ಕೆಜಿಎಫ್ 2 ಹಿಂದಿ ಡಬ್‌: ರಾಖಿ ಭಾಯ್ ಪಾತ್ರಕ್ಕೆ ಧ್ವನಿ ಯಾರದ್ದು?

ಕೆಜಿಎಫ್ 2 ಸಿನಿಮಾ ಕೆಲವೇ ತಿಂಗಳ ಒಳಗಾಗಿ ಬಿಡುಗಡೆ ಆಗಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ.

ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ವರ್ಷನ್‌ಗೆ ಸಖತ್ ಬೇಡಿಕೆ ಇದ್ದು, ಕೋಟ್ಯಂತರ ಹಣಕ್ಕೆ ಕೆಜಿಎಫ್ 2 ನ ಇತರ ಭಾಷೆಗಳ ಸಿನಿಮಾ ಪ್ರದರ್ಶನ ಹಕ್ಕು ಮಾರಾಟವಾಗಿದೆ.

ಕೆಜಿಎಫ್ 2 ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಖ್ಯಾತ ನಿರ್ದೇಶಕ, ನಟ ಫರ್ಹಾನ್ ಖಾನ್ ಮಾಲೀಕತ್ವದ ಎಕ್ಸೆಲ್ ಎಂಟರ್ಟೈನ್‌ಮೆಂಟ್ ತೆಗೆದುಕೊಂಡಿದೆ. ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಪ್ರಾರಂಭವಾಗಲಿದ್ದು, ಹಿಂದಿ ಭಾಷೆಯಲ್ಲಿ ಯಶ್ ಪಾತ್ರಕ್ಕೆ ಧ್ವನಿ ಯಾರು ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಹಿಂದಿ ಕೆಜಿಎಫ್ 2 ಗೆ ಯಶ್ ರದ್ದೇ ಧ್ವನಿ

ಹಿಂದಿ ಕೆಜಿಎಫ್ 2 ಗೆ ಯಶ್ ರದ್ದೇ ಧ್ವನಿ

ಕೆಜಿಎಫ್ ಮೊದಲ ಚಾಪ್ಟರ್ ಸಹ ಹಿಂದಿಗೆ ಡಬ್ ಆಗಿತ್ತು. ಆ ಸಿನಿಮಾದಲ್ಲಿ ರಾಖಿ ಭಾಯ್ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದ್ದರು. ಆದರೆ ಈ ಬಾರಿ ಕೆಜಿಎಫ್ 2 ಸಿನಿಮಾಕ್ಕೆ ಸ್ವತಃ ಯಶ್ ಅವರೇ ಧ್ವನಿ ನೀಡಲಿದ್ದಾರೆ

ತೆಲುಗು-ತಮಿಳು ಸಿನಿಮಾಕ್ಕೆ ಯಶ್ ಧ್ವನಿ ನೀಡಲಿದ್ದಾರೆ

ತೆಲುಗು-ತಮಿಳು ಸಿನಿಮಾಕ್ಕೆ ಯಶ್ ಧ್ವನಿ ನೀಡಲಿದ್ದಾರೆ

ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಿಗೂ ನಟ ಯಶ್ ಅವರೇ ಧ್ವನಿ ನೀಡುವ ಸಾಧ್ಯತೆ ಇದೆ. ತೆಲುಗು, ತಮಿಳು ಭಾಷೆಗಳು ಯಶ್ ಅವರಿಗೆ ಸುಲಲಿತವಾಗಿ ಬರುತ್ತವೆ. ಮಲಯಾಳಂ ಭಾಷೆ ಯಶ್‌ ಗೆ ಬಾರದು. ಹಾಗಾಗಿ ತೆಲುಗು-ತಮಿಳು ಭಾಷೆಗೆ ಮಾತ್ರ ಧ್ವನಿ ನೀಡಿ, ಮಲಯಾಳಂ ಸಿನಿಮಾಕ್ಕೆ ಬೇರೆಯವರಿಂದ ಧ್ವನಿ ಕೊಡಿಸುವ ಸಾಧ್ಯತೆಯೂ ಇದೆ.

ದಾಖಲೆ ಬರೆದಿದ್ದ ಕೆಜಿಎಫ್ ಮೊದಲ ಚಾಫ್ಟರ್

ದಾಖಲೆ ಬರೆದಿದ್ದ ಕೆಜಿಎಫ್ ಮೊದಲ ಚಾಫ್ಟರ್

ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿಯನ್ನು ಬಿಡುಗಡೆ ಆಗಿ ದಾಖಲೆ ಬರೆದಿತ್ತು. ಬಾಹುಬಲಿ ಹಾಗೂ ಇತರ ಕೆಲವು ಸಿನಿಮಾಗಳ ನಂತರ ಹಿಂದಿಗೆ ಡಬ್ ಆಗಿ ಅತಿ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತದ ಸಿನಿಮಾ ಎನಿಸಿಕೊಂಡಿತು ಕೆಜಿಎಫ್ 1.

Recommended Video

ದರ್ಶನ್ ಹಾದಿಯನ್ನೇ ಹಿಡಿದ ಯಶ್ | Filmibeat Kannada
ಜುಲೈ 16 ಕ್ಕೆ ಸಿನಿಮಾ ಬಿಡುಗಡೆ

ಜುಲೈ 16 ಕ್ಕೆ ಸಿನಿಮಾ ಬಿಡುಗಡೆ

ಕೆಜಿಎಫ್ 2 ಸಿನಿಮಾವು ಜುಲೈ 16ಕ್ಕೆ ಬಿಡುಗಡೆ ಆಗಲಿದೆ. ಅದೇ ದಿನವೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇನ್ನೂ ಹಲವು ಖ್ಯಾತ ನಟರು ನಟಿಸಿದ್ದಾರೆ.

More from Filmibeat

English summary
Actor Yash giving voice to Hindi KGF 2 movie for his character. KGF 2 movie releasing on July 16.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X