ಹಾಲಿವುಡ್ ವೇದಿಕೆ ಮೇಲೆ 'ಟಾಕ್ಸಿಕ್'; ಲಾಸ್ ವೇಗಾಸ್‌ನಲ್ಲಿ ನಡೆಯುವ ಸಿನಿಮಾಕಾನ್ ಸಮಾವೇಶಕ್ಕೆ ಯಶ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಭಾರತ ಮಾತ್ರವಲ್ಲ ಪ್ರಪಂಚದ ಸಿನಿರಸಿಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರಗಳನ್ನು ನಿರ್ಮಾಣ ಮಾಡಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿನಿಮಾಗಳನ್ನು ಕಟ್ಟಿಕೊಡಲಾಗ್ತಿದೆ. ಸದ್ದಿಲ್ಲದೇ ಸಿನಿಮಾ ಪ್ರಚಾರ ಸಹ ಆರಂಭವಾಗಿದೆ. ಸದ್ಯ ಲಾಸ್‌ ವೇಗಾಸ್‌ನಲ್ಲಿ ನಡೆಯುವ ಸಿನಿಮಾಕಾನ್ ಕಾರ್ಯಕ್ರಮದಲ್ಲಿ ರಾಯ, ರಾವಣರ ದರ್ಬಾರ್ ನಡೆಯಲಿದೆ.

ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಲಾಸ್‌ ವೇಗಾಸ್‌ ವಿಮಾನ ಏರಿದ್ದಾರೆ ಎನ್ನಲಾಗ್ತಿದೆ. ಸೀಸರ್ಸ್‌ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಏಪ್ರಿಲ್ 13 ರಂದು ಯಶ್ ಹಾಜರಾಗುತ್ತಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಎಕ್ಸ್‌ಕ್ಲೂಸಿವ್ ಟೀಸರ್ ಪ್ರದರ್ಶನವಾಗಲಿದೆ. ಯಶ್ ಕೂಡ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ ಎನ್ನಲಾಗ್ತಿದೆ. ಬಲ್ಲ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

Yash Heads to CinemaCon Toxic and Ramayana Teasers to Create Buzz

2011ರಲ್ಲಿ ಸಿನಿಮಾಕಾನ್ ಸಮಾವೇಶ ಮೊದಲ ಬಾರಿ ನಡೆದಿತ್ತು. ಪ್ರಪಂಚದ ಹಲವು ದೇಶಗಳ ಪ್ರೇಕ್ಷಕರನ್ನು ಕಾರ್ಯಕ್ರಮ ಆಕರ್ಷಿಸುತ್ತಿದೆ. ಹಾಲಿವುಡ್‌ನ ಸಾಕಷ್ಟು ಚಿತ್ರ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಗಳು ಈ ಸಮಾವೇಶದಲ್ಲಿ ಭಾಗಿ ಆಗುತ್ತವೆ. ತಮ್ಮು ಮುಂದಿನ ಸಿನಿಮಾಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ, ಬಿಡುಗಡಗೆ ಸಿದ್ಧವಾಗಿರುವ ಸಿನಿಮಾಗಳ ಟೀಸರ್, ಟ್ರೈಲರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಾರೆ. ಸಿನಿಮಾ ನಿರ್ಮಾಣ, ಬಿಡುಗಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಪರಿಚಯಿಸುವ ಸಣ್ಣ ಝಲಕ್ ಅದು. ಚಿತ್ರದಲ್ಲಿ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಭಾರತದಲ್ಲಿ ಟೀಸರ್ ಬಿಡುಗಡೆಗೂ ಮುನ್ನ ಲಾಸ್ ಏಂಜಲೀಸ್‌ನಲ್ಲಿ ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಲಾಗಿತ್ತು. ರಣ್‌ಬೀರ್ ಕಪೂರ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕಾರ್ಯಕ್ರಮಗದಲ್ಲಿ ಭಾಗಿ ಆಗಿ ಮಾತನಾಡಿದ್ದರು. ಸಿನಿಮಾ ಬಗ್ಗೆ ಅಲ್ಲಿನ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೇ ರೀತಿ ರಾವಣ ಪಾತ್ರ ಪರಿಚಯಿಸುವ ಟೀಸರ್ ಕೂಡ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸಿನಿಮಾಕಾನ್‌ ವೇದಿಕೆಯಲ್ಲೇ ಟೀಸರ್ ಪ್ರದರ್ಶನವಾದರೂ ಅಚ್ಚರಿಪಡಬೇಕಿಲ್ಲ.

'ಟಾಕ್ಸಿಕ್' ಹಾಗೂ 'ರಾಮಾಯಣ' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಚಿತ್ರತಂಡಗಳು ಹೇಳ್ತಾ ಬರ್ತಿವೆ. ಅದಕ್ಕೆ ತಕ್ಕಂತೆ ಪ್ರಮೋಷನ್, ಮಾರ್ಕೆಟಿಂಗ್, ರಿಲೀಸ್ ಪ್ಲ್ಯಾನ್ ನಡೀತಿದೆ. ಇದೀಗ ಹಾಲಿವುಡ್ ವೇದಿಕೆಗಳಲ್ಲಿ ಚಿತ್ರಗಳ ಪ್ರಚಾರ ನಡೀತಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಎರಡೂ ಸಿನಿಮಾಗಳನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಮಾರ್ಚ್ 19ಕ್ಕೆ ತೆರೆಗೆ ಬರಬೇಕಿದ್ದ 'ಟಾಕ್ಸಿಕ್' ಸಿನಿಮಾ ಬಿಡುಗಡೆ ತಡವಾಗ್ತಿದೆ. ಜೂನ್ 4ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್, ಸಾಂಗ್ಸ್ ಅನಾವರಣ ಆಗಲಿದೆ.

ಗೀತು ಮೋಹನ್ ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ 'ಟಾಕ್ಸಿಕ್'. ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್‌ನಲ್ಲಿ ಯಶ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.

ಮತ್ತೊಂದು ಕಡೆ 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಕಾವ್ಯವನ್ನು ಎರಡು ಭಾಗಗಳಾಗಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಮೊದಲ ಭಾಗ ಈ ದೀಪಾವಳಿಗೆ ತೆರೆಗೆ ಬರಲಿದೆ. ಚಿತ್ರದಲ್ಲಿ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈಜೋಡಿಸಿದ್ದಾರೆ.

More from Filmibeat

Read more about: ramayana toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X