Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ನಟರ ಟ್ರೋಲ್: ಯಶ್ ಅಭಿಮಾನಿಗಳು ಮಾಡ್ತಿರೋದು ಸರಿಯೇ?
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ. ಅಭಿನಯದಿಂದ ಜನರ ಮನಗೆಲ್ಲುವ, ಜನರ ಮನಸಲ್ಲಿ ಉಳಿವುಯುವ ಎಲ್ಲರೂ ಕಲಾವಿದರೆ, ನಟರೇ. ಆದರೆ ಅದರಲ್ಲಿ ಕೆಲವರು ಮಾತ್ರವೇ ಸ್ಟಾರ್ ನಟರ ಪಟ್ಟದಲ್ಲಿ ಕುಳಿತಿದ್ದಾರೆ. ಉದಾಹರಣೆಗೆ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ರಕ್ಷಿತ್ ಶೆಟ್ಟಿ, ಯಶ್, ಗಣೇಶ್ ಇನ್ನಿತರೆ ಹೆಸರುಗಳನ್ನು ತೆಗೆದುಕೊಳ್ಳಬಹುದು.
Recommended Video

ಈ ನಟರಿಗೆ ಅವರದ್ದೇ ಆದ ಪ್ರತ್ಯೇಕ ಅಭಿಮಾನಿ ಬಳಗ ಇದೆ. ಮಾಸ್ ಜನರು ಇವರ ಅಭಿನಯ ಮೆಚ್ಚಿ ಅಭಿಮಾನಿಗಳಾದ ಮೇಲೆ ಇರವ ವರ್ಚಸ್ಸು ಮತ್ತಷ್ಟು ಹೆಚ್ಚಿದೆ. ಹಾಗಾಗಿ ಇವರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಎನ್ನವುದು ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.
'ಕೆಜಿಎಫ್
2'ಗೆ
ಬೋಲ್ಡ್
ಆದ
ಬಾಲಿವುಡ್
ನಟ
ರಣ್ವೀರ್
ಸಿಂಗ್!
ಅವರವರ ನೆಚ್ಚಿನ ನಟರ ಪರವಾಗಿ ನಿಲ್ಲುವ ಅಭಿಮಾನಿಗಳ ನಡೆಯನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಯಾವುದೇ ವಿಚಾರ ಬಂದಾಗಲೂ, ತಮ್ಮಿಷ್ಟದ ಸ್ಟಾರ್ ಪರವಾಗಿ ಮಾತನಾಡುವುದು, ಅವರನ್ನು ಸಮರ್ಥಿಸಿಕೊಳ್ಳುವುದು ಸರಿಯೇ. ಆದರೆ ಅದ್ಯಾಕೋ ಯಶ್ ಅಭಿಮಾನಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ ಎನ್ನುವುದು ಎದ್ದು ಕಾಣುತ್ತಿದೆ.
ಅಣ್ಣ
ಕೊನೆಯ
ಸಿನಿಮಾ
ಧ್ರುವ
ಸರ್ಜಾ
ಡಬ್ಬಿಂಗ್:
ಪೊಗರಿನ
ಡೈಲಾಗ್
ಏನು?

ಯಶ್ ಫ್ಯಾನ್ಸ್‌ಯಿಂದ ಕನ್ನಡ ಸ್ಟಾರ್ ನಟರ ಟ್ರೋಲ್!
ಸ್ಟಾರ್ ನಟರ ಸಾಕಷ್ಟು ಜನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳ ಅಬ್ಬರ ಜೋರಾಗಿದೆ. ಕೆಜಿಎಫ್ 2 ಚಿತ್ರದ ಯಶಸ್ಸನ್ನು ಯಶ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಆದರೆ ಅದು ಕೊಂಚ ಅತಿರೇಕ ಎನಿಸಿಕೊಂಡಿದೆ. ಯಾಕೆಂದರೆ ಯಶ್ ಯಶಸ್ಸನ್ನು ಸಂಭ್ರಮಿಸುವ ಭರದಲ್ಲಿ ಬೇರೆ ನಟರ ಕಾಲೆಳೆಯುವ ಕೆಲಸ ಆಗುತ್ತಿದೆ. ಹಾಗಾಗಿ ಸುದೀಪ್, ದರ್ಶನ್, ಯಶ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಹುಟ್ಟಿಕೊಂಡಿದೆ.

KGF ಹೆಸರಿಲ್ಲದೆ ಬೇರೆ ಸಿನಿಮಾಗಳು ಇಲ್ಲ ಎನ್ನುವ ಕಮೆಂಟ್!
ಸಾಮಾಜಿಕ ತಾಣದಲ್ಲಿ ಕಮೆಂಟ್ ಮಾಡುತ್ತಿರುವ ಯಶ್ ಅಭಿಮಾನಿಗಳು ಕನ್ನಡದ ಇತರೆ ಚಿಲನಚಿತ್ರಗಳು ಮತ್ತು ಸ್ಟಾರ್ ನಟರ ಅವಹೇಳನ ಮಾಡುತ್ತಿರುವುದು ಕಂಡು ಬಂದಿದೆ. ಇತರೆ ಸ್ಟಾರ್ ನಟರು ತಮ್ಮ ಚಿತ್ರದ ಪ್ರಚಾರಕ್ಕಾಗಿ 'ಕೆಜಿಎಫ್' ಚಿತ್ರದ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ, ಇಲ್ಲವೇ 'ಕೆಜಿಎಫ್' ಚಿತ್ರದ ಯಶಸ್ಸನ್ನು ಹಿಯ್ಯಾಳಿಸುತ್ತಿದ್ದಾರೆ ಎನ್ನುವ ಪೋಸ್ಟ್ ಹಾಕಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ನಮ್ಮವರನ್ನು ನಾವೇ ಟ್ರೋಲ್ ಮಾಡೋದ್ಯಾಕೆ?
ಇನ್ನು ರೀತಿಯಾಗಿ ಫ್ಯಾನ್ ವಾರ್ ಶುರುವಾಗುತ್ತಾ ಇದ್ದಂತೆ, ಇದಕ್ಕೆ ವಿರೋಧವು ವ್ಯಕ್ತವಾಗಿದೆ. ನಮ್ಮ ನಟರನ್ನು ನಾವೇ ವಿರೋಧ ಮಾಡೋದು ತಪ್ಪು, ಒಂದೇ ಇಂಡಸ್ಟ್ರಿಯವರು ಒಂದಾಗಿ ಇದ್ದರೆ ಇನ್ನು ಹೆಚ್ಚಿನದೇನ್ನು ಸಾಧಿಸಬಹುದು ಎಂದು ಸಾಮಾನ್ಯರು ಕಮೆಂಟ್ ಮಾಡಿದ್ದಾರೆ. ಆದರೆ ನಟರನ್ನು ಟ್ರೋಲ್ ಮಾಡುವುದು ಮಾತ್ರ ನಿಂತಿಲ್ಲ.

ದರ್ಶನ್ ರಾಕಿಂಗ್ ಸ್ಟಾರ್ ಆಗಿ ಬಿಟ್ಟರು!
ಇನ್ನು ಯಶ್ ಬಾಕ್ಸಾಫೀಸ್ ಸುಲ್ತಾನ್ ಎನ್ನುವ ಟೈಟಲ್‌ನಿಂದಾಗಿ, ಈ ಫ್ಯಾನ್ ವಾರ್ ಶುರುವಾಗಿದೆ. ಯಶ್ ಅಭಿಮಾನಿಗಳು ಕನ್ನಡದ ಚಿತ್ರರಂಗದ ಬಾಸ್ ಕೂಡ ಯಶ್, ಬಾಕ್ಸಾಫೀಸ್ ಸುಲ್ತಾನ್ ಕೂಡ ಯಶ್ ಒಬ್ಬರೇ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದೇ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಬಾಕ್ಸಾಫಿಸ್ ಸುಲ್ತಾನ ಎನ್ನುವುದು ದರ್ಶನ್ ಅವರಿಗೆ ಇರುವ ಬಿರುದು ಎಂದು ವಾರ್‌ಗೆ ಇಳಿದು ಬಿಟ್ಟಿದ್ದಾರೆ.

ಫ್ಯಾನ್ಸ್ ಬಗ್ಗೆ ನಟರು ಮಾತಾಡುವ ಅವತ್ಯಕತೆ ಇದೆಯೇ!
ಅಭಿಮಾನಿಗಳು ಹೀಗೆ ಎಷ್ಟೇ ಕಿತ್ತಾಡಿಕೊಂಡರೂ, ಇಂತಹ ವಿಚಾರಗಳಲ್ಲಿ ಸ್ಟಾರ್ ನಟರು ಮಾತನಾಡುವುದಿಲ್ಲ. ಆದರೆ ಯಾರು ಇಲ್ಲಿ ಪ್ರಶ್ನಾತೀತರಲ್ಲ. ಹಾಗಾಗಿ ಅಭಿಮಾನಿಗಳು ಅತಿರೇಕಕ್ಕೆ ಹೋದರೆ ನಟರು ಒಂದು ಕರೆ ನೀಡುವುದರಿಂದ ಇದೆಲ್ಲಾ ಸರಿಹೋಗ ಬಹುದು ಎಂದು ಕಾಣುತ್ತೆ. ಆದರೆ ಸ್ಟಾರ್ ನಟರು ಮಾತನಾಡದೇ ಇರುವುದು ಕೂಡ ವಿಪರ್ಯಾಸವೇ.