For Quick Alerts
  ALLOW NOTIFICATIONS  
  For Daily Alerts

  'GQ ಇಂಡಿಯಾ': ಭಾರತದ 50 ಪ್ರಭಾವ ಬೀರುವ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಯಶ್

  |

  'GQ ಇಂಡಿಯಾ' ಭಾರತದ 50 ಪ್ರಭಾವ ಬೀರುವ ವ್ಯಕ್ತಿಗಳ ಪಟ್ಟಿಯಲ್ಲಿ ನಟ ಯಶ್ ಸ್ಥಾನ ಪಡೆದಿದ್ದಾರೆ. ಮುಂಬೈನಲ್ಲಿ 'GQ ಇಂಡಿಯಾ' ಯಶ್ ರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

  ಬೇರೆ ಬೇರೆ ರಂಗದಲ್ಲಿ ಸಾಧನೆ ಮಾಡಿ, ಇತರರ ಮೇಲೆ ಪ್ರಭಾವ ಬೀರುವ ಭಾರತದ 50 ಮಂದಿಯನ್ನು 'GQ ಇಂಡಿಯಾ' ಗುರುತಿಸುತ್ತದೆ. ಈ ವರ್ಷ ಈ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಥಾನ ಪಡೆದಿದ್ದಾರೆ. ನಿನ್ನೆ ಈ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಈ ಪ್ರಶಸ್ತಿಯನ್ನು ವಿತರಣೆ ಮಾಡಿದ್ದಾರೆ.

  ರಾಕಿಂಗ್ ಸ್ಟಾರ್ ಜೊತೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ರಾಕಿಂಗ್ ಸ್ಟಾರ್ ಜೊತೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್

  'ಕೆಜಿಎಫ್' ಸಿನಿಮಾ ನಂತರ ಯಶ್ ಎಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ನ್ಯಾಷನಲ್ ಸ್ಟಾರ್ ಗೆ ಪ್ರಶಸ್ತಿಗಳು, ಪ್ರಶಂಸೆಗಳು ಹೆಚ್ಚಾಗುತ್ತಿದೆ. 'GQ ಇಂಡಿಯಾ' ಪ್ರಶಸ್ತಿ ಪಡೆದ ಖುಷಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಶ್ ಹಂಚಿಕೊಂಡಿದ್ದಾರೆ.

  'GQ ಇಂಡಿಯಾ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಗೌರವದಾಯಕವಾಗಿದೆ. ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಧನ್ಯವಾದ. ಅಭಿಮಾನಿಗಳಿಗೆ, ನಮಗೆ ಪ್ರೋತ್ಸಾಹ ನೀಡಿದವರಿಗೆ ಥ್ಯಾಂಕ್ಯು ಹೇಳಿದ್ದಾರೆ.

  ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್

  ಇದೇ ಕಾರ್ಯಕ್ರಮದಲ್ಲಿ 'ರಾಬರ್ಟ್' ಸಿನಿಮಾದ ನಾಯಕಿ ಆಶಾ ಭಟ್ ಕೂಡ ಭಾಗಿಯಾಗಿದ್ದರು. ಯಶ್ ಭೇಟಿ ಮಾಡಿದ ಸಂತಸ ಹಂಚಿಕೊಂಡರು.

  English summary
  Kannada actor Yash got place in GQ's 50 most influential young indians list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X