ಭಯಬಿದ್ದು ಅಮೆರಿಕದಿಂದ ಓಡಿ ಬಂದಿದ್ದೇಕೆ ರಾಕಿಂಗ್ ಸ್ಟಾರ್?
Recommended Video
ನ್ಯಾಷನಲ್ ಸ್ಟಾರ್ ಆಗಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೂ ರಾಕಿ ಭಾಯ್, ಸ್ಯಾಂಡಲ್ ವುಡ್ ನ ಬೆಳದಿಂಗಳ ಬಾಲೆ ಎಂದೆ ಖ್ಯಾತಿಗಳಿಸಿರುವ ಸುಮನ್ ನಗರ್ಕರ್ ಅಭಿನಯದ 'ಬಬ್ರೂ' ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಮಿಸಿದ್ದರು.
ಅಮೆರಿಕದಲ್ಲಿ ನೆಲೆಸಿರುವ ಸುಮನ್ ನಗರ್ಕರ್ ಅಭಿನಯದ ಬಬ್ರೂ ಸಿನಿಮಾದ ಟ್ರೈಲರ್ ನೋಡಿ ಯಶ್ ಇಷ್ಟ ಪಟ್ಟಿದ್ದಾರೆ. ಇದೆ ಸಮಯದಲ್ಲಿ ಅಮೆರಿಕ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಗಜಕೇಸರಿ ಸಿನಿಮಾ ರಿಲೀಸ್ ಸಮಯದಲ್ಲಿ ಅಂದರೆ ಸುಮಾರು 5 ವರ್ಷದ ಹಿಂದೆ ಯಶ್ ಸಿನಿಮಾ ವಿಚಾರವಾಗಿ ಅಮೆರಿಕಗೆ ಹೋದಾಗ ಅಲ್ಲಿ ಆದ ಅನುಭವನ್ನು ಬಿಚ್ಚಿಟ್ಟಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಸಿನಿಮಾ ಇಂಟ್ರೆಸ್ಟ್ ಹೇಗಿರುತ್ತೆ, ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಯಶ್ ಅಮೆರಿಕಗೆ ಹೋಗಿದ್ದರಂತೆ. ಅಲ್ಲಿ ಜನರ ಅಭಿರುಚಿ ನೋಡಿ ಭಯಬಿದ್ದು ವಾಪಸ್ ಬಂದಿದ್ದರಂತೆ.

ಯುಎಸ್ ನಲ್ಲಿ ಸಿನಿಮಾ ನೋಡುವವರ ಕಥೆಯೆ ಮಜವಾಗಿರುತ್ತಂತೆ. ಶಾರುಖ್ ಖಾನ್ ಅಭಿನಯದ 'ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ' ಸಿನಿಮಾ ನೋಡಿ ಫಿದಾ ಆಗಿ ಯು ಎಸ್ ನಲ್ಲಿರುವ ಹುಡುಗನನ್ನು ಮದುವೆಯಾದ ಜೋಡಿಯ ಕಥೆಯನ್ನು ಹಂಚಿಕೊಂಡರು. ಅಮೇರಿಕಾದಲ್ಲಿ ಮನೆಯ ಕೆಲಸವನ್ನು ಅವರೆ ಮಾಡಬೇಕು. ಕೆಲಸಕ್ಕೆ ಆಳುಕಾಳು ಯಾರು ಇರುವುದಿಲ್ಲ. ಯುಎಸ್ ಗೆ ಹೋದವರೆಲ್ಲರು ಅವರವರ ಕೆಲಸ ಅವರೆ ಮಾಡಿಕೊಳ್ಳಬೇಕು. ಆದ್ರಿಲ್ಲಿ ಅಸಿಸ್ಟಂಟ್ ಗೆ ಒಬ್ಬ ಅಸಿಸ್ಟಂಟ್ ಇರುತ್ತಾರೆ.
ಅಲ್ಲಿಯ ಜೀವನ ನೋಡಿ ನಾನು ಭಯಬಿದ್ದು ಓಡಿ ಬಂದೆ ಎಂದು ಹೇಳಿದ್ದಾರೆ. ಅಲ್ಲದೆ ಯುಎಸ್ ನಲ್ಲಿ ಕನ್ನಡದ ಹೆಸರಲ್ಲಿ ಬ್ಯುಸಿನೆಸ್ ನಡೆಯುತ್ತಿದೆ, ಎಂದು ವಿದೇಶದಲ್ಲಿ ಕನ್ನಡ ಚಿತ್ರ ಪ್ರದರ್ಶನ ಮಾಡಬೇಕಾದರೆ ಎಷ್ಟೆಲ್ಲ ಕಷ್ಟವಿತ್ತು ಎನ್ನುವುದನ್ನು ಹೇಳಿದ್ದಾರೆ. ಆದ್ರೀಗ ಪರಿಸ್ಥಿತಿ ತುಂಬ ಸುದಾರಿಸಿದೆ ಎಂದು ಹೇಳಿದ್ದಾರೆ.


Click it and Unblock the Notifications











