KGF 2: ದೆಹಲಿಯತ್ತ 'ಯಶ್' ಪಯಣ, ಪ್ಯಾನ್ ಇಂಡಿಯಾ ಪ್ರಚಾರ ಶುರು!
ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ ಈ ಟ್ರೈಲರ್. ಈಗ ಚಿತ್ರತಂಡ ಸೆನ್ಸಾರ್ ಕೂಡ ಪಾಸ್ ಮಾಡಿದ್ದು, ಪ್ರಚಾರದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ.
'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಪ್ಯಾನ್ ಇಂಡಿಯಾ ಚಿತ್ರದ ಪ್ರಚಾರ ಅನಿವಾರ್ಯ. ಚಿತ್ರದ ರಿಲೀಸ್ 14 ದಿನ ಬಾಕಿ ಇರುವಾಗಲೇ, ಪ್ರಚಾರದ ಕೆಲಸಗಳನ್ನು ಚಿತ್ರತಂಡ ಶುರುಮಾಡಿದೆ. ದೇಶದ ಪ್ರಮುಖ ನಗರಗಳಲ್ಲಿ 'ಕೆಜಿಎಫ್ 2' ಚಿತ್ರದ ಪ್ರಚಾರವನ್ನು ಮಾಡಲಿದೆ ಚಿತ್ರತಂಡ.
ಸದ್ಯ ದೆಹಲಿಗೆ ಲಗ್ಗೆ ಇಟ್ಟಿದೆ ಚಿತ್ರತಂಡ. ಯಶ್ ಮತ್ತು ಚಿತ್ರತಂಡ ದೆಹಲಿಗೆ 'ಕೆಜಿಎಫ್ 2' ಪ್ರಚಾರಕ್ಕಾಗಿ ಹೋಗಿದೆ. ಈ ಬಗ್ಗೆ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇವೆ. ಫೈಟ್‌ನಲ್ಲಿ ಇಡೀ ಕೆಜಿಎಫ್ ತಂಡ ಇರುವ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ದೆಹಲಿಯಲ್ಲಿ ರಾಕಿ ಭಾಯ್ ಕ್ರೇಜ್!
ಕನ್ನಡದ ನಟ ಯಶ್ ಜಗತ್ತಿಗೆ ರಾಕಿ ಭಾಯ್ ಅಂತಲೇ ಪರಿಚಯ. ಅಷ್ಟರ ಮಟ್ಟಿಗೆ 'ಕೆಜಿಎಫ್' ಚಿತ್ರದ ಹವಾ ಸೃಷ್ಟಿಯಾಗಿದೆ. ಆ ಕ್ರೇಜ್ 'ಕೆಜಿಎಫ್ 2' ಚಿತ್ರಕ್ಕೂ ಮುಂದುವರೆದಿದೆ. ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಇರುವ ಕಾರಣಕ್ಕೆ ಚಿತ್ರತಂಡ ಅಬ್ಬರದ ಪ್ರಚಾರ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ ದೆಹಲಿಗೆ ಚಿತ್ರತಂಡ ಹಾರಿದೆ. ದೆಹಲಿಯಲ್ಲಿ ಚಿತ್ರತಂಡ ಸುದ್ದಿಗೋಷ್ಟಿ ಮಾಡುವ ಮೂಲಕ ಅಲ್ಲಿಯೂ ಚಿತ್ರದ ಬಗ್ಗೆ ಒಂದಷ್ಟು ವರ್ಚ್ಚಸ್ಸು ಹೆಚ್ಚಸಲಿದೆ ಚಿತ್ರ ತಂಡ.

ಮುಂಬೈನಲ್ಲಿ ನೆಲೆಕಂಡುಕೊಂಡ ಯಶ್!
ನಟ ರಾಕಿಂಗ್ ಸ್ಟಾರ್ 'ಕೆಜಿಎಫ್ ಚಾಪ್ಟರ್ 1' ಚಿತ್ರದ ಮೂಲಕ ಈಗಾಗಲೆ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಯಶ್ ಹವಾ ಜೋರಾಗಿದೆ. ಹಿಂದಿ ಚಿತ್ರರಂಗದಲ್ಲಿ ಯಶ್ ಹೊಸ ಖಾತೆ ತೆರೆದಿದ್ದಾರೆ. ಹಾಗಾಗಿ ಪ್ರೇಕ್ಷಕರು 'ಕೆಜಿಎಫ್ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಾ ಇದ್ದಾರೆ. 'ಕೆಜಿಎಫ್ 2' ಚಿತ್ರದ ಬಳಿಕ ಯಶ್ ಬಗ್ಗೆ ಕ್ರೇಜ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Recommended Video


ಹಿಂದಿಯಲ್ಲಿ ದಾಖಲೆ ಬರೆದ 'ಕೆಜಿಎಫ್ 2' ಟ್ರೈಲರ್!
'ಕೆಜಿಎಫ್ 2' ಚಿತ್ರದ ಮೇಲೆ ಬಾಲಿವುಡ್‌ನಲ್ಲಿ, ದಕ್ಷಿಣ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಹೆಚ್ಚಿನ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಕನ್ನಡದಲ್ಲಿ ಟ್ರೈಲರ್ ಪಡೆದುಕೊಂಡಿದ್ದಕ್ಕಿಂತಲೂ, ಹಿಂದಿಯಲ್ಲಿ ದುಪ್ಪಟ್ಟು ವೀವ್ಸ್ ಪಡೆದುಕೊಂಡಿದೆ. ಹಾಗಾಗಿ 'ಕೆಜಿಎಫ್ 2' ಹಿಂದಿ ಕಲೆಕ್ಷನ್ ಬಾಕ್ಸಾಫೀಸ್ ಶೇಕ್ ಮಾಡಲಿದ್ದು, ದಾಖಲೆ ಬರೆಯಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಯಶ್ ಮಾಡೋದೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ?
'ಕೆಜಿಎಫ್ 2' ಸಿನಿಮಾ ಬಳಿಕ ನಟ ಯಶ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬಾಲಿವುಡ್ ಸಿನಿಮಾಗಳಿಗೆ ಆಫರ್ ಬರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಯಶ್ ಬಾಲಿವುಡ್‌ನಲ್ಲಿ ಸಿನಿಮಾಗಳನ್ನು ಮಾಡುತ್ತಾರೆ ಅಥವಾ ಪ್ಯಾನ್ ಇಂಡಿಯಾ ಚಿತ್ರಗಳನ್ನೇ ಮಾಡಲು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಈಗ ಎರಡು ಚಿತ್ರಗಳನ್ನೂ ಪ್ಯಾನ್ ಇಂಡಿಯಾ ಮಾಡಿ, ಗುರುತಿಸಿಕೊಂಡಿರುವ ಯಶ್ ಮುಂದೆ ಯಾವ ಚಿತ್ರಗಳನ್ನು ಮಾಡಿದರೂ ಕೂಡ, ದೇಶಾದ್ಯಂತ ಪ್ರೇಕ್ಷಕರು ಆ ಸಿನಿಮಾಗಳನ್ನು ನೋಡಲು ಕಾಯುತ್ತಿರುತ್ತಾರೆ.


Click it and Unblock the Notifications











