»   » ಎನ್ನಾರೈ ಸಿನಿ ರಸಿಕರಿಗೂ ಸಿಕ್ತು 'ಗಜಕೇಸರಿ' ಯೋಗ

ಎನ್ನಾರೈ ಸಿನಿ ರಸಿಕರಿಗೂ ಸಿಕ್ತು 'ಗಜಕೇಸರಿ' ಯೋಗ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗಜಕೇಸರಿ' ಚಿತ್ರ ರಾಜ್ಯದಾದ್ಯಂತ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗ ಯಶ್- ಕೃಷ್ಣ ಅವರ ಗಜಕೇಸರಿ ಕಾಣುವ ಯೋಗ ವಿದೇಶದಲ್ಲಿರುವ ಕನ್ನಡಿಗರಿಗೂ ಸಿಗುತ್ತಿದೆ.

ಛಾಯಾಗ್ರಾಹಕ ಕೃಷ್ಣ ಅವರ ಚೊಚ್ಚಲ ನಿರ್ದೇಶನ, ಯಶ್ ಹಾಗೂ ಅಮೂಲ್ಯ ಆವರ ಜೋಡಿ ಬಗ್ಗೆ ವಿಮರ್ಶಕರ ಮೆಚ್ಚುಗೆ ಮಾತುಗಳು ಚಿತ್ರಕ್ಕೆ ಜನ ಹರಿದುಬರುವಂತೆ ಮಾಡುವಲ್ಲ ಸಹಕಾರಿಯಾಗಿವೆ. ಅತ್ಯುತ್ತಮ ಗುಣಮಟ್ಟ ಹಾಗೂ ನಿರೂಪಣೆಯಿಂದಾಗಿ ಚಿತ್ರಕ್ಕೆ ವಿದೇಶದಲ್ಲೂ ಪ್ರದರ್ಶನಕ್ಕಾಗಿ ಬೇಡಿಕೆ ಹುಟ್ಟಿಕೊಂಡಿದೆ.

'ಗಜಕೇಸರಿ' ಚಿತ್ರ ಮೊದಲ ವಾರದಲ್ಲಿ ರು.6 ಕೋಟಿ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ ರು.10 ಕೋಟಿ ಕಲೆಕ್ಷನ್ ಕ್ಲಬ್ ಸೇರುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ. ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ ಅವರು ಐದಕ್ಕೂ ಹೆಚ್ಚು ಡಿಜಿಟಲ್ ಪ್ರಿಂಟ್ ನೊಂದಿಗೆ 9ಕ್ಕೂ ಅಧಿಕ ದೇಶಗಳಲ್ಲಿ ಗಜಕೇಸರಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿದೇಶಗಳಲ್ಲಿ ಗಜಕೇಸರಿ ಯಾವಾಗ, ಎಲ್ಲಿ ಪ್ರದರ್ಶನಗೊಳ್ಳಲಿದೆ ಎಂಬ ವಿವರ ಹೀಗಿದೆ:

Gajakesari Releasing In 8 Foreign Countries

* ಜೂ.15 : ವೆಸ್ಟ್ ಫೀಲ್ಡ್ ಶಾಪಿಂಗ್ ಸೆಂಟರ್, ಲಂಡನ್, ಎಲಿಜಬೆತ್ ಡಾ. ಲಿವರ್ ಪೂಲ್ 3.00 PM
* ಜೂ.15: ಸಿಡ್ನಿ, ಅಸ್ಟ್ರೇಲಿಯಾದಲ್ಲಿ
* ಜೂ. 13/14/15 ರಂದು ಸ್ಯಾನ್ ಹೊಸೆ, ಯುಎಸ್ಎ
* ಜೂ.15: ಸಾಂಕ್ರಾಮೆಂಟೋ, ಯುಎಸ್ಎ
* ಜೂ.21, 22: ಲಾಸ್ ಏಂಜಲೀಸ್.
* ಜೂ.19: ಟೆನ್ನಿಸ್ಸಿ, ಯುಎಸ್ಎ.

ಇದಲ್ಲದೆ ಅಮೆರಿಕದ ಡಲ್ಲಾಸ್, ಆಸ್ಟೀನ್, ಹೋಸ್ಟನ್,ಅಟ್ಲಾಂಟಾ, ನ್ಯೂಯಾರ್ಕ್, ನ್ಯೂಜೆರ್ಸಿ, ವರ್ಜಿನಿಯಾ ಮುಂತಾದ ಕಡೆ ಪ್ರದರ್ಶನಗೊಳ್ಳಲಿದ್ದು, ಯಶ್ ಅವರು ಕೆಲವೆಡೆ ಭಾಗವಹಿಸುವ ಸಾಧ್ಯತೆಗಳಿವೆ.

ಆಸ್ಟ್ರೇಲಿಯಾದಲ್ಲಿ ಸಿಡ್ನಿ ನಂತರ ಮೆಲ್ಬೋರ್ನ್, ಅಡಿಲೇಡ್, ಪರ್ತ್ ನಲ್ಲೂ ಪ್ರದರ್ಶನ ಆಯೋಜನೆಗೊಂಡಿದೆ, ಜರ್ಮನಿಯ ಮ್ಯೂನಿಚ್, ಹ್ಯಾಂಬರ್ಗ್, ಐರ್ಲೆಂಡ್, ಸಿಂಗಪುರ, ಕೆನಡಾ, ಜಪಾನ್, ಹಾಂಕಾಂಗ್ ಮುಂತಾದ ಕಡೆ ಜೂನ್ ತಿಂಗಳ ಅಂತ್ಯ ಅಥವಾ ಜುಲೈ ತಿಂಗಳಿನಲ್ಲಿ ನಿರೀಕ್ಷಿಸಬಹುದು ಎಂದು ಗಜಕೇಸರಿ ಚಿತ್ರದ ವಿತರಕರಾದ ಅಟ್ಲಾಂಟಾ ನಾಗೇಂದ್ರ ಅವರು ತಿಳಿಸಿದ್ದಾರೆ.

English summary
Rocking Star Yash's recent offering Gajakesari is looting the box office by running packed houses across the state. Gajakesari will be releasing in as many as eight countries shortly. The overseas release is being planned with 5 digital prints said cinema distributor Atlanta Nagendra.
Please Wait while comments are loading...