ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಕಿ ಬಾಯ್
Recommended Video
2019ರ ಸೈಮಾ ಪ್ರಶಸ್ತಿ ಕಾರ್ಯಕ್ರಮ ನಿನ್ನೆ ಕತಾರ್ ನಲ್ಲಿ ನಡೆದಿದೆ. ಸೌತ್ ಇಂಡಿಯಾದ ನಾಲ್ಕು ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಯಶ್ ಪಡೆದುಕೊಂಡಿದ್ದಾರೆ. 'ಕೆಜಿಎಫ್'ನ ರಾಕಿ ಬಾಯ್ ಪಾತ್ರಕ್ಕಾಗಿ ಈ ಪ್ರಶಸ್ತಿ ಅವರಿಗೆ ಲಭಿಸಿದೆ. ಮುಂಬೈ ಡಾನ್ ರಾಕಿಯಾಗಿ ಅದ್ಬುತವಾಗಿ ನಟಿಸಿದ್ದ ಯಶ್ ಪ್ರಶಸ್ತಿಯ ಅಧಿಪತಿ ಆಗಿದ್ದಾರೆ.
ಈ ಮೂಲಕ ಯಶ್ ಪಾಲಿಗೆ ಮತ್ತೊಂದು ಸೈಮಾ ಪ್ರಶಸ್ತಿ ಸಿಕ್ಕಿದೆ. ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾಗೆ ಮೊದಲ ಬಾರಿಗೆ ಯಶ್ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಕನ್ನಡದ 'ಕೆಜಿಎಫ್' ಸಿನಿಮಾ ಇಡೀ ಭಾರತದ ತುಂಬ ದೊಡ್ಡ ಹೆಸರು ಮಾಡಿತ್ತು. ಕನ್ನಡ ಸಿನಿಮಾದ ಶಕ್ತಿಯನ್ನು ಇತರ ಭಾಷೆಗಳಿಗೆ ತೋರಿಸಿತ್ತು. ಇಂತಹ ಸಿನಿಮಾಗೆ ಈಗ ಪ್ರಶಸ್ತಿಗಳು ಸಹ ಸಿಕ್ಕಿದೆ.

ಯಶ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ನಿರ್ದೇಶಕ ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅಂದಹಾಗೆ, ಇತ್ತೀಚಿಗಷ್ಟೆ ಎರಡು ರಾಷ್ಟ್ರ ಪ್ರಶಸ್ತಿ ಪಡೆದ 'ಕೆಜಿಎಫ್' ಸಿನಿಮಾ ಸೈಮಾ ಪ್ರಶಸ್ತಿಯಲ್ಲಿಯೂ ಕಮಾಲ್ ಮಾಡಿದೆ


Click it and Unblock the Notifications











