TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ರಾಕಿ ಭಾಯ್ ಮೇಲೆ ಬಿತ್ತು ಪರಭಾಷಿಗರ ಕಣ್ಣು, ಇನ್ಮುಂದೆ ಕಾಲ್ ಶೀಟ್ ಕಷ್ಟ.!
''ಬೇರೆ ಭಾಷೆಗೆ ಹೋಗುವುದಾಗಿದ್ದರೇ ಅದ್ಯಾವಾಗಲೋ ಹೋಗ್ತಿದ್ದೆ'' ಹೀಗಂತ ರಾಕಿಂಗ್ ಸ್ಟಾರ್ ಯಶ್ ಹಲವು ಸಲ ಹೇಳಿದ್ದಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಂದ್ಮೇಲಂತೂ ಯಶ್ ಸ್ಯಾಂಡಲ್ ವುಡ್ ಕೈಯಿಂದ ಜಾರಿ ಹೋಗ್ತಾರಾ ಎಂಬ ಮಾತುಗಳು ಚರ್ಚೆಯಾಗ್ತಿದೆ.
ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದ್ದ ಕೆಜಿಎಫ್ ವರ್ಲ್ಡ್ ವೈಡ್ ಗೆಲವು ಕಂಡಿದೆ. ಇಷ್ಟು ದಿನ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿದ್ದ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ.
'ಕೆಜಿಎಫ್ ಚಾಪ್ಟರ್ 1'ರಲ್ಲಿ ಬಚ್ಚಿಟ್ಟಿದ್ದ ಪಾತ್ರಗಳು ಇವರೇನಾ?
ಇಷ್ಟೆಲ್ಲಾ ಬೆಳವಣಿಗೆ ಆದ್ಮೇಲೂ ಯಶ್ ಗೆ ಬೇರೆ ಭಾಷೆಯಿಂದ ಆಫರ್ ಗಳು ಬರಲಿಲ್ವ ಎಂಬ ಕುತೂಹಲ ಕಾಡುವುದು ಸಹಜ. ಕನ್ನಡ ಬಿಟ್ಟು ಯಾವ ಭಾಷೆಯಲ್ಲಿ ಸಿನಿಮಾ ಮಾಡ್ತಾರೆ, ಯಾವಾಗ ಮಾಡ್ತಾರೆ ಎಂಬ ಪ್ರಶ್ನೆಗಳು ಮೂಡುವುದು ಕೂಡ ಸಹಜ. ಅದಕ್ಕೆಲ್ಲಾ ಸ್ವತಃ ಯಶ್ ಅವರೇ ಉತ್ತರಿಸಿದ್ದಾರೆ. ಮುಂದೆ ಓದಿ..
ಬೇರೆ ಭಾಷೆಯಿಂದ ಆಫರ್ ಬಂದಿದೆ
ಕೆಜಿಎಫ್ ಸಿನಿಮಾ ತೆರೆಕಂಡ ಆರಂಭದಲ್ಲಿ ಯಶ್ ಅವರ ಬಳಿ ಬೇರೆ ಇಂಡಸ್ಟ್ರಿಯಿಂದ ಆಫರ್ ಬಂದಿದ್ಯಾ ಎಂದು ಕೇಳಿದ್ದಕ್ಕೆ ''ಇಲ್ಲ ಅದೆಲ್ಲ ಸುಳ್ಳು'' ಎಂದಿದ್ದರು. ಇದೀಗ, ಕೆಜಿಎಫ್ ಸಿನಿಮಾ 25 ದಿನ ಪೂರೈಸಿದೆ. ಈ ಸಂತಸದಲ್ಲಿ ಕೆಜಿಎಫ್ ತಂಡ ಸಂತೋಷ ಕೂಟವನ್ನ ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ ಯಶ್ ''ಬೇರೆ ಭಾಷೆಯಿಂದ ಆಫರ್ ಬಂದಿರೋದು ನಿಜ'' ಎಂದು ಬಹಿರಂಗಪಡಿಸಿದ್ದಾರೆ.
ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಿದ ವಿಜಯ್ ಕಿರಗಂದೂರ್
ಸದ್ಯಕ್ಕೆ ಚಾಪ್ಟರ್ 2 ಮಾತ್ರ
''ಸದ್ಯಕ್ಕೆ ನಾವು ಚಾಪ್ಟರ್ 2 ಮಾತ್ರ ಹೆಚ್ಚು ಗಮನ ಕೊಡ್ತಿದ್ದೀವಿ. ಈ ಚಿತ್ರವನ್ನ ಇನ್ನು ದೊಡ್ಡ ಮಟ್ಟಕ್ಕೆ ಯಶಸ್ಸು ಗೊಳಿಸಬೇಕು ಎಂಬ ಒತ್ತಡ ನಮ್ಮ ಮೇಲಿದೆ. ಹಾಗಾಗಿ, ಚಾಪ್ಟರ್ 2 ತಯಾರಿಯಲ್ಲಿ ನಮ್ಮ ತಂಡ ಇದೆ. ಇದಾದ ಬಳಿಕ ನೋಡೋಣ ಅಂತ ನಾನು ಹೇಳ್ತಿದ್ದೀನಿ'' ಎಂದು ಯಶ್ ಹೇಳಿಕೊಂಡರು.
'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?
ಓಕೆ ಮಾಡೋಣ ಅಂತಿದ್ದಾರೆ
''ಚಾಪ್ಟರ್ 2 ಮುಗಿಸಿ, ಅದಾದ ಬಳಿಕ ಮಾಡೋಣ ಅಂತಾನೂ ಕೆಲವರು ಹೇಳ್ತಿದ್ದಾರೆ. ಬಟ್, ಈಗಲೇ ಕಮಿಟ್ ಆಗೋದು ಬೇಡ ಅಂತ ಸುಮ್ಮನಾಗಿದ್ದೀನಿ. ಈಗ ಬರಿ ಕೆಜಿಎಫ್ ಚಾಪ್ಟರ್ 2 ಮಾತ್ರ ನಮ್ಮ ಗುರಿ'' ಎಂದು ರಾಜಾಹುಲಿ ಅಂತೆ ಕಂತೆಗಳಿಗೆ ಬ್ರೇಕ್ ಹಾಕಿದ್ದಾರೆ.
ತೆಲುಗಿನ ಈ ಸಿನಿಮಾ 'ಕೆಜಿಎಫ್' ರೀತಿ ಇದೆ ಎಂದ ವರ್ಮಾ.!
ಚಾಪ್ಟರ್ 2 ಹೆಚ್ಚಿದ ಒತ್ತಡ
ಕೆಜಿಎಫ್ ಚಾಪ್ಟರ್ 2 ಬೇಗ ಮಾಡಿ ಅಂತ ನಮ್ಮ ಚಿತ್ರತಂಡಕ್ಕಿಂತ ಇತರೆ ಸಂಸ್ಥೆಗಳು, ನಿರ್ಮಾಪಕರು ಒತ್ತಡ ಹೇರುತ್ತಿದ್ದಾರೆ. ಅದರಲ್ಲೂ ಹಿಂದಿಯವರಂತೂ ಈ ಬಗ್ಗೆ ಮೀಟಿಂಗ್ ಕೂಡ ಇಟ್ಟಿದ್ದಾರೆ. ಆದಷ್ಟೂ ಬೇಗ ಚಾಪ್ಟರ್ 2 ಆಗಲಿ ಎಂಬ ಕಾತುರದಲ್ಲಿದ್ದಾರೆ ಎಂದು ಕೆಜಿಎಫ್ ಸ್ಟಾರ್ ಬಹಿರಂಗಪಡಿಸಿದ್ದಾರೆ.