For Quick Alerts
    ALLOW NOTIFICATIONS  
    For Daily Alerts

    ಬಾಡಿಗೆ ಗಲಾಟೆ : ವಾಸ್ತವಾಂಶದ ಬಗ್ಗೆ ಮಾತನಾಡ್ತಾರಂತೆ ಯಶ್

    By Pavithra
    |

    ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರ ತಾಯಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. ಈ ಬಗ್ಗೆ ನಿನ್ನೆಯಿಂದಲೂ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.

    ಒಂದಿಷ್ಟು ಜನರು ಯಶ್ ಪರವಾಗಿ ಮಾತನಾಡಿದರೆ ಮತ್ತಷ್ಟು ಜನ ಯಶ್ ನೆಡೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನ ಸುಮ್ಮನೆ ಕೇಳಿಸಿಕೊಂಡ ರಾಕಿಂಗ್ ಸ್ಟಾರ್ ಈ ಬಗ್ಗೆ ತಮ್ಮನ್ನ ಪ್ರೀತಿ ಮಾಡುವ ಹಾಗೂ ವಿರೋಧ ಮಾಡುವವರ ಮುಂದೆ ಮಾತನಾಡಲಿದ್ದಾರೆ.

    3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ

    ನಿನ್ನೆ ಆಗಿರುವ ಈ ಬೆಳವಣಿಗೆ ಬಗ್ಗೆ ನಾನೇ ಫೇಸ್ ಬುಕ್ ಲೈವ್ ಮಾಡುತ್ತೇನೆ ಎಂದು ಯಶ್ ತಿಳಿಸಿದ್ದಾರೆ. "ಗೆಳೆಯರೇ, ನನ್ನ ಬಗೆಗಿನ ಕೆಲವು ವಿದ್ಯಮಾನಗಳ ಕುರಿತಂತೆ ಹರಿದಾಡುತ್ತಿರುವ ಪರ ಮತ್ತು ವಿರೋಧದ ಕಾಮೆಂಟ್/ಚರ್ಚೆಗಳ ಬಗ್ಗೆ ವಾಸ್ತವಾಂಶಗಳೊಂದಿಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಇಂದು ಸಂಜೆ 4 ಗಂಟೆಗೆ ನಿಮ್ಮ ಮುಂದೆ ಫೇಸ್ ಬುಕ್ ಲೈವ್ ನಲ್ಲಿ ಬರುತ್ತಿದ್ದೇನೆ. ನನ್ನನ್ನು ಪ್ರೀತಿಸುವವರು ಮಾತ್ರವಲ್ಲದೆ ವಿರೋಧಿಸುವವರಿಗೂ ಸ್ವಾಗತವಿದೆ". ಹೀಗಂತ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ ಯಶ್

    ಬಾಡಿಗೆ ಮನೆ ವಿಚಾರವಾಗಿ ಕೋರ್ಟ್ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿಕೊಡಿ ಎಂದಿದೆ. ಯಶ್ 2010 ರಿಂದ ನಟ ಯಶ್ ಮತ್ತು ಕುಟುಂಬ ಬಾಡಿಗೆಗೆ ವಾಸವಾಗಿದ್ದಾರೆ. ಬಾಡಿಗೆ ಹಣ ಕೊಡುತ್ತಿಲ್ಲ ಹಾಗೂ ಮನೆ ಖಾಲಿ ಮಾಡಲು ಹೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ಮನೆಯ ಮಾಲೀಕರು ಪೋಲಿಸರಿಗೆ ದೂರು ನೀಡಿದ್ದರು.

    ಈ ಬಗ್ಗೆ ಎಲ್ಲಿಯೂ ಮಾತನಾಡದ ಯಶ್ ಇದೇ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದು ಈ ವಿವಾದದ ಬಗ್ಗೆ ಮಾತನಾಡುತ್ತಿದ್ದಾರೆ. ಯಶ್ ಏನು ಹೇಳುತ್ತಾರೆ ಎನ್ನುವುದು ತೀರ ಕುತೂಹಲಕ್ಕೆ ಕಾರಣವಾಗಿದೆ.

    English summary
    Bengaluru city civil court orders actor yash to pay rental dues and vacate the house at katriguppe within three months. Actor Yash going to talked about home rent controversy in Facebook live at 4pm ಬೆಂಗಳೂರು

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X