For Quick Alerts
  ALLOW NOTIFICATIONS  
  For Daily Alerts

  'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್ ಸಿನಿಮಾಗೆ ಇಡೀ ಭಾರತೀಯ ಚಿತ್ರರಂಗವೆ ಫಿದಾ ಆಗಿದೆ. ಕೆಜಿಎಫ್ ಮೊದಲ ಭಾಗದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಯಶ್ ಮತ್ತು ಪ್ರಶಾಂತ್ ನೀಲ್ ಈಗ ಕೆಜಿಎಫ್-2 ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಯಶ್ ನೀಡಿದ ದುಬಾರಿ ಗಿಫ್ಟ್ ನೋಡಿ ಖುಷಿ ಪಟ್ಟ ಪ್ರಶಾಂತ್ ನೀಲ್ | Prashanth Neel | Yash | KGF2 | Gift

  ಅದ್ಭುತ ಕಲಾವಿದ ಮತ್ತು ತಂತ್ರಜ್ಞನ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ನೋಡಲು ಭಾರತೀಯ ಸಿನಿ ಅಭಿಮಾನಿಗಳು ಕಾತರರಾಗಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಕೊನೆಯ ಹಂತದಲ್ಲಿದೆ. ಈ ನಡುವೆ ಈಗ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಏನದು? ಮುಂದೆ ಓದಿ..

  'ಕೆಜಿಎಫ್-2' ಬಿಗ್ ಅಪ್ ಡೇಟ್: ದಸರಾ ಹಬ್ಬಕ್ಕೆ ಸಿನಿಮಾ ತೆರೆಗೆ?'ಕೆಜಿಎಫ್-2' ಬಿಗ್ ಅಪ್ ಡೇಟ್: ದಸರಾ ಹಬ್ಬಕ್ಕೆ ಸಿನಿಮಾ ತೆರೆಗೆ?

  ಪ್ರಶಾಂತ್ ನೀಲ್ ಗೆ ಯಶ್ ದುಬಾರಿ ಉಡುಗೊರೆ

  ಪ್ರಶಾಂತ್ ನೀಲ್ ಗೆ ಯಶ್ ದುಬಾರಿ ಉಡುಗೊರೆ

  ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರತಂಡ ಮರೆಯಲಾಗದಂತಹ ಸಿನಿಮಾ ನೀಡಿರುವ ಪ್ರಾಶಾಂತ್ ನೀಲ್ ಗೆ ಯಶ್ ಅದ್ಭುತ ಗಿಫ್ಟ್ ಅನ್ನು ನೀಡಿದ್ದಾರೆ. ಯಶ್ ಗೆ ಬೆಲೆ ಕಟ್ಟಲಾಗದ ಕೆಜಿಎಫ್ ಸಿನಿಮಾವನ್ನು ಉಡುಗೊರೆ ನೀಡಿರುವ ಪ್ರಶಾಂತ್ ನೀಲ್ ಗೆ ಯಶ್ ಕೂಡ ಸುಂದರವಾದ ಗಿಫ್ಟ್ ಮಾಡಿದ್ದಾರೆ.

  'ನಮ್ಮ ಮನೆಯ ದೊಡ್ಡ ಮಗು' ಎಂದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಯಶ್'ನಮ್ಮ ಮನೆಯ ದೊಡ್ಡ ಮಗು' ಎಂದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಯಶ್

  ಮೊಬೈಲ್ ಗಿಫ್ಟ್ ಮಾಡಿದ ಯಶ್

  ಮೊಬೈಲ್ ಗಿಫ್ಟ್ ಮಾಡಿದ ಯಶ್

  ನಿರ್ದೇಶಕ ಪ್ರಶಾಂತ್ ನೀಲ್ ಗೆ ಯಶ್ ದುಬಾರಿ ಬೆಲೆಯ ಮೊಬೈಲ್ ಅನ್ನು ಗಿಫ್ಟಾಗಿ ನೀಡಿದ್ದಾರೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ ಎಕ್ಸ್ ವೈ ಫೋಲ್ಡಿಂಗ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್.

  ಪ್ರಶಾಂತ್ ನೀಲ್ ಹೇಳಿದ್ದೇನು?

  ಪ್ರಶಾಂತ್ ನೀಲ್ ಹೇಳಿದ್ದೇನು?

  "ರಾಕಿ ಭಾಯ್ ಯಶ್ ನಿಮಗೆ ಸರ್ಪ್ರೈಸ್ ನೀಡಿದಾಗ..ಸ್ವೀಟೆಸ್ಟ್ ಗೆಶ್ಚರ್"..ಧನ್ಯವಾದಗಳು ಯಶ್ ಎಂದು ಬರೆದು ಕೊಂಡಿದ್ದಾರೆ. ಇದರ ಜೊತೆಗೆ ಯಶ್ ಗಿಫ್ಟ್ ಮಾಡಿರುವ ಮೊಬೈಲ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ರಾಕಿ ಭಾಯ್ ಗಿಫ್ಟ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

  'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ

  ರೀನಾ ಮೊದಲ ಫೋಟೋ ಹಂಚಿಕೊಂಡ ನಿರ್ದೇಶಕ

  ರೀನಾ ಮೊದಲ ಫೋಟೋ ಹಂಚಿಕೊಂಡ ನಿರ್ದೇಶಕ

  ನಿರ್ದೇಶಕ ಪ್ರಶಾಂತ್ ನೀಲ್ ಯಶ್ ನೀಡಿರುವ ಉಡುಗೊರೆ ಫೋಟೋವನ್ನು ಹಂಚಿಕೊಳ್ಳುವ ಜೊತೆಗೆ ರೀನಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದ್ದೂರಿಯಾಗಿ ಹಾಕಿರುವ ಸೆಟ್ ನಲ್ಲಿ ನಟಿ ಶ್ರೀನಿಧಿ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ಪತ್ನಿ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರೀನಾ ಕೆಂಪು ಬಣ್ಣದ ಬಾರ್ಡರ್ ಇರುವ ಬಿಳಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಯಾವುದೊ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೋ ಇದಾಗಿದೆ.

  English summary
  Actor Yash gifted costly mobile to KGF-2 Director Prashanth Neel. Director Prashanth Neel shared a Reena photo from GGf-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X