೀತಿಯ ರಾಕಿಂಗ್ ಸ್ಟಾರ್ ಯಶ್ ಬಾಸ್ ಗೆ ಬೇಸರ ತರುವುದು ಬೇಡ. ಅವರು ಯಾವಾಗಲೂ ಹೇಳುವಂತೆ, ಮಹಿಳೆಯನ್ನ ಗೌರವಿಸೋಣ. ಸ್ವಾಸ್ತ್ಯ ಸಮಾಜಕ್ಕೆ ನಾಂದಿ ಹಾಡೋಣ.

ಘಟನೆ ಬಗ್ಗೆ ವಿವರಣೆ

ಘಟನೆ ಬಗ್ಗೆ ವಿವರಣೆ

ಸುದರ್ಶನ್ ಅವ್ರೇ, ನಿಮ್ಮ ವಿಡಿಯೋ ನೋಡಿ, ನಿಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರೋದು ಅಥವಾ ಕಮೆಂಟ್ ಮಾಡಿರೋದು ತಪ್ಪು. ಹೇಗೆ ಅದನ್ನ ತಪ್ಪು ಅಂತ ನಾವು ಓಪ್ಪಿಕೊಳ್ಳುತ್ತಿದ್ದೇವೋ.. ಹಾಗೇ ನಾವು ಆರಾಧಿಸುವ ಅಭಿಮಾನಿಸುವ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಯಶ್ ಬಾಸ್ ಬಗ್ಗೆ, ನೀವು ಅಪಹಾಸ್ಯ ಮಾಡಿ ರಂಜಿಸೋ ಪ್ರಯತ್ನ ಮಾಡಿರೋದು ಅಷ್ಟೇ ದೊಡ್ಡ ತಪ್ಪು. ಹಾಸ್ಯ ಮಾಡುವವರಿಗೆ ವಾಕ್ ಸ್ವಾತಂತ್ರ್ಯಯಿರುವ ಹಾಗೇ ಅಭಿಮಾನಿಗಳಾದ ನಮಗೂ ವಾಕ್ ಸ್ವಾತಂತ್ರವಿದೆ. ನಾವು ಪ್ರೀತಿಸುವವರನ್ನ, ಆರಾಧಿಸುವವರನ್ನ ಮತ್ತೊಬ್ಬರು ಅಪಹಾಸ್ಯ ಮಾಡಿದಾಗ. ಅಥವಾ ಅವಮಾನ ಮಾಡಿದಾಗ ಅಭಿಮಾನಿಗಳಾದ ನಾವು ಸಿಟ್ಟಿಗೇಳುವುದು ಸಹಜ.

ಜವ್ದಾರಿಯಿಂದ ವರ್ತಿಸಿದರೆ ಉತ್ತಮ

ಜವ್ದಾರಿಯಿಂದ ವರ್ತಿಸಿದರೆ ಉತ್ತಮ

ಅದ್ರಲ್ಲೂ ಒಬ್ಬ ಘನತೆ ಇರೋ ದೊಡ್ಡ ವ್ಯಕ್ತಿ ಬಗ್ಗೆ, ಮಾತನಾಡುವಾಗ, ನಿಮ್ಮ ಮಾತಿನದಾಟಿ ಅಷ್ಟೇ ಅಲ್ಲ, ನಿಮ್ಮ ಹಾವಭಾವ ಮತ್ತು ಆಂಗೀಕ ಭಾಷೆಯ ಮೇಲೆ ಹಿಡಿತವರಬೇಕು. ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಶುಭವಾಗ್ಲಿ. ಇನ್ನು ಮುಂದೆ ನೀವು ಯಾವುದೇ ವೇದಿಕೆಗಳಲ್ಲಿ ಹಾಸ್ಯ ಮಾಡುವಾಗ ಈ ವಿಚಾರಗಳನ್ನ ಮನದಲ್ಲಿಟ್ಟುಕೊಂಡು ಜಾಗ್ರತೆಯಿಂದ, ಜವ್ದಾರಿಯಿಂದ ವರ್ತಿಸಿ, ರಂಜಿಸಿದ್ರೆ ಅದು ನಿಮಗೆ ಒಳ್ಳೆಯದು.

ಈ ವಿಚಾರವನ್ನ ಇಲ್ಲಿಗೆ ಬಿಟ್ಟರೆ ಒಳ್ಳೆಯದು

ಈ ವಿಚಾರವನ್ನ ಇಲ್ಲಿಗೆ ಬಿಟ್ಟರೆ ಒಳ್ಳೆಯದು

ಅಭಿಮಾನಿ ಗೆಳೆಯರೇ ಈಗಾಗ್ಲೇ ಸುದರ್ಶನ್ ಅವರ ಮಾಡಿರೋ ವಿಡಿಯೋಗೆ, ನಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿಯಾಗಿದೆ. ಅದಕ್ಕೆ ಸುದರ್ಶನ್ ಅವ್ರು ಕೂಡ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳಿದವರನ್ನ ಕ್ಷಮಿಸಿ, ಬಿಡುವುದು ದೊಡ್ಡ ಗುಣ. ಇದನ್ನ ಮುಂದುವರೆಸುವುದು ಬೇಡ. ಸುದರ್ಶನ್ ಅವ್ರು ಸಹ ಈ ವಿಚಾರವನ್ನ ಇಲ್ಲಿಗೆ ಬಿಟ್ಟರೆ ಒಳ್ಳೆಯದು. "ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಂಘ"

More from Filmibeat

English summary
Kannada actor Yash fans wrote open letter about Sangeetha Bhat Husband incident and clarified this issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X